Akshay Kumar: ತಾಯಿ ನಿಧನಕ್ಕೆ ಸಾಂತ್ವನ ಹೇಳಿ ಅಕ್ಷಯ್ ಕುಮಾರ್​ಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ .

Narendra Modi: ಪತ್ರದಲ್ಲಿ, ಪಿಎಂ ಮೋದಿ ಅಕ್ಷಯ್ ಅವರ ಪೋಷಕರನ್ನು ಅಕ್ಷಯ್ ಅಂತಹ ಮಗನನ್ನು ಬೆಳೆಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಅವರು  ಅಕ್ಷಯ್ ಕುಮಾರ್ ಅವರನ್ನು ಭಾರತದ  ಬಹುಮುಖ ನಟರಲ್ಲಿ ಒಬ್ಬರೆಂದೂ ಕರೆದಿದ್ದಾರೆ. ಅಲ್ಲದೇ  ತಾಯಿಯ ಮರಣದ ದಿನ ಅಕ್ಷಯ್ ಜೊತೆ ಮಾತನಾಡಿದ್ದನ್ನು ಕೂಡ  ನೆನಪಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಲಿವುಡ್​ (Bollywood) ನಟ ಅಕ್ಷಯ್ ಕುಮಾರ್ (Akshay Kumar)ಅವರ ತಾಯಿ ಅರುಣಾ ಭಾಟಿಯಾ ಅವರು   ಸೆಪ್ಟೆಂಬರ್ 8 ರಂದು ನಿಧನರಾಗಿದ್ದಾರೆ.  ತಾಯಿಯ ಆರೋಗ್ಯದಲ್ಲಿ ಏರುಪೇರಾದ ಕಾರಣ ನಟ ಲಂಡನ್‌ನಲ್ಲಿ ತನ್ನ ಚಿತ್ರೀಕರಣವನ್ನು ಅರ್ಧಕ್ಕೆ  ನಿಲ್ಲಿಸಿ  ಭಾರತಕ್ಕೆ ಮರಳಿ ಬಂದಿದ್ದರು.  ನನ್ನ ತಾಯಿ ... ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದಿದ್ದಾರೆ. ನಾನು ಮತ್ತು ನನ್ನ ಕುಟುಂಬವು ಈ ಸಮಯದಲ್ಲಿ ನೀವು ನಿಮ್ಮ ಪ್ರಾರ್ಥನೆಯನ್ನು ನಾನು ಗೌರವಿಸುತ್ತೇನೆ. ಓಂ ಶಾಂತಿ ಎಂದು ಅವರು ತಮ್ಮ ತಾಯಿಯ ನಿಧನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ(Social Media)  ಹಂಚಿಕೊಂಡಿದ್ದರು. ಬಾಲಿವುಡ್​ನ ಕೆಲ ಸ್ನೇಹಿತರು ಅಕ್ಷಯ್ ತಾಯಿ ನಿಧನಕ್ಕೆ ಸಾಮಾಜಿಕ ಜಾಲಾತಾಣದ ಮೂಲಕ ಸಂತಾಪ ಸೂಚಿಸಿದ್ದರೇ, ಇನ್ನು ಕೆಲವರು ಮನೆಗೆ ತೆರಳಿದ್ದರು.  

ಈಗ, ಅಕ್ಷಯ್ ತನ್ನ ತಾಯಿಯ ನಿಧನಕ್ಕೆ ಪಿಎಂ ನರೇಂದ್ರ ಮೋದಿ ಸಂತಾಪ ಸೂಚಿಸಲು ಅವರಿಗೆ ಕಳುಹಿಸಿರುವ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಮ್ಮನ ನಿಧನಕ್ಕೆ  ಕಳುಹಿಸಿರುವ ಈ ಸಂತಾಪದ  ಪತ್ರಕ್ಕೆ ವಿನಮ್ರನಾಗಿದ್ದೇನೆ. ನನ್ನ  ತಾಯಿಯ ನಿಧನಕ್ಕೆ ಸಮಯ ತೆಗೆದುಕೊಂಡು ಸಂತಾಪ ಸೂಚಿಸಿ ನಮಗೆ ಸಾಂತ್ವನ ಹೇಳಿರುವುದಕ್ಕೆ ಮಾನ್ಯ ಪ್ರಧಾನಿಗಳಿಗೆ ಧನ್ಯವಾದಗಳು,. ಅವರ ಈ ಮಾತು ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಪತ್ರದಲ್ಲಿ, ಪಿಎಂ ಮೋದಿ ಅಕ್ಷಯ್ ಅವರ ಪೋಷಕರನ್ನು ಅಕ್ಷಯ್ ಅಂತಹ ಮಗನನ್ನು ಬೆಳೆಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಅವರು  ಅಕ್ಷಯ್ ಕುಮಾರ್ ಅವರನ್ನು ಭಾರತದ  ಬಹುಮುಖ ನಟರಲ್ಲಿ ಒಬ್ಬರೆಂದೂ ಕರೆದಿದ್ದಾರೆ. ಅಲ್ಲದೇ  ತಾಯಿಯ ಮರಣದ ದಿನ ಅಕ್ಷಯ್ ಜೊತೆ ಮಾತನಾಡಿದ್ದನ್ನು ಕೂಡ  ನೆನಪಿಸಿಕೊಂಡಿದ್ದಾರೆ.
View this post on Instagram


A post shared by Akshay Kumar (@akshaykumar)


ಇದನ್ನೂ ಓದಿ: ತಾಯಿಯ ನಿಧನದ ನಂತರ ಮತ್ತೆ ಚಿತ್ರೀಕರಣಕ್ಕೆ ಲಂಡನ್​ಗೆ ಹಾರಿದ ಅಕ್ಷಯ್ ಕುಮಾರ್

ಇದೀಗ ಅಕ್ಷಯ್ ಕುಮಾರ ಚಿತ್ರೀಕರಣಕ್ಕೆ ಮರಳಿದ್ದಾರೆ. ಅಕ್ಷಯ್ ಸಂಪೂರ್ಣವಾಗಿ  ವೃತ್ತಿಪರತೆ ಮತ್ತು  ಜನರು  ಮುಂದಿನ ದಿನಗಳನ್ನು ಗಮನಿಸಿ ಮುಂದುವರೆಯಬೇಕು ಎಂಬ  ಮಾತನ್ನು ನಂಬುತ್ತಾರೆ. 100 % ಜನರು ನಿರ್ಮಾಣ ತಂಡ ಮತ್ತು ಸಿಬ್ಬಂದಿಯಲ್ಲಿ ಭಾಗಿಯಾಗಿರುವುದರಿಂದ ಚಲನಚಿತ್ರದ ಶೂಟಿಂಗ್‌ಗಳನ್ನು ಸ್ಥಗಿತಗೊಳಿಸಿದಾಗ, ವಿಶೇಷವಾಗಿ ನಡೆಯುತ್ತಿರುವ ಈ ಕೊರೊನಾ ಕಠಿಣ ಸಮಯದಲ್ಲಿ ಹಣಕಾಸಿನ ಸಮಸ್ಯೆಯ ಗಂಭೀರತೆಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ತನ್ನ ತಾಯಿಯೊಂದಿಗೆ ಕಳೆದ ಕೆಲವು ದಿನಗಳಲ್ಲಿ ಇದ್ದರು, ಕಳೆದೆರಡು ದಿನಗಳಿಂದ ಎಲ್ಲಾ ಆಚರಣೆಗಳನ್ನು ಮಾಡಿ ಮುಗಿಸಿದ್ದು, ಇದೀಗ ಚಿತ್ರೀಕರಣ ಪುನಾರಂಭವಾಗಿದೆ.

ಸಿಂಡ್ರೆಲಾ ಚಿತ್ರವು 2018 ರ ತಮಿಳು ಚಿತ್ರ ರತ್ಸಾಸನ್‌ನ  ರಿಮೇಕ್ ಆಗಿದ್ದು,  ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಅಭಿನಯಿಸಿದ್ದಾರೆ.  ಅಕ್ಷಯ್ ವೃತ್ತಿ ವಿಷಯದಲ್ಲಿ ಅದ್ಭುತವಾದ ಪ್ಯಾಕ್  ವೇಳಾಪಟ್ಟಿಯನ್ನು ಹೊಂದಿದ್ದಾರೆ. ಅವರು ಭೂಮಿ ಪೆಡ್ನೇಕರ್  ಜೊತೆ ರಕ್ಷಾ ಬಂಧನ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು,  ಓ ಮೈ ಗಾಡ್ 2 ಮತ್ತು ರಾಮ ಸೇತು ಚಿತ್ರಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್  ಸ್ಪೈ ಥ್ರಿಲ್ಲರ್ ಬೆಲ್ ಬಾಟಮ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗೂ  ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ತಮಿಳು ಬ್ಲಾಕ್‌ಬಸ್ಟರ್‌ನ ಹಿಂದಿ ರೀಮೇಕ್, ಸೂರರೈ ಪೊಟ್ರು ಹಿಂದಿ ರಿಮೇಕ್​ನಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಆದಿಪುರುಷ ಚಿತ್ರ ವಿಶಿಷ್ಟ ಮತ್ತು ವಿಭಿನ್ನ - ತಮ್ಮ ಮುಂದಿನ ಚಿತ್ರದ ಬಗ್ಗೆ ಸೈಫ್ ಮಾತು ..

ಇದಿಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಗಳನ್ನು ತೆರೆಯ ಮೇಲೆ ರಂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಮೊದಲಿನಿಂದಲೂ ಕೆಲಸದ ವಿಚಾರದಲ್ಲಿ  ಬದ್ಧತೆಯನ್ನು ಕಾಪಾಡಿಕೊಂಡಿದ್ದಾರೆ.  ಅವರು ಸಮಯ ಮತ್ತು ಆರೋಗ್ಯ ವಿಚಾರದಲ್ಲಿ ಕೂಡ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.
Published by:Sandhya M
First published: