• Home
  • »
  • News
  • »
  • entertainment
  • »
  • Manoj Tiwari: 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ, ಬೇಬಿ ಶವರ್ ವಿಡಿಯೋ ನೋಡಿ

Manoj Tiwari: 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ, ಬೇಬಿ ಶವರ್ ವಿಡಿಯೋ ನೋಡಿ

51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ

51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ

ನಟ ಕಮ್ ರಾಜಕಾರಣಿ ಮನೋಜ್ ತಿವಾರಿ ಅವರು 51 ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ. ತಾವು ತಂದೆಯಾಗುತ್ತಿರುವುದರಿಂದ ತುಂಬಾ ಖುಷಿಯಾಗಿದ್ದಾರೆ. ಈ ಶುಭ ಸುದ್ದಿಯನ್ನು, ಸ್ವತಃ ಭೋಜ್‍ಪುರಿ ನಟ ಸ್ವತಃ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • News18 Kannada
  • Last Updated :
  • Varanasi, India
  • Share this:

    ನಟ ಕಮ್ ರಾಜಕಾರಣಿ ಮನೋಜ್ ತಿವಾರಿ (Manoj Tiwari) ಅವರು 51 ನೇ ವಯಸ್ಸಿನಲ್ಲಿ (51 years) ತಂದೆಯಾಗುತ್ತಿದ್ದಾರೆ (Father). ತಾವು ತಂದೆಯಾಗುತ್ತಿರುವುದರಿಂದ ತುಂಬಾ ಖುಷಿಯಾಗಿದ್ದಾರೆ. ಈ ಶುಭ ಸುದ್ದಿಯನ್ನು, ಸ್ವತಃ ಭೋಜ್‍ಪುರಿ ನಟ ಸ್ವತಃ ಇನ್‍ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿದ್ದಾರೆ. ಮನೋಜ್ ತಿವಾರಿ ಹಾಗೂ ಸುರಭಿ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಮೂರನೇ ಮಗುವಿ ನಿರೀಕ್ಷಯಲ್ಲಿದ್ದಾರೆ. ಮೂರನೇ ಮಗು ಆಗುತ್ತಿದ್ದರು. ಮೊದಲು ಮಗು ಬರುತ್ತಿರುವ ರೀತಿ ಮನೆಯಲ್ಲಿ ಸಂಭ್ರಮ ಮೂಡಿತ್ತು. ಇತ್ತೀಚೆಗೆ, ಮನೋಜ್ ತಿವಾರಿ ಅವರು, ಸುರಭಿ ತಿವಾರಿಯ ಬೇಬಿ ಶವರ್ (Baby Shower) ಅನ್ನು ಆಯೋಜಿಸಿದ್ದರು. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ವಿಶ್ ಮಾಡಿದ್ದಾರೆ.


    51ನೇ ವಯಸ್ಸಿನಲ್ಲಿ ಅಪ್ಪ
    ಬೇಗ ಮದುವೆ ಆಗಿ. ಬೇಗ ಮಕ್ಕಳನ್ನು ಮಾಡಿಕೊಳ್ಳಿ. ವಯಸ್ಸಾದ ಮೇಲೆ ಮಕ್ಕಳಾಗಲ್ಲ ಎಂಬ ಲೆಕ್ಕಾಚಾರವನ್ನು ನಟ ಮನೋಜ್ ತಿವಾರಿ ತಲೆ ಕೆಳಗೆ ಮಾಡಿದ್ದಾರೆ. ತಮ್ಮ 51 ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ. ಅದು ಮೂರನೇ ಮಗುವಿಗೆ ಅಪ್ಪ ಆಗುತ್ತಿದ್ದು, ತುಂಬಾ ಸಂಭ್ರಮದಲ್ಲಿದ್ದಾರೆ ಭೋಜ್‍ಪುರಿ ನಟ.


    ಸುರಭಿ ತಿವಾರಿಯ ಬೇಬಿ ಶವರ್
    ಮನೋಜ್ ತಿವಾರಿ ಅವರು ತಾವು ತಂದೆಯಾಗುತ್ತಿರುವ ಖುಷಿಯಲ್ಲಿ ಪತ್ನಿ ಸುರಭಿ ತಿವಾರಿಯ ಬೇಬಿ ಶವರ್ ಏರ್ಪಡಿಸಿದ್ದರು. ತುಂಬಾ ಗ್ರ್ಯಾಂಡ್ ಆಗಿ ಕಾರ್ಯಕ್ರಮ ನಡೆದಿದೆ. ಸಮಾರಂಭಕ್ಕಾಗಿ ಮನೋಜ್ ಅವರು ಬೀಜ್ ಕುರ್ತಾ ಸೆಟ್ ಧರಿಸಿದ್ದರು. ಮತ್ತು ಅವರ ಪತ್ನಿ ಸುರಭಿ ಅವರು ಕೆಂಪು ಉಡುಪಿನಲ್ಲಿ ಸುಂದರವಾಗಿ ಕಾಣ್ತಾ ಇದ್ರು.


    ಇದನ್ನೂ ಓದಿ: Actress Vaishnavi Gowda: 'ಅಗ್ನಿಸಾಕ್ಷಿ'ಯಾಗಿ ಮದುವೆ ಆಗಲು ರೆಡಿಯಾದ್ರಾ ವೈಷ್ಣವಿ? ಹುಡುಗ ಇವರೇನಾ? 


    ಎರಡನೇ ಪತ್ನಿ ಸುರಭಿ ತಿವಾರಿ
    ಸುರಭಿ ತಿವಾರಿ ಅವರು ಮನೋಜ್ ತಿವಾರಿ ಅವರ ಎರಡನೇ ಪತ್ನಿ. 2020 ರಲ್ಲಿ ಮನೋಜ್ ತಿವಾರಿ ಮತ್ತು ಸುರಭಿ ಅವರಿಗೆ ಮೊದಲನೇ ಮಗು ಆಗಿದೆ. ಅದು ಹೆಣ್ಣು ಮಗಳು. ಇದಕ್ಕೂ ಮೊದಲು, ಅವರು 1999 ರಲ್ಲಿ ರಾಣಿ ತಿವಾರಿ ಅವರನ್ನು ವಿವಾಹವಾದರು. ಅವರಿಗೆ ರಿತಿ ಎಂಬ ಮಗಳಿದ್ದಾಳೆ. 2011 ರಲ್ಲಿ, 11 ವರ್ಷಗಳ ಮದುವೆಯ ನಂತರ, ಮನೋಜ್ ಮತ್ತು ರಾಣಿ 2012 ರಲ್ಲಿ ಬೇರೆಯಾಗಲು ನಿರ್ಧರಿಸಿದರು.


    ಮನೋಜ್ ಕುಮಾರ್ ತಿವಾರಿ ಭಾರತೀಯ ರಾಜಕಾರಣಿ, ಗಾಯಕ ಮತ್ತು ನಟ. 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೋರಖ್‍ಪುರ ಲೋಕಸಭೆಯಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಯೋಗಿ ಆದಿತ್ಯನಾಥ್ ವಿರುದ್ಧ ಸೋತರು.


    politician manoj tiwari, manoj tiwari to become dad at 51, surabhi tiwari baby shower, 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ, ಬೇಬಿ ಶವರ್ ವಿಡಿಯೋ ನೋಡಿ, kannada news, karnataka news,
    51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ


    ಮತ್ತೊಮ್ಮೆ, ಅವರು 2014 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು ಗೆದ್ದರು. ಅವರು 2016 ರಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು. 2017 ರ ಎಂಸಿಡಿ ಚುನಾವಣೆಯಲ್ಲಿ ಪಕ್ಷವು ದಾಖಲೆಯ ವಿಜಯವನ್ನು ದಾಖಲಿಸಿದಾಗ ಅವರು ದೆಹಲಿಯಲ್ಲಿ ಬಿಜೆಪಿ ಸಂಘಟನೆಯ ಮುಖ್ಯಸ್ಥರಾಗಿದ್ದರು. ಅವರು ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಯಾಗಿದ್ದರು.


    ಇದನ್ನೂ ಓದಿ: Kannadathi: ಹರ್ಷನ ಮುಂದೆ ವಿಲ್ ಸತ್ಯ ಬಯಲು, ತಲೆ ಕೆಳಗಾದ ವರು ಲೆಕ್ಕಾಚಾರ


    ಮನೋಜ್ ಕುಮಾರ್ ತಿವಾರಿ ಅವರು, ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಮೊದಲು, ಅವರು ಭೋಜ್‍ಪುರಿ ಚಲನಚಿತ್ರೋದ್ಯಮದಲ್ಲಿ ಗಾಯಕ ಮತ್ತು ನಟರಾಗಿದ್ದರು. 2003 ರಲ್ಲಿ, ಅವರು ಸಸುರ ಬಡ ಪೈಸಾವಾಲಾ ಚಿತ್ರದಲ್ಲಿ ಒಂದು ಪಾತ್ರವನ್ನು ಮಾಡಿದ್ರು.2010 ರಲ್ಲಿ, ತಿವಾರಿ ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್‍ನ ನಾಲ್ಕನೇ ಸೀಸನ್‍ನಲ್ಲಿ ಸ್ಪರ್ಧಿಯಾಗಿದ್ದರು

    Published by:Savitha Savitha
    First published: