Nikhil Kumaraswamy-Revathi: ನಿಖಿಲ್​ ಕುಮಾರಸ್ವಾಮಿ ಭಾವಿ ಪತ್ನಿ ರೇವತಿ ಜೊತೆ ತೆಗೆದ​ ಸೆಲ್ಫಿಗೂ ತಟ್ಟಿದ ಕೊರೋನಾ ಬಿಸಿ​..!

Nikhil Kumaraswamy-Revathi: ನಿಖಿಲ್​-ರೇವತಿ ವಿವಾಹ ಏ. 17ಕ್ಕೆ ನಿಶ್ಚಯವಾಗಿರುವ ಕಾರಣಕ್ಕೆ ಇನ್ನೂ ವಿವಾಹವನ್ನು ಮುಂದೂಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಇರಬೇಕು ನಿಖಿಲ್​ ಭಾವಿ ಪತ್ನಿ ರೇವತಿ ಜೊತೆ ದೇವಸ್ಥಾನ ಸುತ್ತುತ್ತಾ ಹೊಸ ಫೋಟೋಗಳನ್ನು ತೆಗೆಸಿಕೊಳ್ಳುತ್ತಾ ಜಾಲಿ ಮೂಡ್​ನಲ್ಲಿದ್ದಾರೆ.

ನಿಖಿಲ್​ -ರೇವತಿ

ನಿಖಿಲ್​ -ರೇವತಿ

  • Share this:
ನಿಖಿಲ್​ ಕುಮಾರಸ್ವಾಮಿ ಅವರ ಮದುವೆಗೆ ದಿನಗಣನೆ ಆರಂಭವಾಗಿದೆ. ಆದರೆ ಕೊರೋನಾ ಭೀತಿಯಿಂದಾಗಿ  ರೇವತಿ-ನಿಖಿಲ್ ವಿವಾಹ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯಕ್ಕೆ ರಾಜ್ಯದಲ್ಲಿ ಕೊರೋನಾ ಭೀತಿಯಿಂದಾಗಿ ನೂರಕ್ಕೂ ಹೆಚ್ಚು ಜನ ಸೇರಿಸಿ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದೂ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಮಾ.31ರವರೆಗೆ ಇದೆ. ಆದರೆ ಪರಿಸ್ಥಿತಿ ನಿಯಂತ್ರಕ್ಕೆ ಬಾರದೆ ಹೋದರೆ​ ಈ ಆದೇಶ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Interesting facts about Nikhil Kumaraswamy and Revathi Marriage Ceremony in Bangalore and Ramanagar
ನಿಖಿಲ್ ಕುಮಾರಸ್ವಾಮಿ- ರೇವತಿ


ಆದರೆ ನಿಖಿಲ್​-ರೇವತಿ ವಿವಾಹ ಏ. 17ಕ್ಕೆ ನಿಶ್ಚಯವಾಗಿರುವ ಕಾರಣಕ್ಕೆ ಇನ್ನೂ ವಿವಾಹವನ್ನು ಮುಂದೂಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಇರಬೇಕು ನಿಖಿಲ್​ ಭಾವಿ ಪತ್ನಿ ರೇವತಿ ಜೊತೆ ದೇವಸ್ಥಾನ ಸುತ್ತುತ್ತಾ ಹೊಸ ಫೋಟೋಗಳನ್ನು ತೆಗೆಸಿಕೊಳ್ಳುತ್ತಾ ಜಾಲಿ ಮೂಡ್​ನಲ್ಲಿದ್ದಾರೆ. 
View this post on Instagram
 

❤️🤳


A post shared by Nikhil Kumar (@nikhilgowda_jaguar) on


ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್​ವುಡ್​ ಯುವರಾಜನ ಚಿತ್ರಗಳದ್ದೇ ದರ್ಬಾರು. ಅವರು ಯಾವಾಗ ರೇವತಿ ಜೊತೆಗೆ ತೆಗೆದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೋ ಅವೆಲ್ಲ ವೈರಲ್​ ಆಗುತ್ತವೆ. ಇದೇ ಮೊದಲ ಬಾರಿಗೆ ನಿಖಿಲ್​ ರೇವತಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಇನ್ನೂ ಈ ಫೋಟೋ ನೋಡಿದ ನೆಟ್ಟಿಗರೊಬ್ಬರು ಸೆಲ್ಫಿಗೂ ಕೊರೋನಾ ಟಚ್ ಕೊಟ್ಟಿದ್ದಾರೆ.

Nikhil Kumaraswamy shares a first selfie with Revathi
ನಿಖಿಲ್​-ರೇವತಿ


'ಮಾಸ್ಕ್​ ತೊಟ್ಟು ಫೋಟೋ ಹಾಕಬೇಕಿತ್ತು. ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದಂತೆ ಆಗುತ್ತಿತ್ತು. ನಿಮ್ಮ ಬಳಿ ಜಾಗ್ವಾರ್​ ಸಿನಿಮಾದಲ್ಲಿ ತೊಟ್ಟಿದ್ದ ಮಾಸ್ಕ್​ ಇದೆ. ಆದರೆ ರೇವತಿ ಅವರ ಬಗ್ಗೆನೇ ಚಿಂತೆ ಎಂದು ಕಮೆಂಟ್ ಮಾಡಿದ್ದಾರೆ' ನೆಟ್ಟಿಗರೊಬ್ಬರು.

Pooja Hegde: ಬಾಲಿವುಡ್​ನಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಸಿಕ್ತು ಕೋಟಿ ಕೋಟಿ ಬಂಪರ್​ ಆಫರ್​
First published: