Vikram: ಖ್ಯಾತ ನಟ ಕಮಲ್ ಹಾಸನ್​ ವಿರುದ್ಧ ದೂರು ದಾಖಲು, ಅಂಥಾದ್ದೇನು ಮಾಡಿದ್ದಾರೆ ಅಂತ ನೀವೇ ನೋಡಿ

ವಿಕ್ರಮ್​ ಸಿನಿಮಾ ಯಾವಾಗಪ್ಪ ರಿಲೀಸ್​ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಇದೀಗ  ಕಮಲ್​ ಹಾಸನ್ ವಿರುದ್ಧ ದೂರು ದಾಖಲಾಗಿದೆ. ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.

ಕಮಲ್​ ಹಾಸನ್​

ಕಮಲ್​ ಹಾಸನ್​

  • Share this:
ತಮಿಳು (Tamil) ಚಲನಚಿತ್ರೋದ್ಯಮದ ಹಿರಿಯ ನಟ ಕಮಲ್ ಹಾಸನ್ (Kamal Hassan) ಅವರ ಚಲನಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ತಿಳಿದರೆ ಸಾಕು ಅಭಿಮಾನಿಗಳು ಎಂತಹ ದೊಡ್ಡ ಸಾಲಿನಲ್ಲಿ ನಿಂತಾದರೂ ಟಿಕೆಟ್ (Ticket) ಪಡೆದುಕೊಂಡು ಸಿನಿಮಾ ನೋಡುತ್ತಾರೆ. ಈಗ ಇವರ ಮುಂಬರುವ ಚಿತ್ರವಾದ ‘ವಿಕ್ರಮ್’(Vikram)ನ ಬಿಡುಗಡೆಗಾಗಿ ಇವರ ಅಭಿಮಾನಿಗಳು (Fans) ಕಾತುರತೆಯಿಂದ ಕಾಯುತ್ತಿದ್ದಾರೆ . ತಮ್ಮ ಹಳೆಯ ಕ್ರೇಜ್​(Craze)ನ ಇನ್ನೂ ಉಳಿಸಿಕೊಂಡು ಬಂದ ನಟರಲ್ಲಿ ಕಮಲ್​ ಹಾಸನ್​ ಕೂಡ ಒಬ್ಬರು. ಇವರ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಎಂದರೆ ಅಲ್ಲಿ ಹಬ್ಬದ ವಾತಾವರಣ. ಇದೀಗ ವಿಕ್ರಮ್​ ಸಿನಿಮಾ ಯಾವಾಗಪ್ಪ ರಿಲೀಸ್​ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಇದೀಗ  ಕಮಲ್​ ಹಾಸನ್ ವಿರುದ್ಧ ದೂರು ದಾಖಲಾಗಿದೆ. ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.

ಕಮಲ್ ಹಾಸನ್​ ವಿರುದ್ಧ ದೂರು ದಾಖಲು!

ಖ್ಯಾತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್​ ವಿರುದ್ಧ ದೂರು ದಾಖಲಾಗಿದೆ. ಕಮಲ್ ಹಾಸನ್ ನಟನೆಯ ವಿಕ್ರಮ್​ ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. 'ಪಾತಾಳ ಪಾತಾಳ...' ಎನ್ನುವ ಸಾಹಿತ್ಯವಿರುವ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸಿದ್ದಾರೆ. ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ವಿಕ್ರಮ್​.

ಪಾತಾಳ್​ ಹಾಡಿನ ಸಾಹಿತ್ಯ ಬರೆದಿರುವ ಕಮಲ್​!

ವಿವಾದದಲ್ಲಿ ಸಿಲುಕಿರುವ ಪಾತಾಳ್ ಪಾತಾಳ್ ಹಾಡನ್ನು ಕಮಲ್ ಹಾಸನ್ ಅವರೇ ಬರೆದು ಹಾಡಿರುವ ಹಾಡಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸುವ ಸಾಲುಗಳಿವೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಮತ್ತು  ಕೋವಿಡ್​ ನಿಧಿ ಸಂಗ್ರಹ ಹಣದ ಬಗ್ಗೆ ನಕಾರಾತ್ಮಕವಾಗಿ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

ವಿಜಯ್​ ಸೇತುಪತಿ-ಫಹಾದ್​ ಫಾಸಿಲ್​ ಜುಗಲ್​ಬಂದಿ!

ಈ ಚಿತ್ರದಲ್ಲಿ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ನಟ ಕಮಲ್ ಹಾಸನ್ ಫ್ಲಾಶ್ ಬ್ಯಾಕ್ ಕಥೆಗಾಗಿ 30 ವರ್ಷದ ಯುವಕನಾಗಿ ಕಾಣಿಸಿಕೊಳ್ಳುವ ಅನೇಕ ದೃಶ್ಯಗಳಿರಲಿವೆ ಎಂದು ಈ ಹಿಂದೆ ವರದಿಯಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕರು ಹಾಲಿವುಡ್ ಚಲನಚಿತ್ರಗಳಲ್ಲಿ ನಟನನ್ನು ಯಂಗ್ ಆಗಿ ಕಾಣುವಂತೆ ಮಾಡಲು ಬಳಸುವ ತಂತ್ರಜ್ಞಾನಕ್ಕಾಗಿ 10 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್, ಇವ್ರ್​ ಫ್ಯಾಮಿಲಿಗೆ ಮದ್ವೆನೇ ಆಗಿಬರಲ್ಲ ಎಂದ ಫ್ಯಾನ್ಸ್​!

ಸೆಲ್ವಂ ಎನ್ನುವ ವ್ಯಕ್ತಿ ಮೇ 12ರಂದು ಚೆನ್ನೈ ಪೊಲೀಸ್ ಕಮಿಷನರ್ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಅಂದಹಾಗೆ ಕಮಲ್ ಹಾಸನ್ ಸಿನಿಮಾಗಳು ಅಂದ್ಮೇಲೆ ವಿವಾದಗಳು ಕಾಮನ್ ಅಂತಾರೆ ಅವರ ಅಭಿಮಾನಿಗಳು. ಒಟ್ಟಿನಲ್ಲಿ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
Published by:Vasudeva M
First published: