ಮೂರೇ ತಿಂಗಳಲ್ಲಿ ಸಿದ್ಧವಾಯ್ತು ಮೋದಿ ಬಯೋಪಿಕ್​!; ಲೋಕಸಭಾ ಚುನಾವಣೆ ನಡುವೆಯೇ ತೆರೆಗೆ ಬರಲಿದೆ ಪ್ರಧಾನಿ ಜೀವನ ಕಥೆ

Narendra Modi biopic: ಸಾಕಷ್ಟು ಕೆಲಸಗಳು ಬಾಕಿ ಇರುವುದರಿಂದ ಈ ಸಿನಿಮಾ ಲೋಕಸಭಾ ಚುನಾವಣೆಗೆ ಮೊದಲು ತೆರೆಕಾಣುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ, ಸಿನಿಮಾದ ಶೂಟಿಂಗ್​​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಏ.12ರಂದು ಚಿತ್ರ ತೆರೆಗೆ ಬರುತ್ತಿದೆ.

Rajesh Duggumane | news18
Updated:March 16, 2019, 10:28 AM IST
ಮೂರೇ ತಿಂಗಳಲ್ಲಿ ಸಿದ್ಧವಾಯ್ತು ಮೋದಿ ಬಯೋಪಿಕ್​!; ಲೋಕಸಭಾ ಚುನಾವಣೆ ನಡುವೆಯೇ ತೆರೆಗೆ ಬರಲಿದೆ ಪ್ರಧಾನಿ ಜೀವನ ಕಥೆ
ನರೇಂದ್ರ ಮೋದಿ ಚಿತ್ರದ ಮೊದಲ ಫೋಸ್ಟರ್​
Rajesh Duggumane | news18
Updated: March 16, 2019, 10:28 AM IST
ನವದೆಹಲಿ (ಮಾ.16): ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್​ ಸಿದ್ಧಗೊಳ್ಳಲಿದೆ ಎನ್ನುವ ವಿಚಾರ ಎರಡು ತಿಂಗಳ ಹಿಂದಷ್ಟೇ ಘೋಷಣೆ ಆಗಿತ್ತು. ಈಗ ಸಿನಿಮಾ ಕೆಲಸಗಳು ಅಂತಿಮ ಹಂತ ತಲುಪಿದ್ದು, ಬಿಡುಗಡೆಗೆ ಸಿದ್ಧವಾಗಿದೆ! ಅಚ್ಚರಿ ಎಂದರೆ ಮೋದಿ ಬಯೋಪಿಕ್​ ಲೋಕಸಭಾ ಚುನಾವಣೆ ಸಮಯದಲ್ಲೇ ಬಿಡುಗಡೆ ಆಗುತ್ತಿದೆ. ಇದಕ್ಕೆ ಕಾಂಗ್ರೆಸ್​ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚುನಾವಣೆ ಸಮಯದಲ್ಲೇ ಮೋದಿ ಬಯೋಪಿಕ್​ ಬಿಡುಗಡೆ ಆಗುತ್ತಿರುವುದಕ್ಕೆ ವಿವಾದ ಸೃಷ್ಟಿಯಾಗುವ ಲಕ್ಷಣ ಗೋಚರವಾಗಿದೆ.

ಎರಡು ತಿಂಗಳ ಹಿಂದೆ ‘ಪಿಎಂನರೇಂದ್ರಮೋದಿ’ ಬಯೋಪಿಕ್​ ಸಿದ್ಧಗೊಳ್ಳಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ವಿವೇಕ್​ ಒಬೆರಾಯ್​ ಅವರು ಮೋದಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಫಸ್ಟ್​ಲುಕ್​ ಕೂಡ ರಿಲೀಸ್​ ಆಗಿತ್ತು. ಆದರೆ, ಸಾಕಷ್ಟು ಕೆಲಸಗಳು ಬಾಕಿ ಇರುವುದರಿಂದ ಈ ಸಿನಿಮಾ ಲೋಕಸಭಾ ಚುನಾವಣೆಗೆ ಮೊದಲು ತೆರೆಕಾಣುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ, ಸಿನಿಮಾದ ಶೂಟಿಂಗ್​​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಏ.12ರಂದು ಚಿತ್ರ ತೆರೆಗೆ ಬರುತ್ತಿದೆ.


Loading...

ಇದನ್ನೂ ಓದಿ: ಸಿನಿಮಾಗೂ ಮುನ್ನ ಬರಲಿದೆ 'ಮೋದಿ' ತೆರೆಮರೆಯ ಕಥೆ​: ಪ್ರಧಾನಿ ಪಾತ್ರದಲ್ಲಿ ನಟಿಸಲಿರುವ 'ಖಾನ್' ಯಾರು ಗೊತ್ತಾ?

‘ಮೇರಿಕೋಮ್​’ ಮೊದಲಾದ ಬಯೋಪಿಕ್​ಗಳನ್ನು ನಿರ್ದೇಶನ ಮಾಡಿರುವ ಒಮಂಗ್​ ಕುಮಾರ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಏಪ್ರಿಲ್​ 11ರಿಂದ ಲೋಕಸಭೆ ಚುನಾವಣೆ ಆರಂಭಗೊಳ್ಳಲಿದೆ. ಚುನಾವಣೆ ಆರಂಭವಾದ ಮರುದಿನವೇ ಸಿನಿಮಾ ತೆರೆಗೆ ಬರುತ್ತಿದೆ. ಹಾಗಾಗಿ, ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕಾಂಗ್ರೆಸ್​ ನಾಯಕರು ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಆಗ್ರಹಿಸಿದ್ದಾರೆ. ಮೋದಿ ಬಯೋಪಿಕ್​ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್​ ಕಳವಳ ವ್ಯಕ್ತಪಡಿಸಿದೆ.ಇನ್ನು ಸಿನಿಮಾ ಇಷ್ಟು ಬೇಗ ಸಿದ್ಧಗೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮ್ಯಾಗಿಯಂತೆ ಎರಡು ನಿಮಿಷಗಳಲ್ಲಿ ಸಿನಿಮಾ ಸಿದ್ಧಗೊಂಡಿತಲ್ಲ ಎಂದು ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ...!

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626