Valimai: ಕಾಲಿವುಡ್​ನಲ್ಲಿ ಇದೆಂಥಾ ಸ್ಟಾರ್​​ ವಾರ್?​ ಅಜಿತ್​ ಅಭಿಮಾನಿಗಳ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ

ಮೂರು ವರ್ಷಗಳ ನಂತರ ಬಿಡುಗಡೆ ಆದ ಮೊದಲ ಅಜಿತ್ ಸಿನಿಮಾ ಇದಾಗಿರುವ ಕಾರಣ ಅಜಿತ್ ಅಭಿಮಾನಿಗಳು (Ajith Fans) ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಇದು ದಳಪತಿ ವಿಜಯ್​ ಅಭಿಮಾನಿಗಳ (Vijay Fans) ಕಣ್ಣು ಕೆಂಪು ಮಾಡಿತ್ತು.

ಅಜಿತ್​, ವಿಜಯ್

ಅಜಿತ್​, ವಿಜಯ್

  • Share this:
ಚಿತ್ರರಂಗದಲ್ಲಿ ಸ್ಟಾರ್ ವಾರ್ (Star War)​ ಇರುವುದು ಕಾಮನ್​. ಸ್ಯಾಂಡಲ್​ವುಡ್(Sandalwood)​ನಲ್ಲಿ ಸ್ಟಾರ್​​ ವಾರ್​ ಕಡಿಮೆ. ಆದರೆ, ಬೇರೆ ಭಾಷೆಯ ಚಿತ್ರರಂಗದಲ್ಲಿ ಇದು ಕಾಮನ್​. ಅದರಲ್ಲೂ ತಮಿಳು ಸಿನಿಮಾರಂಗ(Tamil Cinema Industry)ದಲ್ಲಿ ಸ್ಟಾರ್ ವಾರ್​ ಅನ್ನೋದು ಮೊದಲಿನಿಂದಲೂ ಇದೆ. ತಮಿಳುನಾಡಿನಲ್ಲಿ ಅಜಿತ್ (Ajith) ಹಾಗೂ ವಿಜಯ್ (Vijay) ಅಭಿಮಾನಿಗಳ ನಡುವಿನ ವೈರತ್ವ ಇನ್ನಾವುದೇ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಲ್ಲ. ಅಜಿತ್ ಹಾಗೂ ವಿಜಯ್ ಅಭಿಮಾನಿಗಳದ್ದು ಸದಾ ಕಿತ್ತಾಟ. ಈ ಬಾರಿಯಂತೂ ಈ ವೈಷಮ್ಯ ಮೇರೆ ಮೀರಿದೆ. ಫೆಬ್ರವರಿ 24ರಂದು ಅಜಿತ್​ ನಟನೆಯ ವಲಿಮೈ (Valimai) ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂರು ವರ್ಷಗಳ ನಂತರ ಬಿಡುಗಡೆ ಆದ ಮೊದಲ ಅಜಿತ್ ಸಿನಿಮಾ ಇದಾಗಿರುವ ಕಾರಣ ಅಜಿತ್ ಅಭಿಮಾನಿಗಳು (Ajith Fans) ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಇದು ದಳಪತಿ ವಿಜಯ್​ ಅಭಿಮಾನಿಗಳ (Vijay Fans) ಕಣ್ಣು ಕೆಂಪು ಮಾಡಿತ್ತು. ಇದನ್ನು ಸಹಿಸದ ವಿಜಯ್ ಅಭಿಮಾನಿಗಳು ಅಜಿತ್​ ಅಭಿಮಾನಿಗಳ ಮೇಲೆ ದಾಳಿ (Attack) ನಡೆಸಿದ್ದಾರೆ.

ಕಟೌಟ್​ ಕಟ್ಟುತ್ತಿದ್ದವರ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ!

ಹೌದು, ನಿನ್ನೆ ತಮಿಳುನಾಡಿನ ಕೊಯಂಬತ್ತೂರಿನ ಗಂಗಾ, ತುಂಗಾ, ಕಾವೇರಿ ಚಿತ್ರಮಂದಿರದ ಬಳಿ ಕೆಲವು ಅಭಿಮಾನಿಗಳು ಅಜಿತ್‌ ಅವರ ಕಟೌಟ್, ಫ್ಲೆಕ್ಸ್ ಕಟ್ಟುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಕೆಲವರು ಅಭಿಮಾನಿಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಬಳಿಕ ಅಲ್ಲಿಂದ ಕೂಡಲೇ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಅಜಿತ್​​ ಅವರ ಅಭಿಮಾನಿಯ ಕಾಲಿಗೆ ಸುಟ್ಟ ಗಾಯಗಳಾಗಿವೆ. ಜೊತೆಗೆ ಅಜಿತ್​ ಅವರ ಕಟೌಟ್​, ಫ್ಲೆಕ್ಸ್​ ಕೂಡ ಸುಟ್ಟು ಕರಕಲಾಗಿದೆ. ದಾಳಿ ಮಾಡುವಾಗ ಮುಖಕ್ಕೆ ಮಾಸ್ಕ್​ ಹಾಕಿದ್ದರಿಂದ ದಾಳಿಕೋರರು ಯಾರು ಎಂದು ಗೊತ್ತಾಗಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ರಾ ವಿಜಯ್​ ಫ್ಯಾನ್ಸ್​!

ಈ ಘಟನೆ ನಡೆಯುತ್ತಿದ್ದಂತೆ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಅಜಿತ್ ಅಭಿಮಾನಿಗಳನ್ನು ಪ್ರಶ್ನೆ ಮಾಡಿದ್ದಾರೆ. ಯಾರ ಮೇಲಾದರೂ ನಿಮಗೆ ಅನುಮಾನವಿದ್ದರೆ ಹೇಳಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಜಿತ್​ ಅಭಿಮಾನಿಗಳು ಇದು ಪಕ್ಕಾ ವಿಜಯ್​ ಅಭಿಮಾನಿಗಳೇ ಮಾಡಿದ್ದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ದಾಳಿ ಮಾಡುವಾದ ‘ಜೈ ದಳಪತಿ’ ಎಂದು ಕೆಲವರು ಕೂಗುತ್ತಿದ್ದರು ಎಂದು ಅಜಿತ್​ ಅಭಿಮಾನಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಟ್ಟ ಸ್ಯಾಂಡಲ್​ವುಡ್ `ಸಲಗ’, ಶಿವರಾತ್ರಿಗೆ ಟೈಟಲ್​ ಲಾಂಚ್​!

ಮತ್ತೊಂದೆಡೆ ಅಜಿತ್​ ಅಭಿಮಾನಿಗಳಿಂದ ಹುಚ್ಚಾಟ!

ಮತ್ತೊಂದು ಕಡೆ ಅಜಿತ್​ ಅಭಿಮಾನಿಗಳು ಅವರ ನೆಚ್ಚಿನ ನಟನ ಕಟೌಟ್​ಗೆ ಅಭಿಷೇಕ ಮಾಡಲು ಸ್ಥಳೀಯ ಅಂಗಡಿಗಳಿಂದ ಹಾಲು, ಮೊಸರಿನ ಪ್ಯಾಕೇಟ್​​ಗಳನ್ನು ಕಳ್ಳತನ ಮಾಡಿದ್ದಾರಂತೆ. ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕರ ಜೊತೆ ಕಿರಿಕ್ ಸಹ ಮಾಡಿದ್ದಾರಂತೆ. ನಮ್ಮ ತಲಾ ಸಿನಿಮಾ ರಿಲೀಸ್ ಆಗಿದೆ, ದುಡ್ಡು ಕೇಳುತ್ತಿಯ? ಎಂದು ಪ್ರಶ್ನೆ ಮಾಡಿ ಹಲ್ಲೆಗೂ ಕೂಡ ಮುಂದಾಗಿದ್ದರಂತೆ.

ಇದನ್ನೂ ಓದಿ: ಈ ವಾರ ಸಿನಿರಸಿಕರಿಗೆ ಹಬ್ಬ.. ಯಾವುದನ್ನು ನೋಡೋದು? ಯಾವುದನ್ನು ಬಿಡೋದು?

ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ನಡುವಿನ ವೈರತ್ವ ಬಹಳ ಹಳೆಯದ್ದು. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ ಘಟನೆಗಳು ಸಹ ನಡೆದಿವೆ. ಅಭಿಮಾನಿಗಳ ಈ ದುರ್ವರ್ತನೆಯಿಂದ ಬೇಸತ್ತ ಅಜಿತ್ 2017ರಲ್ಲಿ ಪ್ರಕಟಣೆ ಹೊರಡಿಸಿ, ಫ್ಯಾನ್ಸ್‌ ಕ್ಲಬ್‌ಗಳಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಇತ್ತೀಚೆಗೆ ಅವರ ಟೈಟಲ್​ ‘ತಲಾ’ ಎಂದು ನನ್ನನ್ನುಕರೆಯಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು.
Published by:Vasudeva M
First published: