HOME » NEWS » Entertainment » PHANTOM KICCHA SUDEEP STARTED SHOOTING FOR LAST SCHEDULE OF PHANTOM HERE IS THE DETAILS AE

Phantom: ಫ್ಯಾಂಟಮ್​ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್​..!

Kiccha Sudeep: ಹೌದು, ಕಿಚ್ಚ ಸುದೀಪ್​ ಫ್ಯಾಂಟಮ್​ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ಬಗ್ಗೆ ಅಪ್ಡೇಟ್​ ಕೊಟ್ಟಿದ್ದಾರೆ. ಡಿಸೆಂಬರ್ 4 ರಿಂದ ಈ ಚಿತ್ರದ ಕೊನೆಯ ಶೆಡ್ಯೂಲ್​ನ ಶೂಟಿಂಗ್​ ಆರಂಭವಾಗಲಿದೆ. ಕ್ಲೈಮ್ಯಾಕ್ಸ್​ಗಾಗಿ ಕಳೆದ ಒಂದು ತಿಂಗಳಿನಿಂದ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದೆ ಎಂದು ಈ ಹಿಂದೆ ಟ್ವೀಟ್​ ಮಾಡಿದ್ದರು. ಈಗ ಕೊನೆಯ ಹಂತದ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.

Anitha E | news18-kannada
Updated:December 10, 2020, 10:12 AM IST
Phantom: ಫ್ಯಾಂಟಮ್​ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್​..!
ಫ್ಯಾಂಟಮ್​ ಸಿನಿಮಾದ ಸೆಟ್​ನಲ್ಲಿ ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್​. ಅನೂಪ್​ ಭಂಡಾರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಹೈದರಾಬಾದಿನಲ್ಲಿ ಪೂರ್ಣಗೊಂಡಿದೆ. ಲಾಕ್​ಡೌನ್​ ಸಡಿಲಗೊಂಡ ನಂತರ ಸುದೀಪ್​ ಹೈದರಾಬಾದಿಗೆ ಹೋಗಿದ್ದರು. ಅಲ್ಲಿ ಫ್ಯಾಂಟಮ್​ ಸಿನಿಮಾಗಾಗಿ ನಿರ್ಮಿಸಲಾಗಿರುವ ಸೆಟ್​ನಲ್ಲಿ ಚಿತ್ರೀಕರಣ ಆರಂಭಿಸಿದ್ದರು. ಅದಕ್ಕಾಗಿ ಇಲ್ಲಿಂದಲೇ ಕಾರ್ಮಿಕರನ್ನೂ ತಮ್ಮೊಂದಿಗೆ ಹೈದರಾಬಾದಿಗೆ ಕರೆದುಕೊಂಡು ಹೋಗಿದ್ದರು. ಸುಮಾರು ಮೂರು ತಿಂಗಳಿನಿಂದ ಹೈದರಾಬಾದಿನಲ್ಲೇ ಚಿತ್ರೀಕರಣ ನಡೆಸುತ್ತಿದ್ದ ಫ್ಯಾಂಟಮ್​ ಚಿತ್ರತಂಡ ಇತ್ತೀಚೆಗಷ್ಟೆ ಬೆಂಗಳೂರಿಗೆ ಮರಳಿದ್ದಾರೆ. ಇನ್ನು ಸಿನಿಮಾದ ಕೊನೆ ಹಂತದ ಶೂಟಿಂಗ್​ ಮಾತ್ರ ಬಾಕಿ ಉಳಿದಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಹೀಗಿರುವಾಗಲೇ ಕಿಚ್ಚ ಸುದೀಪ್​ ಹಾಗೂ ಅವರ ತಂಡ ಕೇರಳಕ್ಕೆ ಹೋಗಲಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಈಗ ಸುದೀಪ್​ ಚಿತ್ರೀಕರಣದ ಸೆಟ್​ ಸೇರಿಕೊಂಡಿದ್ದಾರೆ.

ಹೌದು, ಕಿಚ್ಚ ಸುದೀಪ್​ ಫ್ಯಾಂಟಮ್​ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ಬಗ್ಗೆ ಅಪ್ಡೇಟ್​ ಕೊಟ್ಟಿದ್ದಾರೆ. ಡಿಸೆಂಬರ್ 4 ರಿಂದ ಈ ಚಿತ್ರದ ಕೊನೆಯ ಶೆಡ್ಯೂಲ್​ನ ಶೂಟಿಂಗ್​ ಆರಂಭವಾಗಲಿದೆ. ಕ್ಲೈಮ್ಯಾಕ್ಸ್​ಗಾಗಿ ಕಳೆದ ಒಂದು ತಿಂಗಳಿನಿಂದ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದೆ ಎಂದು ಈ ಹಿಂದೆ ಟ್ವೀಟ್​ ಮಾಡಿದ್ದರು. ಈಗ ಕೊನೆಯ ಹಂತದ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.





ಫ್ಯಾಂಟಮ್​ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ಆರಂಭವಾಗಿದೆ. ಇಲ್ಲಿನ ಲೊಕೇಷನ್​ ಹಾಗೂ ಸೆಟ್​ ತುಂಬಾ ಇಷ್ಟವಾಗಿದೆ. ಹಾಕಿರುವ ಸೆಟ್​ ಮನಸ್ಸಿಗೆ ಖುಷಿ ನೀಡಿದೆ ಎಂದು ಸುದೀಪ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಸೆಟ್​ನಲ್ಲೇ ಕುಳಿತು ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಚಿತ್ರೀಕರಣ ಎಲ್ಲಿ ನಡೆಯುತ್ತಿದೆ ಎಂದು ಹೇಳಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತಿದೆ ಎನ್ನಲಾಗುತ್ತಿದೆ.



ಇನ್ನು, ಈ ಹಿಂದೆ ಕಿಚ್ಚ ಸುದೀಪ್​ ಮಾಡಿದ್ದ ಪೋಸ್ಟ್​ನಲ್ಲಿ ತಮ್ಮ ರಾಕ್​ ಸಾಲಿಡ್ ಬಾಡಿಯ ಬ್ಯಾಕ್​ ಪೋಸ್​ ಚಿತ್ರವನ್ನು ಹಂಚಿಕೊಂಡಿದ್ದರು. ಫ್ಯಾಂಟಮ್​ ಸಿನಿಮಾದ ಕ್ಲೈಮ್ಯಾಕ್ಸ್​ಗಾಗಿ ಸುದೀಪ್​ ಮತ್ತೆ ವರ್ಕೌಟ್​ ಆರಂಭಿಸಿದ್ದಾರಂತೆ. ಸಿನಿಮಾದ ಕ್ಲೈಮ್ಯಾಕ್ಸ್​ಗಾಗಿ ಇಡೀ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ ಎಂದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು ಕಿಚ್ಚ. ​




ಪೈಲ್ವಾನ್​ ಸಿನಿಮಾಗಾಗಿ ಸುದೀಪ್​ ಮೊದಲ ಬಾರಿಗೆ ಜಿಮ್​ ಮೆಟ್ಟಿಲು ತುಳಿದಿದ್ದು. ಆಗಲು ಸಹ ಸುದೀಪ್​ ಅವರ ಬ್ಯಾಕ್​ ಪೋಸ್​ ಇರುವ ಫೋಟೋವನ್ನು ಸುದೀಪ್​ ಹಂಚಿಕೊಂಡಿದ್ದರು. ಆಗ ಕೆಲವರು ಇದು ಮಾರ್ಫ್​ ಮಾಡಿದ ಚಿತ್ರ ಎಂದು ಸುದೀಪ್​ ಅವರನ್ನು ಟ್ರೋಲ್​ ಮಾಡಿದ್ದರು. ಆಗ ಸಿನಿಮಾದ ನಿರ್ದೇಶಕ ಸುದೀಪ್​ ಪರವಾಗಿ ನಿಂತು ಇದು ನಿಜವಾದ ಫೋಟೋ ಎಂದು ಅವರ ಮತ್ತೊಂದು ಫೋಟೋ ರಿಲೀಸ್​ ಮಾಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.




ಇನ್ನು, ಸಲ್ಮಾನ್​ ಖಾನ್​ ಜೊತೆ ಸುದೀಪ್​ ದಬಾಂಗ್​ 3 ಸಿನಿಮಾದಲ್ಲೂ ಖಳನಾಯಕನಾಗಿ ನಟಿಸಿದರು. ಅದರಲ್ಲಿ ಬಲ್ಲಿಸಿಂಗ್​ ಪಾತ್ರದಲ್ಲಿ ಸುದೀಪ್​ ಕಾಣಿಸಿಕೊಂಡಿದ್ದು, ಆಗಲೂ ತಮ್ಮ ರಾಕ್​ ಸಾಲಿಡ್​ ದೇಹದ ಪ್ರದರ್ಶನ ಮಾಡಿದ್ದರು. ಸಲ್ಮಾನ್​ ಖಾನ್​ ಜೊತೆ ಶರ್ಟ್​ಲೆಸ್ ಆಗಿ ಫೈಟಿಂಗ್​ ಮಾಡಿದ್ದರು. ಆದರೆ ಈ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ.




ಈಗ ಸುದೀಪ್​ ಮತ್ತೆ ಫ್ಯಾಂಟಮ್​ಗಾಗಿ ಮತ್ತೆ ಬಾಡಿ ಬಿಲ್ಡ್​ ಮಾಡಿದ್ದಾರೆ. ಅವರ ಈ ಬ್ಯಾಕ್​ ಪೋಸ್​ ನೋಡಿದ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಫ್ಯಾಂಟಮ್​ ಸಿನಿಮಾದ ರಿಲೀಸ್​ ದಿನಾಂಕ ಯಾವಾಗ ಪ್ರಕಟವಾಗುತ್ತೆ ಅಂತ ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆ ತೆಗೆದ ವಿಡಿಯೋ ತುಣುಕುಗಳನ್ನು ಈಗಾಗಲೇ ಸುದೀಪ್​ ಹಂಚಿಕೊಂಡಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
Published by: Anitha E
First published: December 10, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories