Photos: ಕಂಗನಾ ರನೋಟ್​ ಇದ್ದಕ್ಕಿದ್ಧಂತೆ ಆದಿಶಕ್ತಿ ಆಶ್ರಮಕ್ಕೆ ಭೇಟಿ ನೀಡಿದ್ದು ಏಕೆ?

news18
Updated:July 26, 2018, 4:12 PM IST
Photos: ಕಂಗನಾ ರನೋಟ್​ ಇದ್ದಕ್ಕಿದ್ಧಂತೆ ಆದಿಶಕ್ತಿ ಆಶ್ರಮಕ್ಕೆ ಭೇಟಿ ನೀಡಿದ್ದು ಏಕೆ?
news18
Updated: July 26, 2018, 4:12 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ ಕ್ವೀನ್​ ಕಂಗನಾ ರನೋಟ್​ ಅವರ ಕೆಲವು ಚಿತ್ರಗಳು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಅದು ಯಾವ ಚಿತ್ರಗಳು ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

 
ಸದ್ಯ 'ಮಣಿಕರ್ಣಿಕಾ: ದ ಕ್ವೀನ್​ ಆಫ್​ ಝಾನ್ಸಿ' ಹಾಗೂ 'ಮೆಂಟಲ್​ ಹೈ ಕ್ಯಾ' ಸಿನಿಮಾಗಳ ಚಿತ್ರೀಕರಣದಲ್ಲಿ ವ್ಯಸ್ತವಾಗಿರುವ ನಟಿ ಕಂಗನಾ ಇತ್ತೀಚೆಗಷ್ಟೆ ಕೊಯಂಬತ್ತೂರಿನಲ್ಲಿರುವ ಇಶಾ ಫೌಂಡೇಷನ್​ ಅವರ ಆದಿಶಕ್ತಿ ಆಶ್ರಮಕ್ಕೆ ಭೇಟಿ ನೀಡಿ ಕೆಲ ಸಮಯ ಕಳೆದಿದ್ದಾರೆ.

ಎರಡೆರಡು ಸಿನಿಮಾಗಳಲ್ಲಿ ವ್ಯಸ್ತವಾಗಿರುವ ಕಂಗನಾ ಈ ರೀತಿ ದಿಢೀರನೆ ಆಶ್ರಮಕ್ಕೆ ಭೇಟಿ ನೀಡಿ, ಶಿವಲಿಂಗದ ಪೂಜೆಯಲ್ಲಿ ತೊಡಗಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಶಿವ ಪೂಜೆಯೊಂದಿಗೆ ಕಂಗನಾ ಆಶ್ರಮದ ಮಕ್ಕಳೊಡನೆ ಸಹ ಸಮಯ ಕಳೆದಿದ್ದಾರೆ.

ಕಂಗನಾ ಆಸ್ರಮ ಭೇಟಿ ನೀಡಿ, ಶಿವ ಲಿಂಗಕ್ಕೆ ಪೂಜೆ ಮಾಡುತ್ತಿರುವ ಫೋಟೋಗಳನ್ನು ಕಂಗನಾ ಅಭಿಮಾನಿ ಪುಟದವರು ಶೇರ್​ ಮಾಡಿದ್ದು, ಈಗ ಅವು ವೈರಲ್​ ಆಗಿವೆ.

 First published:July 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ