• Home
  • »
  • News
  • »
  • entertainment
  • »
  • Gandhada Gudi-Narendra Modi: ಗಂಧದ ಗುಡಿ ಟ್ರೈಲರ್​​ಗೆ ಮೋದಿ ಪ್ರತಿಕ್ರಿಯೆ

Gandhada Gudi-Narendra Modi: ಗಂಧದ ಗುಡಿ ಟ್ರೈಲರ್​​ಗೆ ಮೋದಿ ಪ್ರತಿಕ್ರಿಯೆ

ಗಂಧದ ಗುಡಿ ಟ್ರೈಲರ್​​ಗೆ ಮೋದಿ ಪ್ರತಿಕ್ರಿಯೆ

ಗಂಧದ ಗುಡಿ ಟ್ರೈಲರ್​​ಗೆ ಮೋದಿ ಪ್ರತಿಕ್ರಿಯೆ

Narendra Modi Reacts to Gandhada gudi: ಪ್ರಧಾನಿ ನರೇಂದ್ರ ಅವರು ಗಂಧದ ಗುಡಿ ಟ್ರೈಲರ್ ನೋಡಿ ಪ್ರತಿಕ್ರಿಯಿಸಿದ್ದಾರೆ.

  • Share this:

ಪುನೀತ್ ರಾಜ್​ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಟ್ರೈಲರ್ ರಿಲೀಸ್ ಆಗಿದ್ದು ಟ್ವಿಟರ್​​ನಲ್ಲಿ ಈಗಾಗಲೇ ಟ್ರೆಂಡ್ ಆಗಿದೆ. ಅಪ್ಪು ಅಭಿಮಾನಿಗಳು ಅದ್ಭುತ ಪ್ರಕೃತಿ ಸೌಂದರ್ಯವನ್ನು ತೋರಿಸುವ ಈ ಟ್ರೈಲರ್ (Trailer) ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ ರಾಜ್ ಕುಮಾರ್ (Ashwini Puneeth Rajkumar) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿಶೇಷವಾಗಿ ಟ್ರೈಲರ್ ಜೊತೆ ಟ್ವೀಟ್ ಮಾಡಿದ್ದು ಇದಕ್ಕೆ ಪ್ರಧಾನಿ ಮೋದಿ ಕೂಡಾ ಪ್ರತಿಕ್ರಿಯಿಸಿದ್ದಾರೆ. ಎರಡು ದಿನಗಳ ಹಿಂದೆ ಪಿಆರ್​ಕೆ ಪ್ರೊಡಕ್ಷನ್ (PRK Productions) ಅಕ್ಟೋಬರ್ 9ರಂದು ಗಂಧದ ಗುಡಿ ಡಾಕ್ಯುಮೆಂಟರಿ ಟ್ರೈಲರ್ ರಿಲೀಸ್ ಮಾಡುವ ಅಪ್ಡೇಟ್ ಕೊಟ್ಟಿತ್ತು. ಅದರಂತೆ ಈಗ ಟ್ರೈಲರ್ ರಿಲೀಸ್ ಆಗಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಡ್ರೀಮ್​ ಪ್ರಾಜೆಕ್ಟ್ ಟೈಟಲ್​ ಹಾಗೂ ಟೀಸರ್ ಬಿಡುಗಡೆಯಾಗಿತ್ತು. ಬಹುದೊಡ್ಡ ಕನಸಿನೊಂದಿಗೆ ಅಪ್ಪು (Appu) ರೂಪಿಸಿರೋ ವೈಲ್ಡ್ ಲೈಫ್ ಜಗತ್ತಿನ ಕಥೆಯ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಇದರ ಹೊಸ ಪೋಸ್ಟರ್​ ರಿಲೀಸ್ ಆಗಿದೆ. ಪಿಆರ್‌ಕೆ ಸ್ಟುಡಿಯೋ 'ಗಂಧದ ಗುಡಿ'ಯ ಟ್ರೈಲರ್ ಬಿಡುಗಡೆ ಮಾಡಿದೆ.


ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾಡಿರುವ ಟ್ವೀಟ್ ಏನು?


ನಮಸ್ತೆ ನರೇಂದ್ರ ಮೋದಿ ಅವರೇ, ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಪ್ರಾಜೆಕ್ಟ್ #ಗಂಧದಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವ ನಮಗೆ ಇಂದು ಭಾವನಾತ್ಮಕ ದಿನ. ಅಪ್ಪು ಯಾವಾಗಲೂ ನಿಮ್ಮೊಂದಿಗಿನ ಸಂಭಾಷೆಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು, ಇದನ್ನು ನಿಮ್ಮೊಂದಿಗೆ ವೈಯಕ್ತಿಕವಾಗಿ ಹಂಚಿಕೊಳ್ಳಲು  ಅವರು ಇಷ್ಟಪಡುತ್ತಿದ್ದರು ಎಂದು ಟ್ರೈಲರ್ ಲಿಂಕ್ ಸೇರಿದ್ದಾರೆ.






ಮೋದಿ ಏನಂದರು?


ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು. ಅವರು ಶಕ್ತಿಯುತವಾಗಿದ್ದರು. ಅಪ್ರತಿಮ ಪ್ರತಿಭೆಯಿಂದ ಆಶೀರ್ವದಿಸಲ್ಪಟ್ಟವರು ಅವರು. ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಎಂದು ಉತ್ತರಿಸಿದ್ದಾರೆ.



ಇದನ್ನೂ ಓದಿ: Gandhada Gudi Trailer: ಧುಮ್ಮಿಕ್ಕುವ ಜಲಪಾತ, ಆನೆಗಳ ಹಿಂಡು! ಗಂಧದ ಗುಡಿ ಟ್ರೈಲರ್​​ನಲ್ಲಿ ಪ್ರಕೃತಿಯ ದೃಶ್ಯ ವೈಭವ


ಸಾಕಷ್ಟು ಕುತೂಹಲ ಮೂಡಿಸಿದ ಗಂಧದ ಗುಡಿ ಟ್ರೈಲರ್


ಗಂಧದ ಗುಡಿ ಟ್ರೈಲರ್​ನಲ್ಲಿ ಪ್ರೇಕ್ಷಕರಿಗೆ ಭರ್ಜರಿ ದೃಶ್ಯ ವೈಭವ ಸಿಗಲಿದೆ. ನಿಸರ್ಗದ ನೈಜ್ಯತೆ ದೃಶ್ಯಗಳ ರೂಪದಲ್ಲಿ ಕಣ್ಮುಂದೆ ಬರಲಿದೆ. ಕರ್ನಾಟಕದ ಅರಣ್ಯ ಸಂಪತ್ತನ್ನು ಅತ್ಯಂತ ಸಹಜ ರೀತಿಯಲ್ಲಿ ಪ್ರೇಕ್ಷಕರು ಇಲ್ಲಿ ವೀಕ್ಷಿಸಬಹುದು.




ಈ ಟ್ರೈಲರ್ ಈಗಾಗಲೇ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಡಾಕ್ಯುಮೆಂಟರಿ ಬಗ್ಗೆ ಪ್ರೇಕ್ಷಕರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಎಲ್ಲವನ್ನೂ ಅಪ್ಪು ಆಪ್ತವಾಗಿ, ಹತ್ತಿರದಿಂದ ನೋಡುವುದನ್ನು, ಅನುಭವಿಸುವುದನ್ನು ನಾವಿದರಲ್ಲಿ ಕಾಣಬಹುದು. ಡ್ರೋನ್ ದೃಶ್ಯಗಳನ್ನು, ಬಾನೆತ್ತರ ಬೆಳೆದ ಮರಗಳನ್ನೂ, ವನ್ಯ ಜೀವಿಗಳನ್ನೂ ಸುಂದರವಾಗಿ ತೋರಿಸಲಾಗಿದೆ.

Published by:Divya D
First published: