ಕನ್ನಡದ ಕಾಂತಾರ ಸಿನಿಮಾ (Kantara Movie) ದೇಶದಾದ್ಯಂತ ದೊಡ್ಡ ಮ್ಯಾಜಿಕ್ ಮಾಡಿದ ಚಿತ್ರ. ಟಾಲಿವುಡ್, ಬಾಲಿವುಡ್, ಕಾಲಿವುಡ್ನಲ್ಲಿ ಸೂಪರ್ ಸಕ್ಸಸ್ ಕಂಡಿದೆ. ಚಿತ್ರ ನೋಡಿದ ಪ್ರೇಕ್ಷಕರು ಹಾಗೂ ಬೇರೆ ಬೇರೆ ಭಾಷೆಯ ನಟ-ನಟಿಯರು ಕೂಡ ರಿಷಬ್ ಶೆಟ್ಟಿ (Rishab Shetty) ನಟನೆ ಹಾಗೂ ನಿರ್ದೇಶನವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ ಅನೇಕ ರಾಜಕಾರಣಿಗಳು ಕೂಡ ಕಾಂತಾರ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಹಾಡಿದ್ದಾರೆ. ಕರ್ನಾಟಕಕ್ಕೆ ಬಂದ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ಮಾತಾಡಿದ್ರು. ಗೃಹ ಸಚಿವ ಅಮಿತ್ ಶಾ ಸಹ ಕಾಂತಾರ ಸಿನಿಮಾ ನೋಡಿ ತುಳುನಾಡ ದೈವ, ಸಂಸ್ಕೃತಿ ಬಗ್ಗೆ ಮಾತಾಡಿ ಕರುನಾಡ ಜನರ ಮನಗೆದ್ದಿದ್ದರು. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂತಾರ ಸಿನಿಮಾದ ಅತ್ಯಂತ ಜನಪ್ರಿಯ ಹಾಡು ವರಾಹ ರೂಪಂ ಹಾಡಿಗೆ ವೇದಿಕೆ ಮೇಲೆ ಮಾಡಿದ ನೃತ್ಯವನ್ನು ವೀಕ್ಷಿಸಿದ್ದಾರೆ.
ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮ
ಫೆಬ್ರವರಿ 25 ರಂದು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ರು. ದೆಹಲಿಯ ಕರ್ನಾಟಕ ಸಂಘ ಕರ್ನಾಟಕದ ಚಾರಿತ್ರಿಕ ಪಾರಂಪರಿಕ ಸಂಭ್ರಮಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತಿ. ವಿಶೇಷ ಅತಿಥಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಕಾಂತಾರ ವರಾಹ ರೂಪಂ ಹಾಡಿಗೆ ನೃತ್ಯ
ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಕಲಾ ತಂಡ ಕಾಂತಾರ ಸಿನಿಮಾ ಹಾಡಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆಯಿತು. ವರಾಹ ರೂಪಂ ಹಾಡಿಗೆ ಮಾಡಿದ ನೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸಹ ವೀಕ್ಷಿಸಿದ್ರು. ವಿದ್ವಾನ್ ಕೋಲಾರ್ ರಮೇಶ್ ನೇತೃತ್ವದಲ್ಲಿ ನೃತ್ಯ ರೂಪಕವನ್ನ ಪ್ರದರ್ಶನ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೂಡ ಭಾಗವಹಿಸಿದ್ರು.
Watch glimpses of Barisu Kannada Dim Dimava Cultural Festival at Talkatora Stadium, Delhi. pic.twitter.com/iN9m1hPvqv
— Prasar Bharati News Services & Digital Platform (@PBNS_India) February 25, 2023
ಕರ್ನಾಟಕಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಜಭವನದಲ್ಲಿ ಸಿನಿಮಾ ಗಣ್ಯರ ಜೊತೆ ಸಂವಾದ ನಡೆಸಿದ್ರು. ಈ ವೇಳೆ ರಿಷಬ್ ಶೆಟ್ಟಿ ಜೊತೆ ಕೂಡ ಮೋದಿ ಮಾತಾಡಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಮಂಗಳೂರಿನಲ್ಲಿ ತುಳನಾಡ ಸಂಸ್ಕೃತಿ ಬಗ್ಗೆ ಕೊಂಡಾಡುವ ಮೂಲಕ ಕರುನಾಡ ಜನರ ಮನಗೆದ್ದಿದ್ದರು.
ನನ್ನ ಪಾಲಿನ ಹೆಮ್ಮೆಯ ಕ್ಷಣ ಎಂದ ರಿಷಬ್
ಸಂವಾದದಲ್ಲಿ ಪ್ರಧಾನಿ ನರೇಂದ್ರ ಯಾವ ವಿಚಾರಗಳ ಬಗ್ಗೆ ಮಾತಾಡಿದ್ರು ಎಂದು ರಿಷಬ್ ಶೆಟ್ಟಿ ಕೂಡ ವಿವರಿಸಿದ್ದರು. ಕಾಂತಾರ ಸಿನಿಮಾ ಬಗ್ಗೆ ಪ್ರಧಾನಿ ಮಾತನಾಡಿದ್ದು ಹೆಚ್ಚು ಖುಷಿ ನೀಡಿತು. ಇದು ತನ್ನ ಪಾಲಿನ ಹೆಮ್ಮೆಯ ಕ್ಷಣವಾಗಿದೆ ಎಂದು ರಿಷಬ್ ಹೇಳಿದ್ದರು.
ಕನಸು ನನಸಾದ ಕ್ಷಣ ಇದು
ಕನಸು ನನಸಾದ ಕ್ಷಣ ಇದು ಎಂದು ರಿಷಬ್ ಹೇಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾನ್ ನಾಯಕರೆಂದು ಕರೆಯುತ್ತೇನೆ. ಅವರನ್ನು ಭೇಟಿ ಮಾಡಿದ್ದು ತುಂಬಾ ಖುಷಿ ಆಗಿದೆ. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲಾ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನೂ ಏನೆಲ್ಲಾ ಬೇಕು ಎಂಬ ಬಗ್ಗೆ ತಿಳಿಸಿದ್ರು. ಅಷ್ಟೇ ಅಲ್ಲದೇ ಅವರ ಮುಂದಿನ ಯೋಜನೆ ಬಗ್ಗೆ ಕೂಡ ನಮಗೆ ತಿಳಿಸಿದ್ದಾರೆ ಎಂದು ರಿಷಬ್ ಶೆಟ್ಟಿ ಈ ಹಿಂದೆ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ