ಗಗನಸಖಿ ಅಮ್ಮನ ಕನಸನ್ನು ನನಸು ಮಾಡಿದ ಪೈಲಟ್​ ಮಗಳು..!

news18
Updated:July 31, 2018, 5:16 PM IST
ಗಗನಸಖಿ ಅಮ್ಮನ ಕನಸನ್ನು ನನಸು ಮಾಡಿದ ಪೈಲಟ್​ ಮಗಳು..!
news18
Updated: July 31, 2018, 5:16 PM IST
-ನ್ಯೂಸ್​ 18 ಕನ್ನಡ 

ಬಾಲ್ಯದಲ್ಲಿ ಮೊದಲ ಗುರುವಾಗಿ ತಿದ್ದಿ, ತೀಡಿ ಮಕ್ಕಳ ಬದುಕನ್ನು ರೂಪಿಸುವುದೇ ತಾಯಿ. ಅಂಥ ಮಮತಾಮಯಿಗೆ ಮಕ್ಕಳು ಬೆಳೆದು ತನಗಿಂತ ಉತ್ತಮ ಸ್ಥಾನಕ್ಕೇರಿದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ.  ಅದರಲ್ಲೂ ಅಮ್ಮನ ಕನಸನ್ನು ಮಕ್ಕಳು ನನಸಾಗಿಸಿದರೆ ಅದಕ್ಕಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ.

ಹೌದು, ಇಂತಹದ್ದೇ ಒಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಏರ್​ ಇಂಡಿಯಾದ ವಿಮಾನ. ಏರ್​ ಇಂಡಿಯಾದಲ್ಲಿ 38 ವರ್ಷಗಳ ಕಾಲ ಗಗನಸಖಿಯಾಗಿ ಸೇವೆ ಸಲ್ಲಿಸಿದ ತಾಯಿಯ ಕೆಲಸದ ಕಡೆಯ ವಿಮಾನಯಾನಕ್ಕೆ ಮಗಳೇ ಪೈಲಟ್​ ಆದ ಅವಿಸ್ಮರಣೀಯ ಘಟನೆ ಇಂದು ನಡೆದಿದೆ.

'ತಾಯಿಯ ಕೆಲಸದ ಕೊನೆಯ ದಿನ, ನಾನೇ ಅವರಿರುವ ವಿಮಾನದ  ಪೈಲೆಟ್​ ಆಗಬೇಕು ಎನ್ನುವುದು ಅವರ ಕನಸಾಗಿತ್ತು. ಅದರಂತೆ 38 ವರ್ಷದ ಸೇವೆಯ ನಂತರ ಅವರು ನಿವೃತ್ತಿ ಹೊಂದಲಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಮಗಳು ಆಶ್ರಿತಾ  ಟ್ವೀಟ್​ ಮಾಡಿದ್ದಾರೆ.

So happy and honoured to be able to pilot the one flight that mattered. It was my mom’s dream to have me pilot her last flight as an Air Hostess with @airindiain :) As she retires after her glorious 38 years of service, I will be carrying on with her legacy 😇 #grateful #proud pic.twitter.com/zcUTNCENzj

Loading...ವಿಮಾನದಲ್ಲಿ ಇವರ ನಿವೃತ್ತಿಯ ಬಗ್ಗೆ ಪೈಲೆಟ್​ ಪ್ರಕಟಿಸುತ್ತಿದ್ದಂತೆಯೇ, ಅಲ್ಲಿದ್ದ ಪ್ರಯಾಣಿಕರೆಲ್ಲರೂ ಚಪ್ಪಾಳೆಯ ಮೂಲಕ ಅವರಿಗೆ ಶುಭಕೋರಿದರೆ, ಸಹೋದ್ಯೋಗಿಗಳು ಆನಂದಭಾಷ್ಪದೊಂದಿಗೆ ಬೀಳ್ಕೊಟ್ಟರು. ಆ ಭಾವನಾತ್ಮಕ ಕ್ಷಣದ ವಿಡಿಯೋ ನಿಮಗಾಗಿ...

For all of you who asked :) that’s mom on her last flight as an operating cabin crew for @airindiain what a lovely day and what amazing passengers! So many best wishes and hugs ♥️ of course I was in the flight deck :) #proud #grateful pic.twitter.com/eUL3Og4EBrಏರ್​ ಇಂಡಿಯಾದ ಪೈಲಟ್​ ಆಶ್ರಿತಾ ಚಿನ್​ಚೆಂಕರ್ ಅವರ ಗಗನಸಖಿ ತಾಯಿಗೆ ವಿಮಾನದ ಫಸ್ಟ್​ ಆಫಿಸರ್​ ಆಗಿ ಇಂದು ಬೀಳ್ಕೊಡುಗೆ ನೀಡಿದ್ದಾರೆ. ಏರ್​ ಇಂಡಿಯಾದಲ್ಲೇ ಕಳೆದ 38 ವರ್ಷಗಳಿಂದ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾಯಿಗೆ ತಾನೇ ಕಡೆಯ ವಿಮಾನಯಾನದ ಪೈಲಟ್​ ಆಗಿದ್ದು, ನಿಜಕ್ಕೂ ಹೆಮ್ಮೆಯ ವಿಷಯ ಎಂದು ಅವರು ಟ್ವೀಟ್​ ಮಾಡಿದ್ದು, ಅದು ವೈರಲ್​ ಆಗಿದೆ. ಈ ಟ್ವೀಟ್​ಗೆ ಜಾಲತಾಣಿಗರಿಂದ ಶುಭ ಹಾರೈಕೆ ಹಾಗೂ ಹೃದಯಪೂರ್ವ ಕ ಅಭಿನಂದನೆಗಳ ಮಹಾ ಪೂರವೇ ಹರಿದು ಬರುತ್ತಿದೆ. ಆಶ್ರಿತಾ ಅವರ ಟ್ವೀಟ್​ಗೆ ಮಾಜಿ ಕೇಂದ್ರ ಸಚಿವ ಪ್ರಫುಲ್​ ಪಟೇಲ್​ ಸಹ ಪ್ರತಿಕ್ರಿಯಿಸಿದ್ದಾರೆ.'ನಾಳೆ ನನ್ನ ತಾಯಿಯ ಕೆಲಸದ ಕಡೆಯ ದಿನ, ಅವರ ನಿವೃತ್ತಿಯ ದಿನದಂದು ನಾನೇ ಪೈಲಟ್​ ಆಗಿ ಅವರ ವೃತ್ತಿಯ ಕಡೆಯ ವಿಮಾನಯಾನ ಮಾಡಿಸಲಿದ್ದೇನೆ. 38 ವರ್ಷದ ಸೇವೆಯ ಕಡೆಯ ಯಾನದಲ್ಲಿ ನಾನು ಅವರ ಫಸ್ಟ್​ ಆಫಿಸರ್​ ಆಗಲಿರುವುದು ಹೆಮ್ಮೆಯ ವಿಷಯ' ಎಂದು ಆಶ್ರಿತಾ ನಿನ್ನೆಯೇ (ಜು. 30) ಟ್ವೀಟ್​ ಮಾಡಿದ್ದರು.

Guys, tomorrow I will be flying with my mother on her retirement day, when she gracefully operates her last flight as an Air Hostess with @airindiain after 38 years of service 😊 privileged to be her first officer tomorrow! #proud #grateful #happyಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಜನರು ತಮ್ಮ ಅನುಭವ ಹಾಗೂ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ  ಏರ್​ ಇಂಡಿಯಾ ಪೈಲಟ್​ ಆಶ್ರಿತಾ ಹಂಚಿಕೊಂಡಿರುವ ಈ ಭಾವನಾತ್ಮಕ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626