ಯಾವುದೇ ಸಿನಿಮಾ ಆದರೂ ಅವುಗಳಲ್ಲಿ ಬರುವ ಪಾತ್ರಗಳು ಬಹಳ ಮುಖ್ಯ. ಪುಟ್ಟ ಪಾತ್ರವಾದರೂ ಪ್ರೇಕ್ಷಕನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ ನಿದರ್ಶನಗಳಿವೆ. ಇಂತಹ ಪಾತ್ರಗಳನ್ನು ಕ್ಯಾರೆಕ್ಟರ್ ಇಂಟ್ರೋ ಪೋಸ್ಟರ್ ಮೂಲಕ ಪರಿಚಯಿಸುವ ಪ್ರಯತ್ನವನ್ನು ಫ್ಯಾಂಟಮ್ ಚಿತ್ರತಂಡ ಮಾಡುತ್ತಿದೆ. ಮೊದಲಿಗೆ ಫ್ಯಾಂಟಮ್ ಚಿತ್ರದಲ್ಲಿ ಪ್ರಮುಖ ಪಾತ್ರ ಎಂದರೆ ವಿಕ್ರಾಂತ್ ರೋಣ. ಅಂದರೆ ಸುದೀಪ್ ನಿರ್ವಹಿಸುತ್ತಿರುವ ಪಾತ್ರವನ್ನು ಮೊದಲಿಗೆ ಅನೂಪ್ ಇಂಟ್ರೋ ಪೋಸ್ಟರ್ ಮೂಲಕ ಪರಿಚಯಿಸಿದರು. ಆದ ಪಾತ್ರದ ವಿವರಗಳನ್ನೂ ನೀಡುವ ಮೂಲಕ ಫಸ್ಟ್ಲುಕ್ ಪೋಸ್ಟರ್ ರಿಲೀಸ್ ಮಾಡಿದರು.
Here's a little introduction to #VikranthRona's character! Poster will be shared in the next tweet! @WorldofPhantom - The official twitter handle for #Phantom @KicchaSudeep @shaliniartss #VikranthRonaFirstLook pic.twitter.com/2D6OibJ2ib
— Anup Bhandari (@anupsbhandari) August 10, 2020
Character Intro Poster of @KicchaSudeep sir as #VikranthRona! Designed by @kaanistudio #VikranthRonaFirstLook @shaliniartss @JackManjunath pic.twitter.com/JY2jbGUyIW
— Anup Bhandari (@anupsbhandari) August 10, 2020
ನಂತರ, ಫ್ಯಾಂಟಮ್ ಸಿನಿಮಾದಲ್ಲಿನ ಮತ್ತೊಂದು ಪ್ರಮುಖ ಪಾತ್ರ ನಿರೂಪ್ ಭಂಡಾರಿ ಅವರದ್ದು. ಅದೇ ಸಂಜೀವ್ ಗಾಂಭೀರ ಅಲಿಯಾಸ್ ಸಂಜು. ಲಂಡನ್ನಿಂದ ಹುಟ್ಟೂರಿಗೆ ಹಿಂತಿರುಗುವ ಸಂಜು ಪಾತ್ರದಲ್ಲಿ ನಿರೂಪ್ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿದೆ ಅವರ ಫಸ್ಟ್ಲುಕ್ ಪೋಸ್ಟರ್. ಇಂದು ಅವರ ಹುಟ್ಟುಹಬ್ಬದ ಅಂಗವಾಗಿ ಇದನ್ನು ಉಡುಗೊರೆಯಾಗಿ ನೀಡಿತ್ತು ಫ್ಯಾಂಟಮ್ ಚಿತ್ರತಂಡ.
Wshn you a great bday @nirupbhandari aka #SanjeevGambhira aka Sanju.
Have a great one.🤗#TheWorldOfPhantom#PhantomWelcomesNirup#Fakira pic.twitter.com/OzGJJdiQQU
— Kichcha Sudeepa (@KicchaSudeep) August 13, 2020
Presenting #AparnaBallal aka #Panna, played by @neethaofficial
Welcome Neetha to,,#TheWorldofPhantom#PhantomWelcomesNeetha #NeethaAshokAsPanna pic.twitter.com/Ex9eIXMAz4
— Kichcha Sudeepa (@KicchaSudeep) August 20, 2020
ಇದನ್ನೂ ಓದಿ: ದರ್ಶನ್ ತೋಟದ ಮನೆಗೆ ಬಂದ ಹೊಸ ಅತಿಥಿಗಳು: ವೈರಲ್ ಆಗುತ್ತಿದೆ ಡಿಬಾಸ್ರ ಹೊಸ ವಿಡಿಯೋ..!
ಈ ಹಿಂದೆ ಕಿಚ್ಚ ಸುದೀಪ್, ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆರಂಭವಾದಾಗ, ಅದರ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ ಸಿನಿಮಾದ ಕೆಲವು ವಿಡಿಯೋ ತುಣುಕುಗಳನ್ನೂ ಪೋಸ್ಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ