• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Pogaru: ಪೊಗರು ವಿವಾದ: ಬ್ರಾಹ್ಮಣ ಸಮುದಾಯದ ಕ್ಷಮೆ ಯಾಚಿಸಿದ ನಿರ್ದೇಶಕ ನಂದ ಕಿಶೋರ್​ ಹೇಳಿದ್ದು ಹೀಗೆ..!

Pogaru: ಪೊಗರು ವಿವಾದ: ಬ್ರಾಹ್ಮಣ ಸಮುದಾಯದ ಕ್ಷಮೆ ಯಾಚಿಸಿದ ನಿರ್ದೇಶಕ ನಂದ ಕಿಶೋರ್​ ಹೇಳಿದ್ದು ಹೀಗೆ..!

ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್​ ಹಾಗೂ ಧ್ರುವ ಸರ್ಜಾ

ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್​ ಹಾಗೂ ಧ್ರುವ ಸರ್ಜಾ

ಪೊಗರು ಚಿತ್ರದಲ್ಲಿ ಇರುವ ಸುಮಾರು 16 ದೃಶ್ಯಗಳನ್ನು ಡಿಲೀಟ್​ ಮಾಡಬೇಕೆಂದು ಒತ್ತಾಯಿಸಿ ಬ್ರಾಹ್ಮಣ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು. ಅದರ ಬೆನ್ನಲ್ಲೇ ಪೊಗರು ಸಿನಿಮಾದ ನಿರ್ದೇಶಕ ನಂದ ಕಿಶೋರ್​ ಸಹ ಕ್ಷಮೆ ಯಾಚಿಸಿದ್ದು, ದೃಶ್ಯಗಳಿಗೆ ಕತ್ತರಿ ಹಾಕುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಓದಿ ...
 • Share this:

ಪೊಗರು ಸಿನಿಮಾ ಆರಂಭದಿಂದಲೂ ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದೆ. ಈ ಹಿಂದೆ ಖರಾಬು ಹಾಡು ರಿಲೀಸ್ ಆದಾಗ ಈ ಹಾಡಿನಲ್ಲಿ ನಾಯಕಿಗೆ ಹಿಂಸೆ ನೀಡುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ನೀಡಲಾಗಿದೆ ಎಂದು ಮಹಿಳಾ ಸಂಘಟನೆಗಳು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೆ ಈ ಹಾಡನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯಿಸಿದ್ದರು. ಇನ್ನು ಸಿನಿಮಾ ರಿಲೀಸ್ ಆದ ನಂತರ ಅಖಿಲ ಕರ್ನಾಟಕ ಮದ್ವಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಿನಿಮಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲದೆ ಕೆಲ ಸಮಯ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ಸಹ ಮಾಡಿದ್ದಾರೆ. ಇನ್ನು ಪೊಗರು ಸಿನಿಮಾದಲ್ಲಿರುವ ಕೆಲವು ದೃಶ್ಯಗಳು ಬ್ರಾಹ್ಮಣರು ತಲೆ ತಗ್ಗಿಸುವಂತಿವೆ. ಅವುಗಳನ್ನೂ ಸಿನಿಮಾದಿಂದ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ. 


ಪೊಗರು ಚಿತ್ರದಲ್ಲಿ ಇರುವ ಸುಮಾರು 16 ದೃಶ್ಯಗಳನ್ನು ಡಿಲೀಟ್​ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಮದ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಇಂದು ಕೆಲ ಸಮಯ ಪ್ರತಿಭಟನೆ ನಡೆಸಿದರು. ಅಲ್ಲದೆ ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್ ಅವರನ್ನು ಕರೆಸಬೇಕೆಂದು ಆಗ್ರಹಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಗರು ಚಿತ್ರದ ಕಾರ್ಯಕಾರಿ ನಿರ್ಮಾಪಕ ಶಿವಾರ್ಜುನ್ ಸ್ಥಳಕ್ಕೆ ಬಂದರು.
ಈ ನಡುವೆ ಅಖಿಲ ಕರ್ನಾಟಕ ಮದ್ವಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಾರ್ಯಕರ್ತರು ಹಾಗೂ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ನಡುವೆ ಮಾತಿನ ಚಕಮಕಿ ನಡೆಯಿತು.


 Pogaru movie controversy, Hurting Brahmin community sentiments, Pogaru movie issue, Brahmins in Pogaru movie, ಬ್ರಾಹ್ಮಣ ಸಮುದಾಯದ ಅವಹೇಳನ, ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅಪಮಾನ, ಪೊಗರು ಸಿನಿಮಾ ವಿವಾದ, Pogaru movie released, Pogaru movie houseful, Rashmika Mandanna, Nanda Kishore, Dhruva Sarja, Pogaru film, Pogaru Hindi Dubbing Rights Sold for Rs 7.2 Crore, Pogaru hindi dubbing rights sold out, Pogaru Hindi Dubbing sold for Rs7.2 crore, ಧ್ರುವ ಸರ್ಜಾ, ಪೊಗರು ಸಿನಿಮಾ, ಪೊಗರು ಹಿಂದಿ ಡಬ್ಬಿಂಗ್ ಹಕ್ಕು ಮಾರಾಟ, 7.2 ಕೋಟಿ ರೂಪಾಯಿಗೆ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟ, Pogaru Release Date, Dhruva Sarja dubari, Nanda Kishore, Director NandaKishore, Dhruva sarja, Dhruva sarja next movie, dubari, dubari muhurat, Dhruva sarja dubari, dubari muhurtha, ಧ್ರುವ ಸರ್ಜಾ, ದುಬಾರಿ, ನಿರ್ದೇಶಕ ನಂದಕಿಶೋರ್​, Dhruva Sarja, Dhruva Sarja new movie, Dhruva sarja new movie title Dubaari, Dubaari Kannada film, ಧ್ರುವ ಸರ್ಜಾ, ಧ್ರುವ ಸರ್ಜಾ ಹೊಸ ಸಿನಿಮಾ, ಧ್ರುವ ಸರ್ಜಾ ಹೊಸ ಸಿನಿಮಾದ ಟೈಟಲ್ ದುಬಾರಿ, ದುಬಾರಿ ಕನ್ನಡ ಸಿನಿಮಾ, Naanda Kishore, Dhruva Sarja, Pogaru Movie Release Date , Pogaru kannada film, Pogaru set to be release on December or January, ನಂದಕಿಶೋರ್, ಧ್ರುವ ಸರ್ಜಾ, ಪೊಗರು ಸಿನಿಮಾ, ಪೊಗರು ಕನ್ನಡ ಸಿನಿಮಾ, ಡಿಸೆಂಬರ್ ಅಥವಾ ಜನವರಿಯಲ್ಲಿ ಪೊಗರು ಸಿನಿಮಾ, movie controversy director Nanda Kishore agreed to the scenes from the moive ae
ಅಖಿಲ ಕರ್ನಾಟಕ ಮದ್ವಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಾರ್ಯಕರ್ತರಿಂದ ಪ್ರತಿಭಟನೆ.


ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ವತಿಯಿಂದ ನಂತರ ಸುದ್ದಿಗೋಷ್ಠಿ ನಡೆಸಲಾಯಿತು. ನೃಪತುಂಗ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಗರು ಸಿನಿಮಾದ ನಿರ್ದೇಶಕ ನಂಧ ಕಿಶೋರ್​ ಸಹ ಭಾಗವಹಿಸಿದ್ದರು.


ಇದನ್ನೂ ಓದಿ: ಅರಿಶಿಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ಮಿಲನಾ ನಾಗರಾಜ್​..!


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಚಿತ್ರದಲ್ಲಿರುವ ಅನೇಕ ದೃಶ್ಯಗಳು ತಲೆತಗ್ಗಿಸುವ ರೀತಿಯಿದೆ. ಸಿನಿಮಾದಲ್ಲಿ ಶೂ ಕಾಲಿನಲ್ಲಿ ಬ್ರಾಹ್ಮಣರನ್ನು ಒದೆಯುತ್ತಾರೆ. ತಕ್ಷಣ ದೃಶ್ಯಗಳನ್ನು ತೆಗೆಯಬೇಕು. 16 ದೃಶ್ಯಗಳಿಗೆ ಕತ್ತರಿ ಹಾಕಬೇಕು. ಇಲ್ಲವಾದಲ್ಲಿ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಂತರ ಮಾತನಾಡಿದ ನಿರ್ದೇಶಕ ನಂದಕಿಶೋರ್,  ಸಮುದಾಯಕ್ಕೆ ನೋವಾಗಿದ್ರೆ ನಾನು ಕ್ಷಮೆ ಕೇಳುತ್ತೇನೆ. ಇಂದು ಅಥವಾ ನಾಳೆ ಒಳಗೆ ದೃಶ್ಯಗಳನ್ನು ಸಿನಿಮಾದಿಂದ ತಗೆಯಲಾಗುತ್ತದೆ.  ಕೆಲವು ತಾಂತ್ರಿಕವಾಗಿ ಸಮಸ್ಯೆಗಳಿವೆ. ಹೀಗಾಗಿ ನಾಳೆ ಒಳಗಾಗಿ ದೃಶ್ಯಗಳನ್ನು ತೆಗೆಯಲಾಗುತ್ತದೆ. ಒಬ್ಬರನ್ನ ನೋಯಿಸಿ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ.


ಇದನ್ನೂ ಓದಿ: Jaggesh: ಜಗ್ಗೇಶ್​ ಟ್ವಿಟರ್​ ಲೈವ್​: ಯಾವೊಬ್ಬ ನಟ, ಅವರ ಅಭಿಮಾನಿಗಳು ನನ್ನ ಬಳಿ ಬರಲಾಗುವುದಿಲ್ಲ ಎಂದ ನವರಸ ನಾಯಕ

top videos


  ಬ್ರಾಹ್ಮಣ ಸಮುದಾಯ ಮುಗ್ಧರು. ಈ ಸಮುದಾಯ ಮೇಲೆ ದೌರ್ಜನ್ಯ ಆಗುತ್ತಿರೋದನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ನಮ್ಮಿಂದ ತಪ್ಪಾಗಿದೆ ಕ್ಷಮೆ ಕೇಳಿದ್ದೇನೆ. ನಾಲ್ಕುವರೆ ವರ್ಷ ಸಿನಿಮಾಗಾಗಿ ಕಷ್ಟ ಪಟ್ಟಿದ್ದೇನೆ ಎಂದಿದ್ದಾರೆ ನಿರ್ದೇಶಕ ನಂದ ಕಿಶೋರ್​.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು