HOME » NEWS » Entertainment » PHANTOM STARRER SUDEEP AND PRIYA CELEBRATED GANESHA FESTIVAL AT HYDERABAD WITH PHANTOM TEAM AE

Phantom: ಫ್ಯಾಂಟಮ್​ ಚಿತ್ರತಂಡದೊಂದಿಗೆ ಗಣೇಶ ಹಬ್ಬ ಆಚರಿಸಿದ ಸುದೀಪ್​-ಪ್ರಿಯಾ..!

ಲಾಕ್​ಡೌನ್​ನಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ನಾಲ್ಕು ತಿಂಗಳ ಕಾಲ ಬ್ರೇಕ್​ ಬಿದ್ದಿದ್ದು, ಅನುಮತಿ ಸಿಕ್ಕ ಕೂಡಲೇ ಫ್ಯಾಂಟಮ್​ ಚಿತ್ರತಂಡ ಹೈದಾಬಾದಿನಲ್ಲಿ ಮತ್ತೆ ಚಿತ್ರೀಕರಣ ಆರಂಭಿಸಿದೆ. ಹೀಗಾಗಿಯೇ ಈ ಸಲ ಹಬ್ಬವನ್ನೂ ಕಿಚ್ಚ ಹಾಗೂ ಪ್ರಿಯಾ ಚಿತ್ರತಂಡದೊಂದಿಗೇ ಆಚರಿಸಿದ್ದಾರೆ.

Anitha E | news18-kannada
Updated:August 24, 2020, 8:26 AM IST
Phantom: ಫ್ಯಾಂಟಮ್​ ಚಿತ್ರತಂಡದೊಂದಿಗೆ ಗಣೇಶ ಹಬ್ಬ ಆಚರಿಸಿದ ಸುದೀಪ್​-ಪ್ರಿಯಾ..!
ಹೈದರಾಬಾದಿನಲ್ಲಿ ಫ್ಯಾಂಟಮ್​ ಚಿತ್ರತಂಡದೊಂದಿಗೆ ಕಿಚ್ಚನ ಮಡದಿ ಪ್ರಿಯಾ
  • Share this:
ಕಿಚ್ಚ ಸುದೀಪ್​ ಅವರ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್ ಚಿತ್ರೀಕರಣ​ ಹೈದರಾಬಾದಿನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇದೇ ಕಾರಣದಿಂದಾಗಿ ಈ ಸಲ ಕಿಚ್ಚ ಹಾಗೂ ಅವರ ಮದಡಿ ಪ್ರಿಯಾ ಗಣೇಶ ಹಬ್ಬವನ್ನು ಫ್ಯಾಂಟಮ್​ ಚಿತ್ರತಂಡದೊಂದಿಗೆ ಆಚರಿಸಿದ್ದಾರೆ. ಲಾಕ್​ಡೌನ್​ನಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ನಾಲ್ಕು ತಿಂಗಳ ಕಾಲ ಬ್ರೇಕ್​ ಬಿದ್ದಿದ್ದು, ಅನುಮತಿ ಸಿಕ್ಕ ಕೂಡಲೇ ಫ್ಯಾಂಟಮ್​ ಚಿತ್ರತಂಡ ಹೈದಾಬಾದಿನಲ್ಲಿ ಮತ್ತೆ ಚಿತ್ರೀಕರಣ ಆರಂಭಿಸಿದೆ. ಹೀಗಾಗಿಯೇ ಈ ಸಲ ಹಬ್ಬವನ್ನೂ ಕಿಚ್ಚ ಹಾಗೂ ಪ್ರಿಯಾ ಚಿತ್ರತಂಡದೊಂದಿಗೇ ಆಚರಿಸಿದ್ದಾರೆ.

Kichcha Sudeep Starrer Phantom Movie team released the First look poster of Vikranth Rona
ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಅವರ ಫಸ್ಟ್​ಲುಕ್​


ಈ ಸಿನಿಮಾದಲ್ಲಿ ಅಭಿನಯಿಸಿರುವ ನೀತು ಅಶೋಕ್​ ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಖುಷಿಯಿಂದ ಫೋಟೋ ಪೋಸ್ಟ್​ ಮಾಡಿದ್ದಾರೆ.




ಕಿರುತೆರೆಯಲ್ಲಿ ನಟಿಸುತ್ತಿರುವ ನೀತು ಅಶೋಕ್​ ಇದೇ ಮೊದಲ ಸಲ ಫ್ಯಾಂಟಮ್​ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಲಗ್ಗೆ ಇಡಲಿದ್ದಾರೆ. ಅಪರ್ಣ ಬಲ್ಲಾಳ್​ ಅಲಿಯಾಸ್​ ಪನ್ನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



ಈಗಾಗಲೇ ನಿರ್ದೇಶಕ ಅನೂಪ್​ ಭಂಡಾರಿ ಸಿನಿಮಾಗಳಲ್ಲಿನ ಪ್ರಮುಖ ಪಾತ್ರಗಳನ್ನು ಪುಟ್ಟದಾದ ವಿಡಿಯೋ ಮೂಲಕ ಪರಿಚಯಿಸಿಕೊಟ್ಟು, ಅದರ ಫಸ್ಟ್​ಲುಕ್​ ರಿಲೀಸ್​ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್​, ನಿರೂಪ್​ ಭಂಡಾರಿ ಹಾಗೂ ನೀತು ಅವರ ಫಸ್ಟ್​ಲುಕ್​ ಈಗಾಗಲೇ ರಿಲೀಸ್​ ಆಗಿದೆ.
Published by: Anitha E
First published: August 24, 2020, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories