HOME » NEWS » Entertainment » PHANTOM POSTER KICHCHA SUDEEP STARRER PHANTOM MOVIE TEAM RELEASED THE FIRST LOOK POSTER OF VIKRANTH RONA AE

Phantom Poster: ಕಿಚ್ಚನ ಖದರ್​ಗೆ ಅಭಿಮಾನಿಗಳು ಫಿದಾ: ರಿಲೀಸ್​ ಆಯ್ತು ವಿಕ್ರಾಂತ್​ ರೋಣನ ಫಸ್ಟ್​ಲುಕ್​ ಪೋಸ್ಟರ್​..!

First Look Poster of Vikranth Rona: ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿರುವ ಕಾತರವನ್ನು ಕಾಯ್ದುಕೊಳ್ಳಲು ಹಾಗೂ ಅದನ್ನು ದುಪ್ಪಟ್ಟು ಮಾಡಲು ಚಿತ್ರತಂಡಗಳು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿರುತ್ತವೆ. ಈಗ ಫ್ಯಾಂಟಮ್​ ಸಿನಿಮಾದ ಚಿತ್ರತಂಡ ಸಹ ಇಂತಹದ್ದೇ ಒಂದು ಪ್ರಯೋಗಕ್ಕೆ ಮುಂದಾಗಿದೆ.

Anitha E | news18-kannada
Updated:August 10, 2020, 12:07 PM IST
Phantom Poster: ಕಿಚ್ಚನ ಖದರ್​ಗೆ ಅಭಿಮಾನಿಗಳು ಫಿದಾ: ರಿಲೀಸ್​ ಆಯ್ತು ವಿಕ್ರಾಂತ್​ ರೋಣನ ಫಸ್ಟ್​ಲುಕ್​ ಪೋಸ್ಟರ್​..!
ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​
  • Share this:
ಸುದೀಪ್​ ಅಭಿಮಾನಿಗಳಿಗೆ ಮೇಲಿಂದ ಮೇಲೆ ಒಂದೊಂದು ಸಿಹಿ ಸುದ್ದಿ ಸಿಗುತ್ತಲೇ ಇದೆ. ಇತ್ತೀಚೆಗಷ್ಟೆ ಕಿಚ್ಚ, ತಮ್ಮ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಮಾಡಿದ್ದರು. ಈಗ ಅವರ ನಟನೆಯ ಹೊಸ ಸಿನಿಮಾ ಫ್ಯಾಂಟಮ್​ನ ಪೋಸ್ಟರ್​ ರಿಲೀಸ್​ ಆಗಿದೆ. ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿರುವ ಕಾತರವನ್ನು ಕಾಯ್ದುಕೊಳ್ಳಲು ಹಾಗೂ ಅದನ್ನು ದುಪ್ಪಟ್ಟು ಮಾಡಲು ಚಿತ್ರತಂಡಗಳು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿರುತ್ತವೆ. ಈಗ ಫ್ಯಾಂಟಮ್​ ಸಿನಿಮಾದ ಚಿತ್ರತಂಡ ಸಹ ಇಂತಹದ್ದೇ ಒಂದು ಪ್ರಯೋಗಕ್ಕೆ ಮುಂದಾಗಿದೆ.


ಯಾವುದೇ ಸಿನಿಮಾ ಆದರೂ ಅವುಗಳಲ್ಲಿ ಪಾತ್ರಗಳು ಬಹಳ ಮುಖ್ಯ. ಪುಟ್ಟ ಪಾತ್ರವಾದರೂ ಪ್ರೇಕ್ಷಕನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ ನಿದರ್ಶನಗಳಿವೆ. ಇಂತಹ ಪಾತ್ರಗಳನ್ನು ಕ್ಯಾರೆಕ್ಟರ್​ ಇಂಟ್ರೋ ಪೋಸ್ಟರ್​ ಮೂಲಕ ಪರಿಚಯಿಸುವ ಪ್ರಯತ್ನದಲ್ಲಿದೆ ಫ್ಯಾಂಟಮ್​ ಚಿತ್ರತಂಡ.

Here's a little introduction to #VikranthRona's character! Poster will be shared in the next tweet! @WorldofPhantom - The official twitter handle for #Phantom @KicchaSudeep @shaliniartss #VikranthRonaFirstLook pic.twitter.com/2D6OibJ2ib


ವಿಕ್ರಾಂತ್​ ರೋಣ ಫ್ಯಾಂಟಮ್​ ಸಿನಿಮಾದಲ್ಲಿನ ಪ್ರಮುಖ ಪಾತ್ರ. ಈತ ಯಾವಾಗ, ಏತಕ್ಕಾಗಿ, ಏನೆಲ್ಲ ಮಾಡ್ತಾನೆ ಅಂತ ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಅವರನು ಏನೇ ಮಾಡಿದರೂ, ಅದಕ್ಕೊಂದು ಕಾರಣವಿರುತ್ತದೆಯಂತೆ. ಹೀಗೆಂದು ನಿರ್ದೇಶಕ ಅನೂಪ್​ ಭಂಡಾರಿ ನಾಯಕನ ಪಾತ್ರದ ಪರಿಚಯ ಮಾಡಿ ಕೊಡುವ ಒಂದು ವಿಡಿಯೋ ಹಂಚಿಕೊಂಡಿದ್ದು, ನಂತರ ಪೋಸ್ಟರ್​ ರಿಲೀಸ್​ ಮಾಡಿದ್ದಾರೆ.



ಈ ಹಿಂದೆ ಕಿಚ್ಚ ಸುದೀಪ್​, ಫ್ಯಾಂಟಮ್​ ಸಿನಿಮಾದ ಚಿತ್ರೀಕರಣ ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆರಂಭವಾದಾಗ, ಅದರ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ ಸಿನಿಮಾದ ಕೆಲವು ವಿಡಿಯೋ ತುಣುಕುಗಳನ್ನೂ ಪೋಸ್ಟ್​ ಮಾಡಿದ್ದರು. ಇನ್ನು ಮುಂದೆ ಈ ಚಿತ್ರದಲ್ಲಿನ ಪಾತ್ರಗಳನ್ನು ಹೀಗೆ ಇಂಟ್ರೋ ಪೋಸ್ಟರ್​ಗಳ ಮೂಲಕ ಪರಿಚಯಿಸಲಾಗುವುದು ಎಂದಿದ್ದಾರೆ ನಿರ್ದೇಶ ಅನೂಪ್​ ಭಂಡಾರಿ.
Published by: Anitha E
First published: August 10, 2020, 10:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories