ಹಿಂದಿ ಚಿತ್ರರಂಗದ ಜನಪ್ರಿಯ ಜೋಡಿ ಕರೀನಾ ಕಪೂರ್ ಖಾನ್(Kareena Kapoor Khan) ಹಾಗೂ ಸೈಫ್ ಅಲಿ ಖಾನ್(Saif ali khan) ಮಗ ತೈಮೂರ್ ಅಲಿ ಖಾನ್ ಪಟೌಡಿ,(Taimur ali khan pataudi) ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳಲ್ಲಿ(Celebrity Kid) ಅತಿ ಹೆಚ್ಚು ಸುದ್ದಿಯಲ್ಲಿರುವ ಮಗು.. ಸದಾ ತೈಮೂರ್ ಬೆನ್ನುಹತ್ತುವ ಪಾಪರಾಜಿ ಗಳು ಆತನ ಪ್ರತಿಯೊಂದು ನಡೆಯ ಫೋಟೋ(Photo) ತೆಗೆದು ಸೋಶಿಯಲ್ ಮೀಡಿಯಾದಲ್ಲಿ(Social Media) ಹಾಕುತ್ತಲೇ ಇರುತ್ತಾರೆ. ಏನು ತಿಳಿಯದ ಮುಗ್ಧ ಬಾಲಕ ತನ್ನ ತುಂಟ ನಡವಳಿಕೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಧರ್ಮಾಂಧರ ಪಾಲಿಗೆ ಆಗಾಗ ತುತ್ತಾಗಿ ಹೀನವಾದ ಮಾತುಗಳನ್ನು ಕೇಳುತ್ತಲೇ ಬಂದಿದ್ದಾನೆ.. ಮಕ್ಕಳು ಹಿಡಿದುಕೊಳ್ಳುವಂತೆ ತೈಮೂರ್ ಸಹ ತಿಳಿದುಕೊಂಡಿರುವ ಆಟಿಕೆ ಬಂದೂಕು ಈಗ ಆತನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಧರ್ಮಾಂಧರು ರೊಚ್ಚಿಗೇಳುವಂತೆ ಮಾಡಿದೆ..
ಆಟಿಕೆ ಬಂದೂಕು ಹಿಡಿದ ತೈಮೂರ್ ವಿರುದ್ಧ ಆಕ್ರೋಶ
ತೈಮೂರ್ ಅಮ್ಮ ಕರೀನಾ ಕಪೂರ್ ತನ್ನ ಇಬ್ಬರು ಮಕ್ಕಳಾದ ತೈಮೂರ್ ಹಾಗೂ ಜೆಹ್ ಅವರೊಟ್ಟಿಗೆ ತಂದೆ ರಣ್ದೀರ್ ಕಪೂರ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇವರ ಬೆನ್ನುಹತ್ತಿದ್ದ ಪಾಪರಾಜಿ ಗಳು ತೈಮೂರ್ ಹಾಗೂ ಜೆಹ್ ಹಾಗೂ ಕರೀನಾ ಅವರ ಫೋಟೋ ತೆಗೆಯಲು ಶುರು ಮಾಡಿದ್ದಾರೆ..
ಈ ವೇಳೆ ತೈಮೂರ್ ಕಾರು ಇಳಿದು ತಾತನ ಮನೆಗೆ ಹೋಗುವಾಗ ಆಟಿಕೆ ಬಂದೂಕು ಹಿಡಿದುಕೊಂಡು ಹೋಗುತ್ತಿದ್ದ.. ಅದೇ ಆಟಿಕೆ ಬಂದೂಕನ್ನು ಬಾಲಿವುಡ್ ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವ, ಪಾಪರಾಜಿ ಗಳ ಕಡೆಗೆ ಗುರಿ ಇಟ್ಟು ತೈಮೂರ್ ಫೋಸ್ ಕೊಟ್ಟಿದ್ದಾನೆ. ಈಗ ಇದರ ಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಟಿಕೆ ಬಂದೂಕು ಹಿಡಿದ ತೈಮೂರ್‌ನನ್ನು ಟ್ರೋಲಿಗರು ಭಯೋತ್ಪಾದಕರಿಗೆ ಹೋಲಿಸಿದ್ದಾರೆ.
ಇದನ್ನೂ ಓದಿ: ‘ನನ್ನ ಮಗ-ಸೊಸೆ ಬೇರೆಯಾಗಿಲ್ಲ‘; ಅಚ್ಚರಿ ಹೇಳಿಕೆ ಕೊಟ್ಟ ಧನುಷ್ ತಂದೆ
ತೈಮೂರ್ ನನ್ನ ಭಯೋತ್ಪಾದಕನಿಗೆ ಹೋಲಿಸಿದ ಟ್ರೋಲಿಗರು
ಎಲ್ಲಾ ಸಾಮಾನ್ಯ ಮಕ್ಕಳಂತೆ ತೈಮೂರ್ ಸಹ ಆಟಿಕೆಯ ಬಂದೂಕು ಹಿಡಿದುಕೊಂಡು ಪೋಸ್ ನೀಡಿದ್ದಾರೆ ಎನ್ನುವುದನ್ನು ಮರೆತಿರುವ ಧರ್ಮಾಂಧರು ಪುಟ್ಟ ಬಾಲಕನನ್ನು ಭಯೋತ್ಪಾದಕನಿಗೆ ಹೋಲಿಕೆ ಮಾಡಿದ್ದಾರೆ.
ಕೆಲವರು ವೈರಲ್ ಆಗುತ್ತಿರುವ ಫೋಟೋ ಹಾಗೂ ವಿಡಿಯೋಗಳಿಗೆ ಈಗಿನಿಂದಲೇ ಭಯೋತ್ಪಾದನೆಯ ತಾಲೀಮು ಶುರು ಮಾಡಿಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ..., ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಬಾಲ ಜಿಹಾದ್' ಎಂದು ಕರೆದಿದ್ದಾರೆ. ಅಲ್ಲದೆ ದೊಡ್ಡವನಾದ ಮೇಲೆ ಇವನು ಭಯೋತ್ಪಾದಕನೇ ಆಗಬೇಕಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ನೇರವಾಗಿ 'ಭಯೋತ್ಪಾದಕ' ಎಂದೇ ಕರೆದಿದ್ದಾರೆ. 'ಪಕ್ಕಾ ತಾಲಿಬಾನಿಯಂತೆ ಕಾಣುತ್ತಿದ್ದಾನೆ' ಎಂದು ಇನ್ನು ಕೆಲವರು ಹೇಳಿದ್ದಾರೆ. 'ಅಪ್ಪ ಜಿಹಾದಿಯವನ ಹೆಸರು ಇಟ್ಟಿದ್ದಾರೆ ಹಾಗಾಗಿ ಜಿಹಾದಿಯೇ ಆಗುತ್ತಿದ್ದಾನೆ' ಎಂದೊಬ್ಬರು ಕಮೆಂಟ್ ಮಾಡಿದ್ದಾರೆ.
ತೈಮೂರ್ ಪರ ನಿಂತ ಹಲವರು..
ಇನ್ನು ಕೆಲವರು ಪುಟ್ಟ ಬಾಲಕ ತೈಮೂರ್ ವಿರುದ್ಧ ತಿರುಗಿಬಿದ್ದಿದ್ರೆ,ಆತನ ಪರವಾಗಿಯೂ ಕೆಲವರು ಮಾತುಗಳನ್ನಾಡಿದ್ದಾರೆ. ತೈಮೂರ್ ಇನ್ನು ಮಗು ಅವನನ್ನು ಅವನ ಪಾಡಿಗೆ ಬಿಟ್ಟುಬಿಡಿ... ಮಗುವಾಗಿದ್ದಾಗ ಎಲ್ಲರ ಬಳಿ ಆಟಿಕೆ ಬಂದೂಕುಗಳು ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ... ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಮಗುವನ್ನು ಭಯೋತ್ಪಾದಕ ಎಂದಿದ್ದಕ್ಕೆ ಹಲವರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Samantha-Naga Chaitanya ಮದುವೆಯಾದ ಸ್ಥಳದಲ್ಲೇ ಮೌನಿ ರಾಯ್, ಸೂರಜ್ ವಿವಾಹವಂತೆ!
ಹೆಸರಿನಿಂದಲೂ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ತೈಮೂರ್
ತೈಮೂರ್ ಹುಟ್ಟಿದಾಗ ಕರೀನಾ ಹಾಗೂ ಸೈಫ್ ಆಲಿ ಖಾನ್ ಆತನಿಗೆ, ದಿಲ್ಲಿಯಲ್ಲಿ ಒಂದೇ ದಿನ 1,00,000 ಮಂದಿ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ತೈಮೂರ್ ಹೆಸರನ್ನು ಕರೀನಾ ಪುತ್ರನಿಗೆ ಹೆಸರು ಇಟ್ಟಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.. ಆಗ ತಾನೇ ಹುಟ್ಟಿದ ಮಗು ಎಂದು ಕೂಡ ನೋಡದೆ ಟ್ರೋಲಿಗರು ಆತನನ್ನ ಹಿಗ್ಗಾಮಗ್ಗಾ ಟ್ರೋಲ್ ಮಾಡಿದ್ದರು..ಕರೀನಾ ಹಾಗೂ ಸೈಫ್ ಅಲಿ ಖಾನ್ ಅವರು ತಮ್ಮ ಮಗುವಿಗೆ ತೈಮೂರು ಹೆಸರಿಡುವುದು, ಯುರೋಪಿಯನ್ನರು ತಮ್ಮ ಮಕ್ಕಳಿಗೆ ಹಿಟ್ಲರ್ ಹೆಸರಿಟ್ಟಂತೆ ಆಗಿದೆ ಎಂದೆಲ್ಲಾ ಸೈಫ್ ಹಾಗೂ ಕರೀನಾ ಕಾಲೆಳೆದಿದ್ದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ