Petta Movie Review: 90ರ ದಶಕದ ಗತ್ತಿನಲ್ಲಿ ಕಂಬ್ಯಾಕ್​ ಮಾಡಿದ 'ಸೂಪರ್​ ಸ್ಟಾರ್​' ರಜನಿ

Rajinikanth | ‘ಪೆಟ್ಟಾ’ ನೋಡಿದವರಿಗೆ ಮೊದಲಿನ ರಜನಿಕಾಂತ್​ ಒಮ್ಮೆ ಕಣ್ಮುಂದೆ ಹಾದು ಹೋಗುತ್ತಾರೆ. ಮಾತನಾಡುವ ಶೈಲಿ, ಡಾನ್ಸ್​, ಫೈಟಿಂಗ್​ ಹೀಗೆ ಪ್ರತಿ ವಿಚಾರದಲ್ಲೂ ಈ ಮೊದಲಿನ ರಜನಿ ನೆನಪಾಗುತ್ತಾರೆ.

Rajesh Duggumane | news18
Updated:January 11, 2019, 8:01 AM IST
Petta Movie Review: 90ರ ದಶಕದ ಗತ್ತಿನಲ್ಲಿ ಕಂಬ್ಯಾಕ್​ ಮಾಡಿದ 'ಸೂಪರ್​ ಸ್ಟಾರ್​' ರಜನಿ
ರಜನಿ
Rajesh Duggumane | news18
Updated: January 11, 2019, 8:01 AM IST

ರಾಜೇಶ್​ ದುಗ್ಗುಮನೆ ಈ ಮೊದಲು ತೆರೆಕಂಡ ‘ಕಬಾಲಿ’, ‘ಕಾಲಾ’ ಚಿತ್ರಗಳಲ್ಲಿ ‘ಸೂಪರ್​ ಸ್ಟಾರ್​’ ರಜನಿತನ  ಕಾಣಿಸಿರಲಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆದರೆ, ‘ಪೆಟ್ಟಾ’ ಈ ಬೇಸರವನ್ನು ದೂರ ಮಾಡಿದೆ. ತಲೈವಾ​ 90ರ ದಶಕದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದರೋ ಅದೇ ಮಾದರಿಯಲ್ಲಿ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ.

ಕಾಳಿ (ರಜನಿಕಾಂತ್​) ಕಾಲೇಜ್​ನ ಹಾಸ್ಟೇಲ್​ ಒಂದಕ್ಕೆ ವಾರ್ಡನ್​ ಆಗಿ ಸೇರಿಕೊಳ್ಳುತ್ತಾರೆ. ವಾರ್ಡನ್​ ಪೋಸ್ಟ್​ ಗಿಟ್ಟಿಸಿಕೊಳ್ಳಲು ಕಾಳಿ ಮಂತ್ರಿಯೊಬ್ಬನ ಪ್ರಭಾವ ಬಳಸಿಕೊಳ್ಳುತ್ತಾನೆ. ಹಾಸ್ಟೆಲ್​ ನಡೆಯುತ್ತಿದ್ದ ಪುಂಡಾಟಿಕೆಗಳಿಗೆ ಕಾಳಿ ಬ್ರೇಕ್​ ಹಾಕುತ್ತಾನೆ. ವಿದ್ಯಾರ್ಥಿಗಳ ಜೊತೆ ಬೆರೆತು ಅವರಲ್ಲೇ ಒಬ್ಬನಾಗುತ್ತಾನೆ. ಈ ವೇಳೆ ನವ ಜೋಡಿಯ (ಮೇಘಾ ಆಕಾಶ್​ ಹಾಗೂ ಸನತ್​)​ ಪ್ರೀತಿಗೆ ಬೆಂಬಲವಾಗಿಯೂ ನಿಲ್ಲುತ್ತಾನೆ. ಅಷ್ಟಕ್ಕೂ ಕಾಳಿ ಹಾಸ್ಟೆಲ್​ ಸೇರಿದ್ದೇಕೆ? ಆತನ ಉದ್ದೇಶ ಏನು, ಕಾಳಿಯ ಹಿನ್ನಲೆ ಏನು ಎಂಬುದನ್ನು ಸಿನಿಮಾದಲ್ಲೇ ನೋಡಿ ಕಣ್ತುಂಬಿಕೊಳ್ಳಬೇಕು.

‘ಪೆಟ್ಟಾ’ ನೋಡಿದವರಿಗೆ 90ರ ದಶಕದ ರಜನಿಕಾಂತ್​ ಒಮ್ಮೆ ಕಣ್ಮುಂದೆ ಹಾದು ಹೋಗುತ್ತಾರೆ. ಮಾತನಾಡುವ ಶೈಲಿ, ಡಾನ್ಸ್​, ಫೈಟಿಂಗ್​ ಹೀಗೆ ಪ್ರತಿ ವಿಚಾರದಲ್ಲೂ ಈ ಮೊದಲಿನ ರಜನಿ ನೆನಪಾಗುತ್ತಾರೆ. ಈ  ಪ್ರಯತ್ನದಲ್ಲಿ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಯಶಸ್ವಿಯಾಗಿದ್ದಾರೆ. ರಜನಿಕಾಂತ್​ ಸಿಗರೇಟು ಬಾಯಿಗಿಟ್ಟುಕೊಳ್ಳುವ ಶೈಲಿ, ಮಾತನಾಡುವ ಗತ್ತು, ಫೈಟಿಂಗ್​ನಲ್ಲಿ ಎದುರಾಳಿಗಳನ್ನು ಎದುರಿಸುವ ರೀತಿ​ ಎಲ್ಲವೂ ರಜನಿ ಅಭಿಮಾನಿಗಳಿಗೆ ಇಷ್ಟವಾಗದೆ ಇರದು.

ಇದನ್ನೂ ಓದಿ: 'ಸೂಪರ್​ ಸ್ಟಾರ್'​ ರಜನಿ ವೃತ್ತಿಜೀವನದ ಕ್ಲೈಮ್ಯಾಕ್ಸ್​​ನಲ್ಲಿ 'ಪೆಟ್ಟಾ' ನೀಡಲಿದೆಯಾ ಯಶಸ್ಸಿನ ಸಿಹಿ?

‘ಪೆಟ್ಟಾ’ದಲ್ಲಿ ಸಾಕಷ್ಟು ತಿರುವುಗಳಿವೆ. ಸಿನಿಮಾದ ಪ್ರತಿ ಹಂತದಲ್ಲೂ ಒಂದೊಂದು ತಿರುವುಗಳು ಎದುರಾಗುತ್ತವೆ. ಆದರೆ, ಕೆಲವು ಕಡೆಗಳಲ್ಲಿ ಈ ಟ್ವಿಸ್ಟ್​ಗಳು ಅತಿರೇಕ ಎನಿಸಿ ಬಿಡುತ್ತವೆ. ಇನ್ನು ಸಿನಿಮಾದ ಅವಧಿ ಬರೋಬ್ಬರಿ 172 ನಿಮಿಷ. ಮೊದಲಾರ್ಧ ಪ್ರೇಕ್ಷಕನನ್ನು ನೋಡಿಸಿಕೊಂಡು ಹೋದರೂ, ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತವೆ. ಈ ವಿಚಾರದಲ್ಲಿ ನಿರ್ದೇಶಕರು ಕೊಂಚ ಜಾಗ್ರತೆ  ವಹಿಸಬೇಕಿತ್ತು.

ಅನಿರುದ್ಧ ರವಿಚಂದರ್​ ಸಂಗೀತ ಸಂಯೋಜನೆ ಹಾಗೂ ತಿರ್ರು ಛಾಯಾಗ್ರಹಣ ಅಂಕ ಗಿಟ್ಟಿಸಿಕೊಳ್ಳುತ್ತದೆ. ಸಿನಿಮಾದ ಹಾಡುಗಳು ಕಿವಿಯಲ್ಲಿ ಮತ್ತೆ ಮತ್ತೆ ಗುನುಗುತ್ತವೆ. ಡಾರ್ಜಲಿಂಗ್​ನ ಕೆಲ ದೃಶ್ಯಗಳು ಕಣ್ಣಿಗೆ ತಂಪು ನೀಡುತ್ತವೆ. “ನಾನು ರಜನಿ ಅಭಿಮಾನಿ ಅವರನ್ನು ಗಮನದಲ್ಲಿಟ್ಟುಕೊಂಡೇ ಈ ಚಿತ್ರದ ಕಥೆ ಬರೆದಿದ್ದೆ” ಎಂದು ಈ ನಿರ್ದೇಶಕರು ಮೊದಲು ಹೇಳಿಕೊಂಡಿದ್ದರು. ಸಿನಿಮಾ ನೋಡಿದ ಮೇಲೆ ಈ ವಿಚಾರ ಹೌದು ಎನಿಸದೆ ಇರದು. ಇನ್ನು ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್​ ಕೂಡ ಪ್ರಾಮುಖ್ಯತೆ ವಹಿಸಿಕೊಂಡಿದೆ.

ಇದನ್ನೂ ಓದಿ: 'ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್' ಚಿತ್ರಕ್ಕೆ ಕಂಟಕ; ತಂಡದ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ!

ವಿಜಯ್​ ಸೇತುಪತಿ, ನವಾಜುದ್ದೀನ್​ ಸಿದ್ಧಕಿ ವಿಲನ್​ಗಳಾಗಿ ಮಿಂಚಿದ್ದಾರೆ. ರಜನಿಗೂ ಇವರಿಗೂ ಏನು ಸಂಬಂಧ ಎಂಬುದಕ್ಕೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು. ತ್ರಿಷಾ, ಸಿಮ್ರಾನ್​, ಎಂ. ಶಶಿಕುಮಾರ್​ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಅವು ಮನರಂಜನೆಯನ್ನೂ ನೀಡುತ್ತವೆ.  ಆದರೆ, ಕೆಲ ಪಾತ್ರಗಳು ಪ್ರಮುಖ ಎಂದೆನಿಸಿದರೂ ಅರ್ಧದಲ್ಲೇ ಕಾಣೆಯಾಗಿಬಿಡುತ್ತವೆ. ಒಟ್ಟಿನಲ್ಲಿ, ಕೆಲವು ಋಣಾತ್ಮಕ ಅಂಶವನ್ನು ಬದಿಗಿಟ್ಟು ‘ಪೆಟ್ಟಾ’ ನೋಡಿದರೆ, ಇಷ್ಟವಾಗಬಹುದು. ಅದರಲ್ಲೂ, ರಜನಿಕಾಂತ್​ ಮೊದಲಿನ ಗತ್ತಲ್ಲಿ ಕಂಬ್ಯಾಕ್​ ಮಾಡಿರುವುದರಿಂದ ಅವರ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಬಹುದು.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ