ಸಚಿವ ಮುನಿರತ್ನ (Munirathna) ಅವರು ನಟಿ ರಮ್ಯಾ (Actress) ಅವರಿಗೆ ಟಾಂಗ್ ಕೊಟ್ಟಿರುವ ಘಟನೆಯೊಂದು (Incident) ನಡೆದಿದೆ. ಕೆಸಿಸಿ (KCC) ಕಾರ್ಯಕ್ರಮದಲ್ಲಿ ಮುನಿರತ್ನ ಅವರು ಭಾಗವಹಿಸಿದ್ದರು. ಈ ಸಂದರ್ಭ ಚಿತ್ರರಂಗದ ಮಂದಿ ಎಲ್ಲರೂ ಭಾಗವಹಿಸಿದ್ದರು. ಇಲ್ಲಿ ರಮ್ಯಾ ಅವರೂ ಇದ್ದದ್ದು ವಿಶೇಷ. ಇಂಡಸ್ಟ್ರಿಯ (Industry) ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಭಾಗವಹಿಸದ ನಟಿ ಈಗ ಮಾತ್ರ ಸ್ಯಾಂಡಲ್ವುಡ್ನಲ್ಲಿ (Sandalwood) ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ ಅವರು ಕೂಡಾ ಭಾಗವಹಿಸಿದ್ದು ರಮ್ಯಾ ಬಗ್ಗೆ ಏನಂದ್ರು ಗೊತ್ತಾ?
ಇಡೀ ಭಾರತದಲ್ಲಿ ಯಾವ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಇದನ್ನು ಮಾತ್ರ ಮುಂದುವರಿಸುತ್ತಿರಿ. ಯಾಕೆಂದರೆ ಬಹಳ ಕಷ್ಟಕರವಾದ ಕೆಲಸ ಇದು. ಇಷ್ಟು ಜನರನ್ನು ಒಟ್ಟಿಗೆ ಸೇರಿಸುವುದು, ಒಟ್ಟಿಗೆ ನೋಡುವುದು ಸುಲಭವಲ್ಲ. ಶಿವಣ್ಣ, ಗಣೇಶ್, ಡಾಲಿ ಧನಂಜಯ್ ಅವರು, ಜಗ್ಗೇಶ್ ಅವರನ್ನು ನೋಡಲು ಸಿಕ್ಕಿದ್ದಾರೆ.
ಸ್ಯಾಟ್ಲೈಟ್ನಲ್ಲಿ ಹುಡುಕಿದ್ರೂ ಸಿಗಲ್ಲ
ಸ್ಯಾಟ್ಲೈಟ್ ಮೂಲಕ ಹುಡುಕಿದರೂ ಸಿಗದವರು ಇಲ್ಲಿ ಸಿಕ್ಕಿದ್ದಾರೆ. ಯಾವ ಕ್ಯಾಮೆರಾದಲ್ಲಿ ಹಾಕಿದರೂ ಸಿಗಲ್ಲ ಅವರನ್ನು ಇಲ್ಲಿ ನೋಡಲು ಅವಕಾಶ ಸಿಕ್ಕಿದೆ. ಅದು ಸುದೀಪ್ ಅವರಿಂದ. ಅವರು ಯಾರು ಅಂತ ಕೇಳಿ. ಅಲ್ಲಿದ್ದಾರೆ ನೋಡಿ. ಯಾವ ಕ್ಯಾಮೆರಾಗೆ ಸಿಗದವರು ಇಲ್ಲಿ ಸಿಗುತ್ತಿದ್ದೀರಿ. ನಾನು ಎಷ್ಟು ಸಲ ಟ್ರೈ ಮಾಡಿದರೂ ನಿಮಗೆ ಫೋನ್ ಸಿಕ್ಕಿಲ್ಲ ಎಂದಿದ್ದಾರೆ.
ಶುಭ ಹಾರೈಸಿದ ಸಚಿವರು
ಎಲ್ಲರಿಗೂ ಒಳ್ಳೆಯದಾಗಲಿ. ಸಿನಿಮಾ ಬಿಡುಗಡೆ ಮಾಡೋ ಸಂದರ್ಭದಲ್ಲಿ, ಥಿಯೇಟರ್ ಸಿಗದೇ ಇದ್ದಾಗ ಚೇಂಬರ್ ಹತ್ತಿರ ಸೇರುವುದಲ್ಲದೆ ಇಲ್ಲಿ ಕ್ರಿಕೆಟ್ಗಾಗಿ ಒಟ್ಟಿಗೆ ಸೇರಿದ್ಧೀರಿ. ಇದು ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Sandalwood Actresses: ಸ್ಯಾಂಡಲ್ವುಡ್ ನಟಿಯರ AI ಫೋಟೋಸ್ ಹೀಗಿದೆ ನೋಡಿ
ಜಗ್ಗೇಶ್ ಕುಳಿತಿದ್ದಲ್ಲಿ ಬಂದು ಮಾತನಾಡಿಸಿದ ರಮ್ಯಾ
ನಟಿ ರಮ್ಯಾ ಅವರು ಜಗ್ಗೇಶ್ ಕುಳಿತಿದ್ದಲ್ಲಿ ಬಂದು ಅವರ ಪಕ್ಕವೇ ಇದ್ದ ಸೀಟ್ನಲ್ಲಿ ಕುಳಿತುಕೊಂಡು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಜಗ್ಗೇಶ್ ಅವರ ಕೈ ಹಿಡಿದು ಹ್ಯಾಂಡ್ ಶೇಕ್ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋವನ್ನು ಜಗ್ಗೇಶ್ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಅಂದು ಸಿನಿಮಾದಿಂದ ರಮ್ಯಾ ಹೊರಬಂದಾಗ ಜಗ್ಗೇಶ್ ಜೊತೆ ಜಗಳ ಕೂಡಾ ಆಗಿತ್ತು.
KCC (ಕರ್ನಾಟಕ ಚಲನಚಿತ್ರ ಕಪ್) ಮೂರನೇ ಸೀಸನ್ ಫೆ. 11 ಮತ್ತು 12 ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಇದರ ಭಾಗವಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ನಟ ಸುದೀಪ್ , ಚಿತ್ರರಂಗದ ಇತರ ಗಣ್ಯರಿಗೆ ಆಹ್ವಾನ ನೀಡಿದ್ದರು. ಈ ವೇದಿಕೆಯಲ್ಲಿ ಎಲ್ಲರೂ ಒಟ್ಟಾಗಿದ್ದರು.
ಯಾರೆಲ್ಲ ಬಂದಿದ್ದರು?
ಸಚಿವ ಡಾ.ಕೆ. ಸುಧಾಕರ್, ಸಚಿವ ಮುನಿರತ್ನ, ನಟ ಶಿವರಾಜ್‌ಕುಮಾರ್, ಸುದೀಪ್, ಜಗ್ಗೇಶ್, ಗಣೇಶ್, ಧ್ರುವ ಸರ್ಜಾ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸುಧಾರಾಣಿ, ರಮ್ಯಾ ಹಾಗೂ ಇನ್ನಿತರರು ಆಗಮಿಸಿದ್ದರು. ಈ ವೇಳೆ ಜಗ್ಗೇಶ್ ಹಾಗೂ ರಮ್ಯಾ ಪಕ್ಕ ಪಕ್ಕ ಕುಳಿತದ್ದು, ಮಾತನಾಡಿದ್ದು, ನಗಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಅಪರೂಪದ ದೃಶ್ಯ ನೋಡಿ ಸಿನಿಪ್ರಿಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ಪ್ರೊಡಕ್ಷನ್ ಹೌಸ್ ಆರಂಭಿಸಿರುವ ರಮ್ಯಾ ಅದರ ಮೂಲಕ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಾಣ ಮಾಡುತ್ತಿದ್ಧಾರೆ. ಜೊತೆಗೆ ಡಾಲಿ ಧನಂಜಯ್ ಜೊತೆಗೆ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ