Phantom Teaser: ಇಂದು ರಿಲೀಸ್ ಆಗೋಲ್ಲ ಫ್ಯಾಂಟಮ್ ಟೀಸರ್..!; ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಹಿ ಸುದ್ದಿ
Happy Birthday Sudeep: ಅನೂಪ್ ಭಂಡಾರಿ ಅವರ ಟ್ವೀಟ್ ನೋಡುತ್ತಿದ್ದಂತೆಯೇ ಅಭಿಮಾನಿಗಳು ಬೇಸರದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಕೋಟಿಗೊಬ್ಬ 3 ಸಿನಿಮಾದ ಟೀಸರ್ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ. ನೀವಾದರೂ ಫ್ಯಾಂಟಮ್ ಟೀಸರ್ ರಿಲೀಸ್ ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಇದು ಮನವಿ ಅಲ್ಲ ನಮ್ಮ ಆದೇಶ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ ಸುದೀಪ್
- News18 Kannada
- Last Updated: September 2, 2020, 3:03 PM IST
ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕೋಟಿಗೊಬ್ಬ 3 ಸಿನಿಮಾ ಸೇರಿದಂತೆ ಫ್ಯಾಂಟಮ್ ಚಿತ್ರತಂಡದ ಕಡೆಯಿಂದ ಭರ್ಜರಿ ಉಡುಗೊರೆ ನೀಡಲು ಪ್ಲಾನ್ ಮಾಡಲಾಗಿತ್ತು. ಬೆಳಿಗ್ಗೆ 11ಕ್ಕೆ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ ಚಿತ್ರದ ಟೀಸರ್ ಅರ್ಧಗಂಟೆ ತಡವಾಗಿ ರಿಲೀಸ್ ಆಯ್ತು. ಇನ್ನು ಟೀಸರ್ಗಾಗಿ ಕಾದಿದ್ದ ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟುವಲ್ಲಿ ಕೋಟಿಗೊಬ್ಬ 3 ಟೀಸರ್ ವಿಫಲವಾಗಿದೆ ಎಂದೆನಿಸುತ್ತಿದೆ.
ಟೀಸರ್ ರಿಲೀಸ್ ಆದ ಕೂಡಲೇ ಅದನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು ನಂತರದಲ್ಲಿ, ನಾವು ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ. ಇದರ ನಡುವೆ ಇಂದು ರಿಲೀಸ್ ಆಗಬೇಕಿದ್ದ ಫ್ಯಾಂಟಮ್ ಸಿನಿಮಾದ ಟೀಸರ್ ಸಹ ಬಿಡುಗಡೆಯಾಗುತ್ತಿಲ್ಲ. ಹೌದು, ಕೋಟಿಗೊಬ್ಬ ಸಿನಿಮಾದ ಟೀಸರ್ ರಿಲೀಸ್ ಮಾಡಿರುವ ಕಾರಣದಿಂದ ಫ್ಯಾಂಟಮ್ ಚಿತ್ರದ ಟೀಸರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಹೀಗೆಂದು ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.
ಅನೂಪ್ ಭಂಡಾರಿ ಅವರ ಟ್ವೀಟ್ ನೋಡುತ್ತಿದ್ದಂತೆಯೇ ಅಭಿಮಾನಿಗಳು ಬೇಸರದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಹೌದು, ಕೋಟಿಗೊಬ್ಬ 3 ಸಿನಿಮಾದ ಟೀಸರ್ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ. ನೀವಾದರೂ ಫ್ಯಾಂಟಮ್ ಟೀಸರ್ ರಿಲೀಸ್ ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಒಂದುವೇಳೆ ಟೀಸರ್ ಬಿಡುಗಡೆ ಮಾಡದಿದ್ದರೂ ಪರವಾಗಿಲ್ಲ, ಅದರ ರಿಲೀಸ್ ದಿನಾಂಕವನ್ನಾದರೂ ಕಿಚ್ಚನ ಹುಟ್ಟುಹಬ್ಬದಂದು ಪ್ರಕಟಿಸಿ. ಇದು ಮನವಿ ಅಲ್ಲ ನಮ್ಮ ಆದೇಶ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
ಇನ್ನು ಕೆಲವು ಮಂದಿ ಅನೂಪ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಒಂದಾದ ನಂತರ ಮತ್ತೊಂದು ಟೀಸರ್ ಅನ್ನು ಪ್ರಮೋಟ್ ಮಾಡೋಣ. ಇದು ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ ಫ್ಯಾನ್ಸ್. ಮತ್ತೆ ಕೆಲವರು ಕಿಚ್ಚ ಅಭಿನಯದ ಎರಡೂ ಸಿನಿಮಾಗಳ ಟೀಸರ್ ಅನ್ನು ಅಭಿಮಾನಿಗಳು ಸಮಾನವಾಗಿ ಕಾಣುತ್ತಾರೆ. ಎರಡನ್ನೂ ರಿಲೀಸ್ ಆದರೆ ಏನೂ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ.

Since #Kotigobba3Teaser is also releasing today, it was decided unanimously to postpone #Phantom teaser release. We will update you on the new date soon. In the meantime let's welcome #K3Teaser. Wishing all the very best to K3 team!
— Anup Bhandari (@anupsbhandari) September 2, 2020
ಅನೂಪ್ ಭಂಡಾರಿ ಅವರ ಟ್ವೀಟ್ ನೋಡುತ್ತಿದ್ದಂತೆಯೇ ಅಭಿಮಾನಿಗಳು ಬೇಸರದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಹೌದು, ಕೋಟಿಗೊಬ್ಬ 3 ಸಿನಿಮಾದ ಟೀಸರ್ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ. ನೀವಾದರೂ ಫ್ಯಾಂಟಮ್ ಟೀಸರ್ ರಿಲೀಸ್ ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಒಂದುವೇಳೆ ಟೀಸರ್ ಬಿಡುಗಡೆ ಮಾಡದಿದ್ದರೂ ಪರವಾಗಿಲ್ಲ, ಅದರ ರಿಲೀಸ್ ದಿನಾಂಕವನ್ನಾದರೂ ಕಿಚ್ಚನ ಹುಟ್ಟುಹಬ್ಬದಂದು ಪ್ರಕಟಿಸಿ. ಇದು ಮನವಿ ಅಲ್ಲ ನಮ್ಮ ಆದೇಶ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ಅನೂಪ್ ಭಂಡಾರಿ ಅವರ ಟ್ವೀಟ್ಗೆ ಅಭಿಮಾನಿಗಳ ಪ್ರತಿಕ್ರಿಯೆ