• Home
  • »
  • News
  • »
  • entertainment
  • »
  • Kantara Bhutakola: ಗುಡುಗಿದ ಹಿಂದೂ ಜಾಗರಣ ವೇದಿಕೆ; ನಟ ಚೇತನ್ ವಿರುದ್ಧ ಪೊಲೀಸರಿಗೆ ದೂರು

Kantara Bhutakola: ಗುಡುಗಿದ ಹಿಂದೂ ಜಾಗರಣ ವೇದಿಕೆ; ನಟ ಚೇತನ್ ವಿರುದ್ಧ ಪೊಲೀಸರಿಗೆ ದೂರು

ರಿಷಬ್ ಶೆಟ್ಟಿ ಮತ್ತು ಚೇತನ್

ರಿಷಬ್ ಶೆಟ್ಟಿ ಮತ್ತು ಚೇತನ್

ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹ ವ್ಯಕ್ತಪಡಿಸಿದೆ.

  • News18 Kannada
  • Last Updated :
  • Mangalore, India
  • Share this:

ಉಡುಪಿ: ಭೂತಕೋಲ ಹಿಂದೂ ಸಂಸ್ಕೃತಿಯ (Hindu Culture) ಭಾಗವಲ್ಲ ಎಂದಿದ್ದ ನಟ ಚೇತನ್ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ನಟ ಚೇತನ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ (Karkala Police Station) ಹಿಂದೂ ಜಾಗರಣಾ ವೇದಿಕೆ ದೂರು ದಾಖಲಿಸಿದೆ. ನಟ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ದಕ್ಕೆ ಉಂಟಾಗಿದೆ. ಹೀಗಾಗಿ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು (Police Case Against Actor Chetan) ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹ ವ್ಯಕ್ತಪಡಿಸಿದೆ.


ಕನ್ನಡ ಚಿತ್ರರಂಗದ ಕಾಂತಾರ ರಾಜ್ಯ-ರಾಷ್ಟ್ರಮಟದಲ್ಲಿ ಹೊಳೆಯುತ್ತಿದೆ. ತುಳುನಾಡಿನ (Culture) ಸಂಸ್ಕೃತಿಯನ್ನ ಇದು ಎಲ್ಲೆಡೆ ಪಸರಿಸುತ್ತಿದೆ. ಭೂತಕೋಲದಂತಹ ಆಚರಣೆ ಬಗ್ಗೆನೂ ಈ ಸಿನಿಮಾ ಹೇಳುತ್ತದೆ. ಒಂದು ಸಂಸ್ಕೃತಿಯನ್ನ ಒಂದು ಸಿನಿಮಾದಲ್ಲಿ ತರೋದು ಅಷ್ಟು ಸುಲಭವಲ್ಲ. ಅದನ್ನ ಎಲ್ಲೆಡೆ ತೆಗೆದುಕೊಂಡು ಹೋಗುವುದು ಇನ್ನೂ ಒಂದು ಚಾಲೆಂಜ್. ಆದರೂ ರಿಷಬ್ ಶೆಟ್ಟಿ ಆ ಒಂದು ಸಾಹಸಕ್ಕೆ ಕೈ ಹಾಕಿ ಗೆದಿದ್ದಾರೆ. ಎಲ್ಲರ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಆದರೆ ಇಲ್ಲಿವರೆಗೂ ಸಿನಿಮಾದ ಬಗ್ಗೆ ಯಾವುದೇ ಪ್ರಶ್ನೆಗಳು ಎದ್ದಿರಲಿಲ್ಲ. ಆ ಒಂದು ಪ್ರಶ್ನೆಯನ್ನ ಹೋರಾಟಗಾರ ನಟ ಆ ದಿನಗಳು ಚೇತನ್ ಈಗ ಎತ್ತಿದ್ದಾರೆ. ಈ ಪ್ರಶ್ನೆಗೆ ರಿಷಬ್ ಇನ್ನೂ ಉತ್ತರ ಕೊಟ್ಟಿಲ್ಲ. ಆದರೆ ಚೇತನ್ ಕೇಳಿದ ಪ್ರಶ್ನೆ ಅತಿ ಹೆಚ್ಚು ವೈರಲ್ ಆಗುತ್ತಿದೆ.


ಕನ್ನಡದ ಕಾಂತಾರ ಸಿನಿಮಾದ ಹೊಸ ವಿವಾದ ?
ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ವಿಭಿನ್ನ ದೃಷ್ಟಿಕೋನದ ವ್ಯಕ್ತಿ. ತಮ್ಮ ಚಿತ್ರ ಜೀವನದಲ್ಲೂ ಅಂತಹದ್ದೇ ವಿಭಿನ್ನತೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಸಿನಿಮಾ ಪ್ರೀತಿಯ ಜೊತೆಗೆ ಹೋರಾಟದ ಮನೋಭಾವವನ್ನೂ ಬೆಳೆಸಿಕೊಂಡು ಬಂದಿದ್ದಾರೆ.


ರಿಷಬ್ ಹೇಳಿಕೆ ಪ್ರಶ್ನೆ ಮಾಡಿದ ನಟ ಆ ದಿನಗಳು ಚೇತನ್
ಚೇತನ್ ಅಭಿಪ್ರಾಯದಂತೆ ಆಲೋಚನಾ ಲಹರಿನೂ ವಿಭಿನ್ನವಾಗಿಯೇ ಇದೆ. ಎಲ್ಲರೂ ನೋಡುವ ಹಾಗೆ ಸಮಾಜವನ್ನ ನಟ ಚೇತನ್ ನೋಡೋದೇ ಇಲ್ಲ. ಅವರ ದೃಷ್ಟಿಕೋನವೇ ಬೇರೆ ಇರುತ್ತದೆ.


ರಿಷಬ್ ಹೇಳಿಕೆಯನ್ನ ಚೇತನ್ ಪ್ರಶ್ನೆ ಮಾಡಿದ್ಯಾಕೆ?
ಹೌದು, ಆ ದಿನಗಳು ಚೇತನ್ ಕೇಳಿದ ಪ್ರಶ್ನೆ ಈಗ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಈ ಪ್ರಶ್ನೆ ಸುತ್ತವೇ ಆ ದಿನಗಳು ಚೇತನ್ ಸಾಮಾಜಿಕ ತಾಣದಲ್ಲೂ ಬರೆದು ಕೊಂಡಿದ್ದಾರೆ. ಅದು ಇಂತಿದೆ.


ಚೇತನ್ ಹೇಳಿದ ವಾಕ್ಯಗಳು ಹೀಗಿವೆ
"ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ'ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ.


ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ."


ಇದನ್ನೂ ಓದಿ: Kantara-Rishab Shetty: ರಿಷಬ್ ಅವರೂ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗ್ತಾರಾ? ಶೆಟ್ರು ಕೊಟ್ರು ಸೂಪರ್ ಆನ್ಸರ್


ಕಾಂತಾರ ಚಿತ್ರದಲ್ಲಿ ಭೂತಕೋಲ ಆಚರಣೆನೂ ಇದೆ. ಇದು ನಮ್ಮ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಅಂತಲೇ ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಒಂದು ಹೇಳಿಕೆಯನ್ನೆ ಚೇತನ್ ಈಗ ಅಲ್ಲಗಳೆದಿದ್ದಾರೆ.


ಇದನ್ನೂ ಓದಿ: BBK Season 9: ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಸೋನು ಗೌಡ!


ಹಿಂದೂ ಧರ್ಮ ಬರೋಕು ಮುಂಚೇನೆ ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ಇದ್ದವು ಅಂತಲೇ ತಮ್ಮ ಅಭಿಪ್ರಾಯವನ್ನ ಚೇತನ್ ಹೇಳಿಕೊಂಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: