ಪೆರನ್ಬು: ಬಿಡುಗಡೆಗೆ ಮುನ್ನವೇ ರಾಷ್ಟ್ರ ಪ್ರಶಸ್ತಿ ನಿರೀಕ್ಷೆಯಲ್ಲಿ ಚಿತ್ರತಂಡ!

news18
Updated:July 18, 2018, 9:48 PM IST
ಪೆರನ್ಬು: ಬಿಡುಗಡೆಗೆ ಮುನ್ನವೇ ರಾಷ್ಟ್ರ ಪ್ರಶಸ್ತಿ ನಿರೀಕ್ಷೆಯಲ್ಲಿ ಚಿತ್ರತಂಡ!
news18
Updated: July 18, 2018, 9:48 PM IST
-ನ್ಯೂಸ್ 18 ಕನ್ನಡ

'ತಂಗ ಮೀನುಗಳ್' , 'ತಾರಾಮಣಿ'ಯಂತಹ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಮ್​ ಅವರ ಮುಂದಿನ ಚಿತ್ರದ ಬಗ್ಗೆ ಭಾರಿ ಕುತೂಹಲವಿತ್ತು. ಸಿನಿಪ್ರಿಯರ ಈ ಕುತೂಹಲಕ್ಕೆ ಅಂತ್ಯ ಹಾಡಲು 'ಪೆರನ್ಬು' ಎಂಬ ಸಿನಿಮಾವನ್ನು ಅವರು ವರ್ಷಗಳ ಹಿಂದೆಯೇ ಘೋಷಿಸಿದ್ದರು.

ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿಯನ್ನು ನಾಯಕನನ್ನಾಗಿಸಿ ಈ ಚಿತ್ರ ಮಾಡುವುದಾಗಿ ರಾಮ್​ ತಿಳಿಸಿದ್ದರು. ಮಮ್ಮುಟ್ಟಿ ಮತ್ತು ರಾಮ್ ಒಂದಾಗುತ್ತಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಕುತೂಹಲ ಇಮ್ಮಡಿಯಾಗಿತ್ತು. ಆದರೆ ಅನೇಕ ಚಿತ್ರಗಳಿಗೆ ಸಹಿ ಹಾಕಿದ್ದ ನಟ ಮಮ್ಮುಟ್ಟಿ ಅವರ ಕಾಲ್​ಶೀಟ್​ ಸಿಗುವುದೇ ನಿರ್ದೇಶಕ ರಾಮ್​ಗೆ ಚಿಂತೆಯಾಗಿತ್ತು.

ಬರೋಬ್ಬರಿ ಎರಡು ವರ್ಷಗಳ ಕಾಲ ಮಾಲಿವುಡ್ ಮೆಗಾಸ್ಟಾರ್​ ಡೇಟ್ಸ್​ಗಾಗಿ ಕಾದು ಕುಳಿತಿದ್ದ ನಿರ್ದೇಶಕ ರಾಮ್​ ಕೊನೆಗೂ 'ಪೆರನ್ಬು' ಸಿನಿಮಾವನ್ನು ಮುಗಿಸಿದ್ದಾರೆ. ಈ ಹಿಂದಿನ ಸಿನಿಮಾಗಳಿಗೆ ವಿಭಿನ್ನವಾಗಿ ಕಥೆ ಹೆಣೆದಿದ್ದ ರಾಮ್​ ಅವರ ಈ ಹೊಸ ಕಲ್ಪನೆ ಕೆಲ ತಿಂಗಳುಗಳ ಹಿಂದೆಯೇ ವಿದೇಶದಲ್ಲಿ ತೆರೆ ಕಂಡಿದೆ. ಅದರಲ್ಲೂ ಪ್ರತಿಷ್ಟಿತ  ಶಾಂಘೈ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಮತ್ತು 47ನೇ ಅಂತರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್ ರೊಟರ್ಡಾಮ್​ನಲ್ಲಿ ಪದರ್ಶನ ಕಂಡು ಜನ ಮೆಚ್ಚುಗೆ ಪಡೆದಿದೆ.

ಕಳೆದ ಒಂದು ವರ್ಷದಿಂದ ಕಾಲಿವುಡ್​ ಮತ್ತು ಮಾಲಿವುಡ್​ನಲ್ಲಿ ಸಖತ್ ಸೌಂಡ್​ ಮಾಡುತ್ತಿದ್ದ 'ಪೆರನ್ಬು' ಸಿನಿಮಾದ ಮೊದಲ ಟೀಸರ್ ಇದೀಗ  ಭಾರತದಲ್ಲಿ ಬಿಡುಗಡೆಯಾಗಿದೆ. ಟೀಸರ್​ನಲ್ಲಿ ತಮ್ಮ ಅಭಿನಯದ ಮೂಲಕ ನಟ ಮಮ್ಮುಟ್ಟಿ ಪ್ರೇಕ್ಷರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ.

ಎರಡು ನಿಮಿಷಗಳ ಟೀಸರ್​ ಕಾಡುವ ಕಥೆಯೊಂದರ ಪ್ರತಿರೂಪ ಎಂಬಂತಿದೆ. ಸಂದೇಶಾತ್ಮಕ ಚಿತ್ರಗಳನ್ನು ನಿರ್ದೇಶಿಸುವಲ್ಲಿ ನಿಸ್ಸೀಮರಾಗಿರುವ ರಾಮ್​ ಅವರು ಈ ಬಾರಿ ಅಧ್ಯಯಗಳ ರೂಪದಲ್ಲಿ ತಂದೆ ಮತ್ತು ವಿಕಲಚೇತನ ಮಗಳ ಕಥೆಯನ್ನು ಬೆಳ್ಳಿಪರದೆಯಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
Loading...


'ಮಗು ಯಾಕೆ ಇತರೆ ಮಕ್ಕಳಂತೆ ನಡೆದಾಡುತ್ತಿಲ್ಲ ಎಂದು ಹಲವು ವರ್ಷಗಳ ಕಾಲ ಕೊರಗಿದ ನನಗೆ, ಮಗುವಿನ ರೀತಿಯಲ್ಲಿ ನಡೆಯುವುದು ಎಷ್ಟೊಂದು ಕಷ್ಟ ಎಂದು ತಿಳಿಯಿತು. ಇದರ ಬಳಿಕವೇ ನೀವ್ಯಾಕೆ ಅವರ ರೀತಿಯಿಲ್ಲ ಎಂದು ಒಬ್ಬರನ್ನು ಕೇಳುವುದು ಎಂತಹ ಘೋರ ಅಪರಾಧ ಎಂಬುದು ಗೊತ್ತಾಗಿದೆ'. ಹಿನ್ನಲೆಯಲ್ಲಿ ಯುವನ್​ ಶಂಕರ್​ ರಾಜಾ ಅವರ ಸಂಗೀತದೊಂದಿಗೆ ಮೂಡಿ ಬರುವ ಈ ಡೈಲಾಗ್ ಟ್ರೇಲರ್​ ನೋಡಿದವರನ್ನು ಒಮ್ಮೆ ಯೋಚಿಸುವಂತೆ ಮಾಡುತ್ತಿದೆ.

ಈಗಾಗಲೇ ಅತ್ಯುತ್ತಮ ಅಭಿನಯಕ್ಕಾಗಿ ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಮಮ್ಮುಟ್ಟಿಯದೊಂದಿಗೆ ನಿರ್ದೇಶಕ ರಾಮ್​ ರಾಮ್​ ಸೇರಿರುವುದು ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಇಬ್ಬರು ನ್ಯಾಷನಲ್ ಆವಾರ್ಡ್​​ ವಿಜೇತರ ಸಮಾಗಮದಿಂದ ಈ ವರ್ಷದ ರಾಷ್ಟ್ರ ಪ್ರಶಸ್ತಿ 'ಪೆರನ್ಬು' ಚಿತ್ರಕ್ಕೆ ಎಂಬ ವಾದಗಳು ಸಾಮಾಜಿಕ ತಾಣದಲ್ಲಿ ಹುಟ್ಟಿಕೊಂಡಿದೆ.

'ಪೆರನ್ಬು' ಚಿತ್ರದ ಟ್ರೇಲರ್​ಗೆ ಸಿನಿಪ್ರಿಯರು ಮನಸೋತಿದ್ದು, ಮಮ್ಮುಟ್ಟಿ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ.  ಒಟ್ಟಾರೆ ನಿರ್ದೇಶಕ ರಾಮ್​ ಮತ್ತು ಮಮ್ಮುಟ್ಟಿ ಅಭಿಮಾನಿಗಳ ಕಾಯುವಿಕೆಯ ಫಲಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ತಮಿಳು ಮತ್ತು ಮಲಯಾಳಂನಲ್ಲಿ ತೆರೆ ಕಾಣಲಿರುವ ಚಿತ್ರವೊಂದು ಬಿಡುಗಡೆ ಮುನ್ನವೇ ರಾಷ್ಟ್ರ ಪ್ರಶಸ್ತಿಗಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದು ಸಹ 'ಪೆರನ್ಬು' ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...