HOME » NEWS » Entertainment » PHANTOM KICHCHA SUDEEP GAVE A HINT THAT SOON HE WILL BE GIVING SURPRISE REGARDING PHANTOM MOVIE AE

Phantom: ಫ್ಯಾಂಟಮ್​ ಚಿತ್ರತಂಡದ ಕಡೆಯಿಂದ ಸಿಗಲಿದೆ ಸಿಹಿ ಸುದ್ದಿ: ಸುಳಿವು ಕೊಟ್ಟ ಕಿಚ್ಚ ಸುದೀಪ್​..!

Kichcha Sudeep: ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್​ ಹಾಗೂ ಕೋಟಿಗೊಬ್ಬ 3. ಅಭಿಮಾನಿಗಳಿಗಾಗಿ ಸುದೀಪ್​ ಈ ಎರಡೂ ಚಿತ್ರಗಳ ಕುರಿತಾಗಿ ಸಾಕಷ್ಟು ಅಪ್ಡೇಟ್​ ನೀಡಿದ್ದಾರೆ. ಈಗಲೂ ಸಹ ಫ್ಯಾಂಟಮ್​ ಸಿನಿಮಾ ಕುರಿತಾಗಿ ಸರ್ಪ್ರೈಸ್​ ಕೊಡುವುದಾಗಿ ಸುಳಿವು ನೀಡಿದ್ದಾರೆ.

Anitha E | news18-kannada
Updated:August 24, 2020, 4:20 PM IST
Phantom: ಫ್ಯಾಂಟಮ್​ ಚಿತ್ರತಂಡದ ಕಡೆಯಿಂದ ಸಿಗಲಿದೆ ಸಿಹಿ ಸುದ್ದಿ: ಸುಳಿವು ಕೊಟ್ಟ ಕಿಚ್ಚ ಸುದೀಪ್​..!
ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​
  • Share this:
Phantom Kannada Movie:ಕಿಚ್ಚ ಸುದೀಪ್​ ಲಾಕ್​ಡೌನ್​ ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಈ ಹಿಂದೆ ಅವರ ಸಿನಿಮಾ ಹೆಬ್ಬುಲಿ ಚಿತ್ರೀಕರಣದ ವೇಳೆ ಮಾಡಿದ್ದ ವಿಡಿಯೋವನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್​ಗಳಿಗೆ ಸರ್ಪ್ರೈಸ್​ ಕೊಟ್ಟಿದ್ದರು. ನಂತರ ತಮ್ಮ ಸಿನಿಮಾಗಳ ಅಪ್ಡೇಟ್​ ನೀಡುತ್ತಿದ್ದರು.  ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್​ ಹಾಗೂ ಕೋಟಿಗೊಬ್ಬ 3. ಅಭಿಮಾನಿಗಳಿಗಾಗಿ ಸುದೀಪ್​ ಈ ಎರಡೂ ಚಿತ್ರಗಳ ಕುರಿತಾಗಿ ಸಾಕಷ್ಟು ಅಪ್ಡೇಟ್​ ನೀಡಿದ್ದಾರೆ. ಈಗಲೂ ಸಹ ಫ್ಯಾಂಟಮ್​ ಸಿನಿಮಾ ಕುರಿತಾಗಿ ಸರ್ಪ್ರೈಸ್​ ಕೊಡುವುದಾಗಿ ಸುಳಿವು ನೀಡಿದ್ದಾರೆ.

Sudeep And Priya celebrated Ganesha Festival at Hyderabad with Phantom team
ಫ್ಯಾಂಟಮ್​ ಚಿತ್ರತಂಡದೊಂದಿಗೆ ಕಿಚ್ಚನ ಮಡದಿ ಪ್ರಿಯಾ


ಫ್ಯಾಂಟಮ್​ ಚಿತ್ರದೊಂದಿಗೆ ಗಣಪತಿ ಹಬ್ಬ ಆಚರಿಸಿರುವ ಕಿಚ್ಚ ಸುದೀಪ್​ ಮತ್ತೆ ಚಿತ್ರೀಕರಣಕ್ಕೆ ಮರಳುವ ಕುರಿತು ಹಂಚಿಕೊಂಡಿದ್ದಾರೆ. ಮುಂದೆ ಏನು ಎಂದು ಪ್ರಶ್ನಿಸಿರುವ ಸುದೀಪ್​, ಕಾದು ನೋಡಿ ಎನ್ನುತ್ತಲೇ ಮತ್ತೊಂದು ಸರ್ಪ್ರೈಸ್​ ನೀಡುವುದಾಗಿ ಸುಳಿವು ನೀಡಿದ್ದಾರೆ.

Kichcha Sudeep gave a hint that soon he will be giving surprise regarding Phantom movie
ಫ್ಯಾಂಟಮ್​ ಚಿತ್ರತಂಡದೊಂದಿಗೆ ಕಿಚ್ಚನ ಮಡದಿ ಪ್ರಿಯಾ


ಈಗಾಗಲೇ ಫ್ಯಾಂಟಮ್​ ಸಿನಿಮಾದಲ್ಲಿನ ಪ್ರಮುಖ ಪಾತ್ರಗಳ ಪರಿಚಯ ಮಾಡುವ ಕೆಲಸ ವಿಕ್ರಾಂತ್​ ರೋಣನ ಫಸ್ಟ್​ಲುಕ್​ ಬಿಡುಗಡೆ ಮಾಡುವ ಮೂಲಕ ಆರಂಭವಾಗಿದೆ. ಪನ್ನಾ, ಸಂಜು ಹೀಗೆ ಒಂದೊಂದಾಗಿ ಚಿತ್ರದ ಪಾತ್ರಗಳ ಪರಿಚಯ ಜೊತೆಗೆ ಅದರ ಫಸ್ಟ್​ಲುಕ್​ ಪೋಸ್ಟರ್​ ಅನ್ನೂ ರಿಲೀಸ್ ಮಾಡಲಾಗುತ್ತಿದೆ.

ಇದನ್ನೂ ಓದಿ: Abhishek Ambareesh: ಮಗ ಅಭಿಷೇಕ್​ ಜೊತೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸುಮಲತಾ ಅಂಬರೀಷ್​..!

ಅನೂಪ್​ ಭಂಡಾರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣದ ಹೈದರಾಬಾದಿನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಕನ್ನಡದ ತಂತ್ರಜ್ಞರು ಹಾಗೂ ಸಿಬ್ಬಂದಿಯನ್ನೇ ಸುದೀಪ್​ ಹೈದರಾಬಾದಿಗೆ ಕರೆದುಕೊಂಡು ಹೋಗಿದ್ದಾರೆ.
ಈ ಹಿಂದೆ ಕೋಟಿಗೊಬ್ಬ ಸಿನಿಮಾದ ಕುರಿತಾಗಿ ಮಾಹಿತಿ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದ ಕಾರಣಕ್ಕೆ ಕಿಚ್ಚ ಚಿತ್ರದ ಶೂಟಿಂಗ್​ ಹಾಗೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳ ಬಗ್ಗೆ ಟ್ವೀಟ್​ ಮಾಡಿದ್ದರು.
Published by: Anitha E
First published: August 24, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories