ಎಷ್ಟೋ ಬಾರಿ ಈ ಚಲನಚಿತ್ರಗಳು (Films) ಜನರ ಮೇಲೆ ತುಂಬಾನೇ ಪ್ರಭಾವನನ್ನು ಬೀರುತ್ತವೆ. ಎಷ್ಟೋ ಜನರು ಜೀವನದಲ್ಲಿ ತುಂಬಾನೇ ಹತಾಶೆಯಾಗಿರುವಾಗ ಕೆಲವು ಸಿನೆಮಾದಲ್ಲಿರುವ ಜೀವನದ ಬಗ್ಗೆ ಇರುವ ಹಾಡುಗಳು ಹೊಸ ಹುರುಪನ್ನು ಮತ್ತು ಉತ್ಸಾಹವನ್ನು ತುಂಬಿರುತ್ತವೆ. ಹೌದು, ಚಲನಚಿತ್ರಗಳು ಜನರ ಮೇಲೆ ಪ್ರಭಾವ ಬೀರುತ್ತದೆ ಅನ್ನೋದು ಅಕ್ಷರಶಃ ನಿಜ. ಆದರೆ ಚಿತ್ರದಲ್ಲಿ ತೋರಿಸಿದ ಯಾವ ದೃಶ್ಯದಿಂದ ನಾವು ಹೇಗೆ ಸ್ಪೂರ್ತಿ (Motivation) ಪಡೆಯಬೇಕು ಅನ್ನೋದು ಸಿನಿ ಪ್ರೇಕ್ಷಕರು ತಿಳಿದಿರಬೇಕಷ್ಟೆ. ಕನ್ನಡದಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಆಕಸ್ಮಿಕದಂತಹ ಚಿತ್ರಗಳನ್ನು ನೋಡಿ ಎಷ್ಟೋ ಜನರು ಅಣ್ಣಾವ್ರು ಮಾಡಿದ ಪಾತ್ರದ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಇದೆ.
ತಮ್ಮ ಚಿತ್ರಗಳು ಜನರ ಮೇಲೆ ಒಳ್ಳೆಯ ಪ್ರಭಾವ ಬೀರುತ್ತಿದೆ ಮತ್ತು ಜೀವನದಲ್ಲಿರುವ ಹತಾಶೆಯನ್ನು ಹೋಗಲಾಡಿಸಿ ಹೊಸ ಹುರುಪು ಮತ್ತು ಚೈತನ್ಯ ತುಂಬುತ್ತಿದೆ ಎಂದರೆ ಒಬ್ಬ ನಟನಿಗೆ ಅದಕ್ಕಿಂತ ಬೇರೆ ಖುಷಿ ಏನಿರುತ್ತದೆ ನೀವೇ ಹೇಳಿ? ಇಲ್ಲಿಯೂ ಸಹ ಇದೇ ರೀತಿಯ ಒಳ್ಳೆಯ ಪ್ರಭಾವ ಪೊಲೀಸ್ ಕಾನ್ಸ್ಟೆಬಲ್ ವೊಬ್ಬರ ಆರೋಗ್ಯವನ್ನೇ ಸುಧಾರಿಸಿದೆ ನೋಡಿ.
‘ಕಸ್ಟಡಿ’ ಚಿತ್ರದ ಪ್ರಚಾರದ ಭಾಗವಾಗಿ ಪೊಲೀಸರನ್ನು ಭೇಟಿಯಾದ ನಟ
ವೆಂಕಟ್ ಪ್ರಭು ನಿರ್ದೇಶನದ 'ಕಸ್ಟಡಿ' ಚಿತ್ರದ ಬಿಡುಗಡೆಗೆ ತೆಲುಗು ಸ್ಟಾರ್ ನಾಗಚೈತನ್ಯ ಈಗ ಸಜ್ಜಾಗಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ, ಚಾಯ್ ಹೈದರಾಬಾದ್ ನಲ್ಲಿರುವ ಪೊಲೀಸ್ ಕಾನ್ಸ್ಟೇಬಲ್ ಅವರುಗಳನ್ನು ಭೇಟಿಯಾದರು ಮತ್ತು ಅವರ ಮುಂಬರುವ ಚಿತ್ರದಲ್ಲಿ ಕಾನ್ಸ್ಟೆಬಲ್ ಪಾತ್ರವನ್ನು ನಿರ್ವಹಿಸಿದ್ದರ ಬಗ್ಗೆ ಅವರೊಂದಿಗೆ ಸಂವಹನ ನಡೆಸಿದರು.
ಇದನ್ನೂ ಓದಿ: ರಾಕಿ ಭಾಯ್ ರಾಧಿಕಾ ಅವರನ್ನು ಭೇಟಿಯಾದಾಗ ಹೀಗಿತ್ತು! ನಟಿ ಶೇರ್ ಮಾಡಿದ್ರು ಕ್ಯೂಟ್ ವಿಡಿಯೋ
ಸಾಮಾನ್ಯವಾಗಿ ಹೆಚ್ಚಿನ ನಾಯಕ ನಟರು ಈ ಚಲನಚಿತ್ರಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಪಾತ್ರವನ್ನು ನಿರ್ವಹಿಸಲು ಆದ್ಯತೆ ನೀಡುವುದರಿಂದ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ ನಾಗಚೈತನ್ಯ ಅವರನ್ನು ಒಬ್ಬ ಪೊಲೀಸ್ ಕಾನ್ಸ್ಟೇಬಲ್ ತುಂಬಾನೇ ಹೊಗಳಿದರು. ಅವರು ನಾಗಚೈತನ್ಯ ಅವರಿಗೆ "ನಾನು ಚಿತ್ರದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಇದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಅಪರೂಪದ ಪಾತ್ರವಾಗಿದೆ. ಕಾನ್ಸ್ಟೇಬಲ್ ಗಳು ತರಬೇತಿ ಮುಗಿಸಿಕೊಂಡು ಈಗ ತಾನೇ ಪೋಸ್ಟಿಂಗ್ ಗೆ ಬಂದಿದ್ದಾರೆ ಮತ್ತು ಅವರಲ್ಲಿ ಆ ಬದಲಾವಣೆ ತರುವ ಹುಮ್ಮಸ್ಸು ಇದೇ. ಸಮಾಜದ ಭವಿಷ್ಯವು ಅವರ ಕೈಯಲ್ಲಿದೆ” ಎಂದು ಕಾನ್ಸ್ಟೆಬಲ್ ಹೇಳಿದರು.
ಕಾನ್ಸ್ಟೆಬಲ್ ವೊಬ್ಬರಿಗೆ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹಾಯ ಮಾಡ್ತಂತೆ ನಾಗಚೈತನ್ಯ ಅವರ ಚಿತ್ರ
ಸಂವಾದದ ಸಮಯದಲ್ಲಿ, ಮತ್ತೊಬ್ಬ ಕಾನ್ಸ್ಟೇಬಲ್ ನಾಗಚೈತನ್ಯ ಅವರ ‘ತಡಖ’ ಚಿತ್ರವು ಮೆದುಳಿನ ಗಾಯದಿಂದ ಚೇತರಿಸಿಕೊಳ್ಳಲು ಹೇಗೆ ಸಹಾಯ ಮಾಡಿತು ಎಂಬುದನ್ನು ಹಂಚಿಕೊಂಡರು.
"ನಾನು ತಡಖ ಚಿತ್ರವನ್ನು ತುಂಬಾನೇ ಇಷ್ಟಪಡುತ್ತೇನೆ. ಆ ಚಿತ್ರದಲ್ಲಿ, ಸುನಿಲ್ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಖಳನಾಯಕರು ಅವನನ್ನು ತುಂಬಾ ಕೆಟ್ಟದಾಗಿ ಹೊಡೆಯುತ್ತಾರೆ. ಅದರ ನಂತರ, ನೀವು ಅವನನ್ನು ನಿರ್ಭೀತನನ್ನಾಗಿ ಮಾಡುತ್ತೀರಿ. ಚಿತ್ರದ ಈ ಭಾಗವನ್ನು ನಾನು ತುಂಬಾನೇ ಇಷ್ಟಪಡುತ್ತೇನೆ. ಏಕೆಂದರೆ ಒಂದು ವರ್ಷದ ಹಿಂದೆ ನಾನು ಬೈಕ್ ಅಪಘಾತಕ್ಕೆ ಒಳಗಾದೆ ಮತ್ತು ನನ್ನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತು ಮತ್ತು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡೆ. ಆದರೆ ಆ ಚಲನಚಿತ್ರವನ್ನು ನೋಡಿದ ನಂತರ, ನಾನು ತುಂಬಾನೇ ಪ್ರಭಾವಿತನಾದೆ ಮತ್ತು ಸ್ಫೂರ್ತಿ ಪಡೆದಿದ್ದೇನೆ. ನಿಮ್ಮ ಚಿತ್ರದಿಂದಲೇ ನಾನು ಇವತ್ತು ಮಾತನಾಡಲು ಮತ್ತು ನಡೆದಾಡಲು ಸಾಧ್ಯವಾಯಿತು. ಇಂದು ನಾನು ಆರೋಗ್ಯವಾಗಿದ್ದೇನೆ, ಎಂದರೆ ಅದು ನಿಮ್ಮಿಂದಲೇ” ಅಂತ ಹೇಳಿದರು.
ಇದನ್ನೂ ಓದಿ: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?
ನಂತರ, ಪೊಲೀಸ್ ಕಾನ್ಸ್ಟೇಬಲ್ ನಟನಿಗೆ ಕಠಿಣವಾದ ಪೊಲೀಸ್ ತರಬೇತಿಯನ್ನು ಮಾಡಲು ಸವಾಲು ಹಾಕಿದರು. ಇದಕ್ಕೆ ನಟ ತಮಗೆ ನೀಡಲಾದ ಸವಾಲುಗಳನ್ನು ಸಲೀಸಾಗಿ ಮಾಡಿ ಮುಗಿಸಿದರು.
ಮೇ 12ಕ್ಕೆ ತೆರೆಗೆ ಬರಲಿದೆಯಂತೆ ‘ಕಸ್ಟಡಿ’ ಚಿತ್ರ
ನಟನ ಮುಂಬರುವ ಕಸ್ಟಡಿ ಚಿತ್ರದಲ್ಲಿ ಕೀರ್ತಿ ಶೆಟ್ಟಿ, ಅರವಿಂದ್ ಸ್ವಾಮಿ, ಪ್ರಿಯಾಮಣಿ, ಶರತ್ ಕುಮಾರ್, ಸಂಪತ್ ರಾಜ್, ಪ್ರೇಮ್ಜಿ ಅಮರನ್, ವೆನ್ನೆಲಾ ಕಿಶೋರ್ ಮತ್ತು ಪ್ರೇಮಿ ವಿಶ್ವನಾಥ್ ನಟಿಸಿದ್ದು, ಮೇ 12 ರಂದು ತೆರೆಗೆ ಬರಲಿದೆ. ಕನ್ನಡ, ತಮಿಳು ಮತ್ತು ಹಿಂದಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ