ಕೆಜಿಎಫ್​ ಚಿತ್ರಕ್ಕೆ ಕಳೆಯಿತು ಕಂಟಕ; ಅರ್ಜಿ ವಾಪಸ್​ ಪಡೆದ ವೆಂಕಟೇಶ್​

ಇಂದು ವೆಂಕಟೇಶ್ ಪರ ವಕೀಲ ಕೆ. ರಘುನಾಥ್ ನ್ಯಾಯಾಲಯದಲ್ಲಿ ವಿತ್ ಡ್ರಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಾಪಸ್ ಪಡೆದ ಹಿನ್ನಲೆಯಲ್ಲಿ ನ್ಯಾಯಾಧೀಶರು ಕೇಸ್ ಇತ್ಯರ್ಥಪಡಿಸಿದರು.

Rajesh Duggumane | news18
Updated:December 21, 2018, 6:57 PM IST
ಕೆಜಿಎಫ್​ ಚಿತ್ರಕ್ಕೆ ಕಳೆಯಿತು ಕಂಟಕ; ಅರ್ಜಿ ವಾಪಸ್​ ಪಡೆದ ವೆಂಕಟೇಶ್​
ಯಶ್​
  • News18
  • Last Updated: December 21, 2018, 6:57 PM IST
  • Share this:
ಕಿರಣ್​
ಬೆಂಗಳೂರು: ಕೆಜಿಎಫ್​ ಚಿತ್ರ ಒಂದರ ಮೇಲೊಂದರಂತೆ ದಾಖಲೆ ಬರೆಯುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕನಿಂದ ಧನಾತ್ಮಕ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಚಿತ್ರಕ್ಕೆ ಎದುರಾಗಿದ್ದ ಕಂಟಕ ಈಗ ದೂರವಾಗಿದೆ.

ಹೌದು, 'ಕೆಜಿಎಫ್​' ತಂಗ ಜೀವನ ಆಧರಿಸಿ ಮಾಡಿದ ಚಿತ್ರ ಎಂದು ಆರೋಪಿಸಿ ಕೋರ್ಟ್​ ಮೆಟ್ಟಿಲೇರಿದ್ದ ವೆಂಕಟೇಶ್​ ಈಗ ಅರ್ಜಿ ಹಿಂಪಡೆದಿದ್ದಾರೆ. ಹಾಗಾಗಿ ಚಿತ್ರತಂಡ ಹಾಗೂ ಇಡೀ ಸಿನಿಮಾ ತಂಡ, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇಂದು, ವೆಂಕಟೇಶ್ ಪರ ವಕೀಲ ಕೆ. ರಘುನಾಥ್ ನ್ಯಾಯಾಲಯದಲ್ಲಿ ವಿತ್ ಡ್ರಾ ಅರ್ಜಿ ಸಲ್ಲಿಕೆ ಮಾಡಿದರು. ಈ ವೇಳೆ ನ್ಯಾಯಾಧೀಶರು, ‘ಇದೇನ್ರಿ ನಿನ್ನೆ ಕೇಸ್​ ಹಾಕಿ ಇಂದು ವಾಪಸ್​ ತೆಗೆದುಕೊಳ್ಳುತ್ತೀದ್ದೀರಾ? ಸಿನಿಮಾಕ್ಕೆ ಒಳ್ಳೆ ಪ್ರಚಾರ ಕೊಟ್ಟಂಗೆ ಆಯ್ತಲ್ಲ’ ಎಂದು ಅರ್ಜಿದಾರರಿಗೆ ಪ್ರಶ್ನಿಸಿದರು. ಅರ್ಜಿ ವಾಪಸ್ ಪಡೆದ ಹಿನ್ನಲೆಯಲ್ಲಿ ಈ ಪ್ರಕರಣ ಇತ್ಯರ್ಥವಾಯಿತು.

ವೆಂಕಟೇಶ್​ ಪ್ರತಿಕ್ರಿಯೆ

ಚಿತ್ರರಂಗದ ಹಿರಿಯರ ಮಾರ್ಗದರ್ಶನ ಮೇರೆಗೆ ದೂರನ್ನು ಹಿಂಪಡೆಯಲಾಗಿದೆ. ಚಿತ್ರದ ನಿರ್ಮಾಪಕರೊಂದಿಗೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ಚಿತ್ರರಂಗದ ಹಿರಿಯರು ನಾವು ನಿಮ್ಮ ಜೊತೆ ಇದ್ದೀವಿ ಎಂದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದೂರನ್ನು ವಾಪಾಸು ಪಡೆಯುವ ತೀರ್ಮಾನ ಮಾಡಿದ್ದೇನೆ ಎಂದು ದೂರುದಾರ ವೆಂಕಟೇಶ್ ತಿಳಿಸಿದ್ದಾರೆ.

ವೆಂಕಟೇಶ್ ಚಿತ್ರವನ್ನು ನೋಡಿದ್ದಾರೆ. ತಂಗಂ ಕಥೆಗೂ ಕೆ.ಜಿ.ಎಫ್ ಗೂ ಯಾವುದೇ ಸಂಬಂಧ ಇಲ್ಲ ಎಂಬುದು ಅವರಿಗೆ ಮನವರಿಕೆ ಆಗಿದೆ. ಮಿಸ್ ಕಮಿನಿಕೇಷನ್‌ನಿಂದ ವೆಂಕಟೇಶ್ ಕೋರ್ಟ್ ಹೋಗಿದ್ದರು. ಕೋಲಾರಕ್ಕೆ ಯಾವುದೇ ಮಾನಹಾನಿ ಮಾಡುವ ಉದ್ದೇಶವಿರಲಿಲ್ಲ. ವಾಣಿಜ್ಯ ಮಂಡಳಿಯ ಹಿರಿಯರ ಜೊತೆ ಸೇರಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೆವೆ ಎಂದು ಕೆಜಿಎಫ್ ಚಿತ್ರ ತಂಡದ ಪರ ವಕೀಲ ಶಾಂತಿಭೂಷಣ್ ಹೇಳಿದ್ದಾರೆ.ಇದನ್ನೂ ಓದಿ: ಕೆಜಿಎಫ್​ ವಿಮರ್ಶೆ: ಈ ಚಿತ್ರದಲ್ಲಿ ಯಶ್ ಒಬ್ಬರೇ ಹೀರೋ ಅಲ್ಲ!

 "ಕೆಜಿಎಫ್​​ನ ಕುಖ್ಯಾತ ರೌಡಿ ತಂಗಂ ವ್ಯಕ್ತಿಯ ಜೀವನಾಧಾರಿತ ಕಥೆಯನ್ನು ಸಿನಿಮಾ ಒಳಗೊಂಡಿದೆ. ರೌಡಿ ತಂಗಂ ಸಿನಿಮಾ ಮಾಡಲು ಬೇಕಿರುವ ಹಕ್ಕನ್ನು ನಾನು ಹೊಂದಿದ್ದೇನೆ. ಇದೇ ಕಥೆಯ ಆಧಾರದ ಮೇಲೆ 'ಕೆಜಿಎಫ್'​​ ಸಿನಿಮಾ ಮಾಡಲಾಗಿದೆ" ಎಂದು ನಿರ್ಮಾಪಕ ವೆಂಕಟೇಶ್​​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ 2019 ಜನವರಿ 7ರ ತನಕ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಿತ್ತು. ಇನ್ನು ಕೋರ್ಟ್​​ ಆರ್ಡರ್​ ಕೈಗೆ ತಲುಪದ ಕಾರಣ ಚಿತ್ರ ಪ್ರದರ್ಶನ ಕಾಣುತ್ತಿದೆ.

First published: December 21, 2018, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading