Jai Jagadish: ನಟ ಜೈ ಜಗದೀಶ್​ ಮೇಲೆ ಹಲ್ಲೆ ಆರೋಪ, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Police Complaint: ಇನ್ನು ಈ ಜಗಳ ಮಾತಿಗೆ ಮಾತು ಬೆಳೆದು ದೊಡ್ಡದಾಗಿದ್ದು, ಅವರು ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.  ಆದರೆ ಈ ಬಗ್ಗೆ ನಟ ಜೈ ಜಗದೀಶ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಟ ಜೈ ಜಗದೀಶ್​

ನಟ ಜೈ ಜಗದೀಶ್​

  • Share this:
ಸ್ಯಾಂಡಲ್​ ವುಡ್​ನ (Sandalwood)  ಹಿರಿಯ ನಟ ಜೈಜಗದೀಶ್​ (Jai Jagadish) ಮೇಲೆ ಹಲ್ಲೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ನಟ (Actor) ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೌದು, ಬಸ್​ನಲ್ಲಿ ಪ್ರಯಾಣ ಮುಗಿಸಿ ಇಳಿಯುತ್ತಿದ್ದ ಸಂದರ್ಭದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಹಲ್ಲೇ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಏನಿದು ಸ್ಟೋರಿ? ಇಲ್ಲಿದೆ ನೋಡಿ.

ಅವಾಚ್ಯ ಶಬ್ಧದಿಂದ ಬೈದು , ಹಲ್ಲೆಗೆ ಯತ್ನ ಆರೋಪ

ಮಂಡ್ಯ ಜಿಲ್ಲೆಯ ಜಯರಾಮೇಗೌಡ ಎನ್ನುವ ವ್ಯಕ್ತಿಗೆ ಬಸ್​ನಿಂದ ಇಳಿದು ಹೋಗುವಾಗ ಜೈ ಜಗದೀಶ್ ಹಾಗೂ ಅವರ ನಡುವೆ ವಾಗ್ವಾದವಾಗಿದೆ. ಇದು ತಾರಕಕ್ಕೇರಿ ಜೈ ಜಗದೀಶ್​ ಅವರು ಜಯರಾಮೇಗೌಡ ಅವರಿಗೆ ನಿಂದಿಸಿದ್ದು, ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  ಜೂನ್​ 5ರಂದು ಈ ಘಟನೆ ನಡೆದಿದ್ದು, ಜಯರಾಮೇಗೌಡ ಅವರು ಬಸ್​ ಇಳಿಯುವಾಗ ಹಿಂದಿನಿಂದ ಜೈ ಜಗದೀಶ್​ ಕಾರಿನಲ್ಲಿ ಬಂದಿದ್ದಾರೆ. ಅಲ್ಲದೇ ಬಸ್​ನಿಂದ ಬಾಟಲಿ ಎಸೆಯುತ್ತೀಯಾ ಎಂದು ಕಾರಿನಿಂದ ಇಳಿದು ಬೈದಿದ್ದಾರೆ ಎಂದು ಜಯರಾಮೇಗೌಡ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: 777 Charlie ರೀತಿಯದ್ದೇ ಮತ್ತೊಂದು ಸಿನಿಮಾ‌ ಬರ್ತಿದೆ, ಇದ್ರಲ್ಲಿರೋ ಮುದ್ದು ನಾಯಿ ನೋಡಿ

ಇನ್ನು ಈ ಜಗಳ ಮಾತಿಗೆ ಮಾತು ಬೆಳೆದು ದೊಡ್ಡದಾಗಿದ್ದು, ಅವರು ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.  ಆದರೆ ಈ ಬಗ್ಗೆ ನಟ ಜೈ ಜಗದೀಶ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಈ  ಗಲಾಟೆ ನಡೆಯುವಾಗ ಅಲ್ಲಿದ್ದ ಸ್ಥಳೀಯರು ಬಂದು ಜೈ ಜಗದೀಶ್​ ಅವರಿಗೆ ಸಮಾಧಾನ ಮಾಡಲು ಸಹ ಪ್ರಯತ್ನಿಸಿದ್ದಾರೆ. ಆದರೂ ಕೂಡ ಅವರ ಕೋಪ ಕಡಿಮೆಯಾಗಿಲ್ಲ ಎಂದು ದೂರಿನಲ್ಲಿ ಜಯರಾಮೇಗೌಡ ಉಲ್ಲೇಖಿಸಿದ್ದಾರೆ.

ಸಲೆಬ್ರಿಟಿಗಳ ಮೇಲೆ ಹಲ್ಲೆ ಆರೋಪ ಇದೇ ಮೊದಲೇನಲ್ಲ

ಹಲವಾರು ಚಿತ್ರಗಳಲ್ಲಿ ವಿಲನ್ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೈ ಜಗದೀಶ್​ ಸಿನಿಮಾ ನಿರ್ಮಾಣವನ್ನು ಸಹ ಮಾಡಿದ್ದಾರೆ. ಅಲ್ಲದೇ ಅವರು ಬಿಗ್​ಬಾಸ್​ ಸೀಸನ್​ 7ರ ಸ್ಪರ್ಧಿಯಾಗಿದ್ದರೂ ಕೂಡ.

ಇದನ್ನೂ ಓದಿ: ನಯನತಾರಾ ಲವ್​ಸ್ಟೋರಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಲೇಡಿ ಸೂಪರ್ ಸ್ಟಾರ್ ಹಳೆ ಪ್ರೇಮಕಥೆ ಇದು

ಈ ರೀತಿ ಸೆಲೆಬ್ರಿಟಿಗಳ ಬಗ್ಗೆ ಆರೋಪ ಬರುವುದು ಸಾಮಾನ್ಯ. ಕಳೆದ 2ನೇ ಲಾಕ್​ಡೌನ್​ ಸಮಯದಲ್ಲಿ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿ ಬಿಗ್ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ಸಹ ಸುದ್ದಿ ಮಾಡಿದ್ದರು. ಅಲ್ಲದೇ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡು ಟೀಕೆಗೆ ಒಳಗಾಗಿದ್ದರು.
Published by:Sandhya M
First published: