Met Gala: ಅಯ್ಯೋ ಪಾಪ! ಆಲಿಯಾ ಭಟ್​ನನ್ನು ನೋಡಿ ಐಶ್ವರ್ಯಾ ಐಶ್ವರ್ಯಾ ಎಂದು ಕೂಗಿದ ಜನ

ಮೆಟ್​ ಗಾಲಾದಲ್ಲಿ ಆಲಿಯಾ ಭಟ್

ಮೆಟ್​ ಗಾಲಾದಲ್ಲಿ ಆಲಿಯಾ ಭಟ್

Met Gala: ಮೆಟ್​ ಗಾಲಾದಲ್ಲಿ ಆಲಿಯಾ ಭಟ್ ಮೊದಲ ಬಾರಿಗೆ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಆಲಿಯಾರನ್ನು ನೋಡಿ ಐಶ್ವರ್ಯಾ ಎಂದು ಜನ ಕೂಗಿದ್ದು ದಿಢೀರ್ ಬೆಳವಣಿಗೆ.

  • News18 Kannada
  • 3-MIN READ
  • Last Updated :
  • Mumbai, India
  • Share this:

ಆಲಿಯಾ ಭಟ್ ಅವರು ಮೆಟ್ ಗಾಲಾ 2023ರಲ್ಲಿ (MET Gala 2023) ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡರು. ಮುತ್ತುಗಳ (Pearls) ಉಡುಗೆಯಲ್ಲಿ (Dress) ಮುತ್ತಿನ ರಾಜಕುಮಾರಿಯಂತೆ ಕಾಣಿಸಿದ ಆಲಿಯಾ ಭಟ್ (Alia Bhatt) ಅವರ ರೆಡ್ ಕಾರ್ಪೆಟ್ ವಾಕ್  (Red Carpet Walk) ಅದ್ಭುತವಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು ಮೆಟ್ ಗಾಲಾದಲ್ಲಿ ಆಲಿಯಾ ಭಟ್ ಹೆಜ್ಜೆ ಹಾಕುತ್ತಿದ್ದಂತೆ ಅಲ್ಲಿದ್ದ ಜನರು ಐಶ್ವರ್ಯಾ ಮೇಡಂ ಈ ಕಡೆ ನೋಡಿ ಎಂದು ಪದೇ ಪದೇ ಕಿರುಚಿದ್ದಾರೆ. ಈ ಮೂಲಕ ಅಲ್ಲಿ ನೆರೆದಿದ್ದವರಲ್ಲಿ ಕೆಲವರಂತೂ ಆಲಿಯಾ ಭಟ್ ಅವರನ್ನು ಐಶ್ವರ್ಯಾ ಆಗಿ ತಪ್ಪು ತಿಳಿದಿದ್ದರು ಎನ್ನುವುದು ಕನ್ಫರ್ಮರ್ ಆಗಿದೆ. ಆಲಿಯಾ ಇದೇ ಮೊದಲ ಬಾರಿಗೆ ವಿಶ್ವದ ಅತ್ಯಂತ ದೊಡ್ಡ ಫ್ಯಾಷನ್ ಇವೆಂಟ್​ನಲ್ಲಿ ಭಾಗವಹಿಸಿದ್ದಾರೆ.


ಆಲಿಯಾ ಅವರು ಡ್ರೀಮಿ ಡ್ರೆಸ್​ನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯುವುದನ್ನು ಕಾಣಬಹುದು. ನಟಿ ಪ್ರಬಲ್ ಗುರುಂಗ್ ಐವರಿ ಸಿಲ್ಕ್ ಹಾಗೂ ಸಾಟಿನ್​ನಿಂದ ಮಾಡಲಾದ ಮುತ್ತುಗಳನ್ನು ಪೋಣಿಸಿ ಸಿದ್ಧ ಮಾಡಿದ್ದ ಡ್ರೆಸ್ ಧರಿಸಿದ್ದರು. ನಟಿ ತಮ್ಮ ಡಿಸೈನರ್ ಜೊತೆ ಮೆಟ್ ಗಾಲಾಗೆ ಬಂದಿದ್ದಾರೆ. ಆದರೆ ಆಲಿಯಾ ಬರುತ್ತಿದ್ದಂತೆ ಜನರು ಅವರನ್ನು ಐಶ್ವರ್ಯಾ ಎಂದು ಕರೆದಿರುವುದು ವಿಡಿಯೋ ವೈರಲ್ ಆಗಿದೆ.

A case of mistaken identity - Western media calls Alia Bhatt -‘Aishwarya’ at Met gala. Aishwarya always will be famous
by u/AntEducationals in BollyBlindsNGossip


ಆದರೆ ಆಲಿಯಾ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಥವಾ ಸಿಟ್ಟಾಗಿದ್ದು ಕಂಡುಬಂದಿಲ್ಲ. ಬದಲಾಗಿ ನಟಿ ಎಂದಿನಂತೆ ತಮ್ಮ ಮುದ್ದಾದ ನಗುವನ್ನು ತೋರಿಸಿ ಎಲ್ಲ ಕ್ಯಾಮೆರಾಗಳಿಗೂ ಪೋಸ್ ಕೊಟ್ಟಿದ್ದಾರೆ. ವಿಡಿಯೋ ಕ್ಲಿಪ್ ವೈರಲ್ ಆಗಿದ್ದು ಕಮೆಂಟ್ ಮಾಡಿದ ನೆಟ್ಟಿಗರು ಅವರು ಝೆಂದಾಯಾ ಹಾಗೂ ಟಾಮಿಗೆ ರಿವೆಂಜ್ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡಿ ಈ ಫೋಟೋಗ್ರಾಫರ್ಸ್ ಎಲ್ಲೋದ್ರೂ ಹೀಗೇನೆ ಎಂದಿದ್ದಾರೆ.


Bollywood Actress Alia Bhatt participate Met Gala 2023
ಆಲಿಯಾ ಭಟ್


ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರಿಗೆ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಗಾಲಾ ಇವೆಂಟ್​ನ ನೆನಪಾಗಿದೆ. ಅಲ್ಲಿಯೂ ಫೋಟೋಗ್ರಾಫರರ್ಸ್ ಹಾಲಿವುಡ್ ಸ್ಟಾರ್ಸ್ ಬಂದಾಗ ತಪ್ಪು ತಪ್ಪಾಗಿ ಅವರ ಹೆಸರುಗಳನ್ನು ಹೇಳಿದ್ದರು. ಅದರ ವಿಡಿಯೋ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


ಇದನ್ನೂ ಓದಿ: Bollywood Stars: ಸೂಪರ್ ಹಿಟ್ ಓಂ ಶಾಂತಿ ಓಂ ಸಿನಿಮಾದಲ್ಲಿ ಹಣ ಪಡೆಯದೆ ನಟಿಸಿದ್ರು ದೀಪಿಕಾ! ಕಾರಣ ಏನ್ ಗೊತ್ತಾ?


ಹಾಟಮ್ ಹಾಲೆಂಡ್​ ಅವರನ್ನು ಕೆಲವರು ಮಕ್ಡಿ ಮ್ಯಾನ್ ಎಂದು ಕರೆದರೆ ಇನ್ನು ಕೆಲವರು ನೀವು ಹೇಗೆ ಸ್ಪೈಡರ್ ಮ್ಯಾನ್ ಆಗ್ತೀರಿ ಎಂದು ಪ್ರಶ್ನಿಸಿದ್ದರು. ಉಳಿದವರು ಝೆಂದಾಯಾ ಅವರನ್ನು ಝಂದೆಯಾ ಎಂದು ಕರೆದಿದ್ದರು.


Bollywood Actress Alia Bhatt participate Met Gala 2023
ಆಲಿಯಾ ಭಟ್


ನಟಿ ಆಲಿಯಾ ಭಟ್ ಅವರು ತಮ್ಮ ವೈಟ್ ಗೌನ್ ಹಿಂದಿನ ಪ್ರೇರಣೆ ಏನೆಂಬುದನ್ನು ತಿಳಿಸಿದ್ದರು. ನಾನು ಯಾವಾಗಲೂ ಚಾನೆಲ್ ಬ್ರೈಡ್​ಗಳಿಂದ ಪ್ರೇರೇಪಿಸಲ್ಪಟ್ಟಿದ್ದೇನೆ. ಕಾರ್ಲ್ ಲೇಜರ್​​ಫೆಲ್ಡ್ ಅವರು ತುಂಬಾ ಕ್ರಿಯೇಟಿವ್ ಆದ ಬಟ್ಟೆಗಳನ್ನು ಮಾಡುತ್ತಾರೆ. ನನ್ನ ಇಂದಿನ ಲುಕ್ 1993 ಚಾನೆಲ್ ಬ್ರೈಡಲ್ ಲುಕ್​ನಿಂದ ಪ್ರೇರೇಪಿತವಾಗಿದೆ. ನನಗೆ ಏನಾದರೂ ಅಥೆಂಟಿಕ್ ಆಗಿ ಫೀಲ್ ಆಗಬೇಕಿತ್ತು. ಇನ್ನೂ ವಿಶೇಷವಾಗಿ ಇದನ್ನು ಭಾರತದಲ್ಲಿ ತಯಾರಿಸಲಾಗಿದೆ. ಇದರಲ್ಲಿ 1 ಲಕ್ಷ ಮುತ್ತುಗಳಿಂದ ಎಂಬ್ರಾಯ್ಡರಿ ಮಾಡಲಾಗಿದೆ. ನನ್ನ ಮೊದಲ ಮೆಟ್ ಗಾಲಾದಲ್ಲಿ ನಿಮ್ಮ ಉಡುಪನ್ನು ಧರಿಸಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಆಲಿಯಾ ಭಟ್ ಶೀಘ್ರವೇ ನೆಟ್​ಫ್ಲಿಕ್ಸ್​ನ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ.

First published: