• Home
  • »
  • News
  • »
  • entertainment
  • »
  • Shiva Rajkumar: SRK ಅಂದ್ರೆ ಒನ್​ ಆ್ಯಂಡ್​ ಓನ್ಲಿ ಶಿವರಾಜ್‍ಕುಮಾರ್, ಕಿಂಗ್ ಖಾನ್​ಗೆ ಕುಟುಕಿದ ಕನ್ನಡಿಗರು

Shiva Rajkumar: SRK ಅಂದ್ರೆ ಒನ್​ ಆ್ಯಂಡ್​ ಓನ್ಲಿ ಶಿವರಾಜ್‍ಕುಮಾರ್, ಕಿಂಗ್ ಖಾನ್​ಗೆ ಕುಟುಕಿದ ಕನ್ನಡಿಗರು

ಶಾರುಖ್ ಖಾನ್​ ಹಾಗೂ ಶಿವ ರಾಜ್​ಕುಮಾರ್

ಶಾರುಖ್ ಖಾನ್​ ಹಾಗೂ ಶಿವ ರಾಜ್​ಕುಮಾರ್

Shah Rukh Khan: ಶಾರುಖ್ ಖಾನ್​ ಅವರನ್ನು ಅಭಿಮಾನಿಗಳು ಪ್ರೀತಿಯಿಂದ SRK ಎಂದು ಕರೆಯುತ್ತಾರೆ. ಆದರೆ ಇದನ್ನು ಕನ್ನಡಿಗರು ಒಪ್ಪಿಕೊಳ್ಳುತ್ತಿಲ್ಲ. ಎಸ್​ಆರ್​ಕೆ ಎಂದರೆ ಶಾರುಖ್ ಖಾನ್​ ಅಲ್ಲ ಶಿವರಾಜ್​ಕುಮಾರ್ ಎನ್ನುತ್ತಿದ್ದಾರೆ ಕನ್ನಡಿಗರು.

  • Share this:

ನಟ ಶಾರುಖ್ ಖಾನ್ (Shah Rukh Khan) ಈಗಾಗಲೇ ಕನ್ನಡಿಗರನ್ನು ಕೆಣಕಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಮುಂದಿನ ಸಿನಿಮಾ ಪಠಾಣ್ (Pathan) ಚಿತ್ರವನ್ನು ಕೇವಲ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಶಾರುಖ್ ಖಾನ್ ತಿಳಿಸಿದ್ದಾರೆ. ಇದು ಕನ್ನಡಿಗರಿಗೆ ಬೇಸರ ತರಿಸಿದೆ. ಇಷ್ಟು ದೊಡ್ಡ ಮಟ್ಟದ ಮಾರ್ಕೆಟ್ ಇದ್ದರೂ ಸಹ ಏಕೆ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿಲ್ಲ ಎಂದು ಕನ್ನಡಿಗರು ಪ್ರಶ್ನಿಸಿದ್ದರು. ಇದೀಗ ಕನ್ನಡಿಗರು ಶಾರುಖ್​ಗೆ ಶಾಕ್​ ನೀಡಿದ್ದಾರೆ.


SRK ಅಂದ್ರೆ ಶಿವಣ್ಣ ಅಂದ ಫ್ಯಾನ್ಸ್ 


ಶಾರುಖ್ ಖಾನ್​ ಅವರನ್ನು ಅಭಿಮಾನಿಗಳು ಪ್ರೀತಿಯಿಂದ SRK ಎಂದು ಕರೆಯುತ್ತಾರೆ. ಆದರೆ ಇದನ್ನು ಕನ್ನಡಿಗರು ಒಪ್ಪಿಕೊಳ್ಳುತ್ತಿಲ್ಲ. ಎಸ್​ಆರ್​ಕೆ ಎಂದರೆ ಶಾರುಖ್ ಖಾನ್​ ಅಲ್ಲ ಶಿವರಾಜ್​ಕುಮಾರ್ ಎನ್ನುತ್ತಿದ್ದಾರೆ ಕನ್ನಡಿಗರು. ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋ ಟ್ವಿಟ್ಟರ್‌ನಲ್ಲಿ ಅಭಿಯಾನ ಒಂದನ್ನು ನಡಿಸಿತ್ತು. ಅದರಲ್ಲಿ SRK ಅವರ ನಿಮ್ಮ ಫೇವರೇಟ್ ಸಿನಿಮಾ ಯಾವುದು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಬಂದ ಹೆಚ್ಚಿನ ಕಾಮೆಂಟ್‌ಗಳಲ್ಲಿ ಕನ್ನಡ ಸಿನಿಮಾದ ಹೆಸರುಗಳೇ ಇದೆ. ಅದರಲ್ಲೂ ನಟ ಶಿವರಾಜ್ ಕುಮಾರ್ ಸಿನಿಮಾಗಳನ್ನು ಕಾಮೆಂಟ್​ ಮಾಡಿದ್ದಾರೆ. ಆ ಲಿಸ್ಟ್​ನಲ್ಲಿ ಜನುಮದ ಜೋಡಿ, ಚಿಗುರಿದ ಕನಸು, ಆನಂದ್, ರಣರಂಗ, ಟಗರು, ಜೋಗಿ, ದೊರೆ ಹೀಗೆ ವಿವಿಧ ಸಿನಿಮಾಗಳ ಹೆಸರನ್ನು ಹಾಕಿದ್ದಾರೆ.




ಅಮೆಜಾನ್ ಪ್ರೈಮ್ ಟ್ವಿಟ್ಟರ್​ನಲ್ಲಿ ಶಾರುಖ್ ಖಾನ್​ ಅವರ ಸಿನಿಮಾಗಳ ಬಗ್ಗೆ ಕೇಳಿತ್ತು. ಆದರೆ ಕನ್ನಡಿಗರು ಮಾತ್ರ SRK ಎಂದರೆ ಶಾರುಖ್ ಖಾನ್​ ಅಲ್ಲ, ಶಿವರಾಜ್​ ಕುಮಾರ್ ಎಂದು ಹೇಳುತ್ತಿದ್ದಾರೆ. ನಮಗೆ ಶಿವ ರಾಜ್​ಕುಮಾರ್ ಮಾತ್ರ SRK ಎಂದಿದ್ದಾರೆ. ನಮಗೆ SRK ಎಂದರೆ ಎಂದೆಂದಿಗೂ ಶಿವ ರಾಜ್​ಕುಮಾರ್ ಅವರೇ ಎಂದು ಅಭಿಮಾನಿಗಳು ಕಿಂಗ್​ ಖಾನ್​ಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೊಂದು ವಿಶೇಷ ಎಂದರೆ ಕೆಲವೇ ಕೆಲವರೂ ಮಾತ್ರ ಶಾರುಖ್ ಸಿನಿಮಾಗಳ ಹೆಸರನ್ನು ಕಾಮೆಂಟ್​ ಮಾಡಿದ್ದಾರೆ.


ಇದನ್ನೂ ಓದಿ: Vikrant Ronaನ ಬೆನ್ನಿಗೆ ನಿಂತ ಬಿಗ್​ ಬಿ, ಎಲ್ರೂ ಸಿನಿಮಾ ನೋಡ್ಲೇಬೇಕು ಎಂದು ಕಿಚ್ಚನಿಗೆ ಸಾಥ್


ಕನ್ನಡಿಗರನ್ನು ಕೆರಳಿಸಿದ್ದ ಕಿಂಗ್ ಖಾನ್​


ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ 'ಪಠಾಣ್' ಚಿತ್ರದ ಹೊಸ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಶಾರುಖ್  ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾರೆ. ಒಂದು ಕೈಯಲ್ಲಿ ಬಂದೂಕು ಹಿಡಿದಿರುವ ಅವರ ಉದ್ದನೆಯ ಕೂದಲು ಗಮನ ಸೆಳೆಯುತ್ತಿದೆ. ಇದಲ್ಲದೇ ವಿಡಿಯೋವೊಂದನ್ನು ಸಹ ಹಂಚಿಕೊಂಡಿದ್ದ ಅವರು, ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದರು. ಪಠಾಣ್​ ಸಿನಿಮಾ ಜನವರಿ 25, 2023 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಇದು ಕನ್ನಡಿಗರನ್ನು ಕೆರಳಿಸಿದೆ.


ಇದನ್ನೂ ಓದಿ: ನಾನು ಪುನೀತ್ ರಾಜ್​​ಕುಮಾರ್ ಫ್ಯಾನ್​ ಎಂದ ನಾಗ ಚೈತನ್ಯ, ಸಮಂತಾ ಮಾಜಿ ಪತಿಗೆ ಅಪ್ಪು ಮಾದರಿಯಂತೆ


ಸಿದ್ಧಾರ್ಥ್ ಆನಂದ್ 'ಪಠಾಣ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇದರಲ್ಲಿ ಸಲ್ಮಾನ್ ಖಾನ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ ಸಲ್ಮಾನ್ ಅಭಿನಯದ ಟೈಗರ್ 3 ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳೂ ಇವೆ.

Published by:Sandhya M
First published: