ಗೋಲ್ಡನ್ ಗ್ಲೋಬ್ಸ್ ಅವಾರ್ಡ್ನಲ್ಲಿ (Golden Globes Award) ಭಾರತದ ತ್ರಿಬಲ್ ಆರ್ (RRR) ಸಿನಿಮಾ ಪ್ರಶಸ್ತಿಯೊಂದನ್ನು (Award) ಮುಡಿಗೇರಿಸಿಕೊಂಡಿದೆ. ತ್ರಿಬಲ್ ಆರ್ ಸಿನಿಮಾದ ನಾಟು ನಾಟು (Natu Natu) ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಅವಾರ್ಡ್ (Best Original Song Award) ಪಡೆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಡೀ ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ತ್ರಿಬಲ್ ಆರ್ ತಂಡ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ಗಾಗಿ ಈಗಾಗಲೇ ಲಾಸ್ ಏಂಜಲೀಸ್ಗೆ ಹಾರಿದೆ. ಅಲ್ಲಿ ನಡೆದ ಅವಾರ್ಡ್ ಫಂಕ್ಷನ್ನಲ್ಲಿ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಹಾಡನ್ನು ಬೆಸ್ಟ್ ಒರಿಜಿನಲ್ ಸಾಂಗ್ ಆಡಿ ಅನೌನ್ಸ್ ಮಾಡಿ ವಿನ್ನರ್ ಆಗಿ ಘೋಷಿಸಲಾಗಿದೆ.
ಮೋದಿ ಶುಭಾಶಯ
ಬಹಳ ವಿಶೇಷವಾದ ಸಾಧನೆಗೆ ಅಭಿನಂದನೆಗಳು ಎಂಎಂ ಕೀರವಾಣಿ. ಪ್ರೇಮ್ ರಕ್ಷಿತ್, ಕಾಲ ಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗುಂಜ್ ಅವರನ್ನು ನಾನು ಅಭಿನಂದಿಸುತ್ತಿದ್ದೇನೆ. ಎಸ್ ಎಸ್ ರಾಜಮೌಲಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜ ಮತ್ತು ಇಡೀ ಆರ್ಆರ್ಆರ್ ಸಿನಿಮಾ ತಂಡಕ್ಕೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ವಿಡಿಯೋ ಟ್ವೀಟ್ ಮಾಡಿದ ಪ್ರಧಾನಿ
ಪ್ರಧಾನಿ ಮೋದಿ ಅವರು ತ್ರಿಬಲ್ ಆರ್ ಮೂವಿ ಸಿನಿಮಾದ ಟ್ವಿಟರ್ ಖಾತೆ ಟ್ವೀಟ್ ಮಾಡಿದ ವಿಡಿಯೋವನ್ನು ರೀಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಅವಾರ್ಡ್ ಅನೌನ್ಸ್ ಮಾಡುವಾಗ ತ್ರಿಬಲ್ ಆರ್ ತಂಡ ಖುಷಿಯಲ್ಲಿ ಎದ್ದು ಸಂಭ್ರಮಿಸುವುದನ್ನು ಕಾಣಬಹುದು.
A very special accomplishment! Compliments to @mmkeeravaani, Prem Rakshith, Kaala Bhairava, Chandrabose, @Rahulsipligunj. I also congratulate @ssrajamouli, @tarak9999, @AlwaysRamCharan and the entire team of @RRRMovie. This prestigious honour has made every Indian very proud. https://t.co/zYRLCCeGdE
— Narendra Modi (@narendramodi) January 11, 2023
ಇದನ್ನೂ ಓದಿ: RRR: ನಾಚೊ ನಾಚೊ ಡ್ಯಾನ್ಸ್ ಮೇನಿಯಾ! ಹುಕ್ಸ್ಟೆಪ್ ಟ್ರೈ ಮಾಡಿ 4 ಲಕ್ಷ ಜನರ ಕಾಲು ಟ್ವಿಸ್ಟ್
SS ರಾಜಮೌಳಿಯವರ ಬ್ಲಾಕ್ಬಸ್ಟರ್ ಹಾಲಿವುಡ್ನ ಅತಿದೊಡ್ಡ ಪ್ರಶಸ್ತಿಗಳಲ್ಲಿ ಒಂದಾಗಿರುವ ಪ್ರಶಸ್ತಿ ಪಡೆದಿದೆ. ವಿಶ್ವಾದ್ಯಂತ ವೈರಲ್ ಆದಂತಹ ನಾಟು ನಾಟು ಹಾಡಿಗಾಗಿ ಅತ್ಯುತ್ತಮ ಒರಿಜಿನಲ್ ಸಾಂಗ್ ಅವಾರ್ಡ್ ಗೆದ್ದಿದೆ.
And the GOLDEN GLOBE AWARD FOR BEST ORIGINAL SONG Goes to #NaatuNaatu #GoldenGlobes #GoldenGlobes2023 #RRRMovie
pic.twitter.com/CGnzbRfEPk
— RRR Movie (@RRRMovie) January 11, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ