Drugs Mafia: ಇನ್ಮುಂದೆ ಫಿಲ್ಮ್ ಸೆಟ್​ನಲ್ಲಿ ಪೊಲೀಸ್ ಕಣ್ಗಾವಲು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Police On Film Sets: ಫಿಲ್ಮ್ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಬಳಕೆ ಸದ್ದು ಮಾಡುತ್ತಿದ್ದಂತೆ ಶೂಟಿಂಗ್ ಸೆಟ್​ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಮಾಲಿವುಡ್​ನ (Mollywood) ಯಂಗ್ ಸ್ಟಾರ್ಸ್ ಆಗಿರುವಂತಹ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಜೊತೆ ಇನ್ನು ಮುಂದೆ ಸಿನಿಮಾ  (Cinema) ಮಾಡುವುದಿಲ್ಲ ಎಂದು ಕೇರಳ (Kerala) ಚಲನಚಿತ್ರ ನಿರ್ಮಾಪಕದ ಸಂಘ ಹೇಳಿದ ಈಗಾಗಲೇ ಎರಡು ವಾರಗಳಾಗಿವೆ. ಇದೀಗ ಈ ಸಂಬಂಧ ಕೇರಳದಲ್ಲಿ ಫಿಲ್ಮ್​ಸೆಟ್​ಗಳಲ್ಲಿ ಪೊಲೀಸ್ (Police) ಕಣ್ಗಾವಲು ಇರಿಸಲಾಗಿದೆ. ಚಿತ್ರರಂಗದಲ್ಲಿ ಯುವ ತಲೆಮಾರು ಡ್ರಗ್ಸ್​ಗೆ  (Drugs) ಅಡಿಕ್ಟ್ ಆಗಿದೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ ಇಂಥದ್ದೊಂದು ಸುದ್ದಿ ಹೊರಬಿದ್ದಿದೆ.


ಫಿಲ್ಮ್ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಬಳಕೆ ಕುರಿತು ವಿವಾದ ಹೆಚ್ಚಾಗುತ್ತಿದ್ದು ಈ ಬಗ್ಗೆ ಸೆಲೆಬ್ರಿಟಿಗಳು ಕೂಡಾ ಇತ್ತೀಚೆಗೆ ಕಮೆಂಟ್ ಮಾಡಿದ್ದಾರೆ. ಆದರೆ ಯಾರೂ ಕೂಡಾ ಪ್ರಕರಣದ ಕುರಿತು ವಿಶೇಷವಾಗಿ ಮಾತನಾಡಿಲ್ಲ. ಆದರೆ ಕೆಲವು ನಟರು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಕೊಟ್ಟ ಹೇಳಿಕೆಗಳಿಂದಾಗಿ ಹೆಚ್ಚಿನ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದೀಗ ಬಂದರು ನಗರ ಕೊಚ್ಚಿಯಲ್ಲಿ ನಡೆಯುವ ಎಲ್ಲ ಸಿನಿಮಾಗಳ ಶೂಟಿಂಗ್ ಸೆಟ್​ನಲ್ಲಿ ಪೊಲೀಸ್ ಕಣ್ಗಾವಲು ಇರುವುದಾಗಿ ಕೇರಳ ಪೊಲೀಸ್ ತಿಳಿಸಿದ್ದಾರೆ.


ನಟ ಹಾಗೂ ಮಲಯಾಳಂ ಮೂವಿ ಆರ್ಟಿಸ್ಟ್ ಅಸೋಸಿಯೇಷನ್​ನ ಕಮಿಟಿ ಸದಸ್ಯ ಬಾಬುರಾಜ್ ಅವರು ಈಗ ಆಗುತ್ತಿರುವ ವಿವಾದದ ಬಗ್ಗೆ ಮೊದಲ ಹೇಳಿಕೆ ಕೊಟ್ಟಿದ್ದರು. ಮೂವಿ ವರ್ಲ್ಡ್ ಮೀಡಿಯಾ ಜೊತೆ ಮಾತನಾಡಿದ ಅವರು ಮಲಯಾಳಂ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಹಾಗೂ ಪೊಲೀಸರಲ್ಲಿ ಡ್ರಗ್ಸ್ ಬಳಸುವವರ ಕಂಪ್ಲೀಟ್ ಲಿಸ್ಟ್ ಇರುವುದಾಗಿ ಅವರು ಹೇಳಿಕೆ ಕೊಟ್ಟಿದ್ದರು.


ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಲು ನಿರ್ಧರಿಸಿದ ದೀದಿ ಸರ್ಕಾರ!


ಡ್ರಗ್ಸ್ ಡೀಲಿಂಗ್​ನಲ್ಲಿ ಸಿಕ್ಕಿ ಹಾಕಿಕೊಂಡವರು ಅದನ್ನು ಯಾರಿಗಾಗಿ ಒಯ್ಯುತ್ತಿದ್ದರು ಎನ್ನುವುದನ್ನು ಹೇಳಿದ್ದಾರೆ. ನಮ್ಮ ಆಫೀಸ್​ನಲ್ಲಿ ಲಿಸ್ಟ್ ಇದೆ. ಈ ರೀತಿ ಒಮ್ಮೆ ಒಬ್ಬ ಸಿಕ್ಕಿಬಿದ್ದು ಪೊಲೀಸರು ಖ್ಯಾತ ನಟ ಕಾರನ್ನು ಚೇಸ್ ಮಾಡಿದ್ದಾರೆ. ಆ ಕಾರನ್ನು ಅಂದು ನಿಲ್ಲಿಸಿ ಚೆಕ್ ಮಾಡಿದ್ದರೆ ಈಗ ಮಲಯಾಳಂ ಸಿನಿಮಾ ಇಂಡಸ್ಟ್ರಿ ಇರುತ್ತಿರಲಿಲ್ಲ. ಇದು ಸತ್ಯ ಎಂದಿದ್ದರು.


posing as patient chandigarh health secy finds doctor chemist nexus pushing expensive drugs at hospital
ಈಗ ಹಲ್ಲುಗಳು, ಮುಂದೊಂದು ದಿನ ಮೂಳೆ ಧೂಳು. ಅದರಿಂದ ಮಾದಕ ವ್ಯಸನಿಗಳಾಗಬಾರದು ಎಂದು ಟೈನಿ ಟಾಮ್ ಹೇಳಿದರು. ಅವರ ಹೇಳಿಕೆ ವೈರಲ್ ಆಗಿದೆ.


ಆದರೆ ಬಾಬು ರಾಜ್ ಅವರ ಹೇಳಿಕೆ ನಿರಾಕರಿಸಿದ ಅಮ್ಮ ಜನರಲ್ ಸೆಕ್ರೆಟರಿ ಇಂದವೇಲ ಬಾಬು ಅವರು ಮನೋರಮಾ ಆನ್​ಲೈನ್​ಗೆ ಹೇಳಿಕೆ ಕೊಟ್ಟಿದ್ದಾರೆ. ನನ್ನಲ್ಲಿ ಯಾವುದೇ ಲಿಸ್ಟ್ ಇಲ್ಲ. ಯಾವುದೇ ನಿರ್ಮಾಪಕರು ಲಿಖಿತ ದೂರು ಕೊಟ್ಟಿಲ್ಲ. ಈ ವಿಚಾರವನ್ನು ಅಮ್ಮ ಕೂಡಾ ಚರ್ಚೆ ಮಾಡಿಲ್ಲ. ಆದರೆ ಇದೊಂದು ಬಹಿರಂಗ ಸತ್ಯ ಎಂದಿದ್ದಾರೆ.




ನಾವು ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದರೊಂದಿಗೆ ಸಹಕರಿಸುತ್ತೇವೆ. ಅಮ್ಮ ನಿಯಮಗಳ ಪ್ರಕಾರ ಕೆಲಸ ಮಾಡುವಾಗ ಯಾವುದೇ ಮಾದಕ ವಸ್ತು ಬಳಸುವಂತಿಲ್ಲ. ಸರ್ವಾಜನಿಕವಾಗಿ ಮಿಸ್ ಬಿಹೇವ್ ಮಾಡುವಂತಿಲ್ಲ ಎನ್ನುವುದೂ ಒಳಗೊಂಡಿದೆ. ಹೊಸ ಸದಸ್ಯತನ ಕೊಡುವಾಗಲೂ ಡ್ರಗ್ಸ್ ಸ್ಕ್ರೀನಿಂಗ್ ಅನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ ಎಂದಿದ್ದಾರೆ.


ಕೆಲವು ದಿನಗಳ ಹಿಂದೆ ಅಮ್ಮ ಸಂಘದ ಎಕ್ಸಿಕ್ಯೂಟಿವ್ ಸದಸ್ಯ ಟೈನಿ ಟಾಮ್ ಅವರು ಕೂಡಾ ಈ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಕೇರಳ ಯುನಿವರ್ಸಿಟಿ ಯೂತ್ ಫೆಸ್ಟಿವಲ್​ನಲ್ಲಿ ಮಾತನಾಡಿ ತಮ್ಮ ಮಗನಿಗೆ ನಟಿಸಲು ಅವಕಾಶ ಇದ್ದರೂ ಡ್ರಗ್ಸ್ ಬಳಕೆಯ ಭಯದಿಂದ ಅವನ್ನು ಸಿನಿಮಾಗೆ ಬಿಡಲಿಲ್ಲ ಎಂದಿದ್ದರು.

First published: