• Home
  • »
  • News
  • »
  • entertainment
  • »
  • Vedha Movie: ಬಿಜಿಎಂ ಸೂಪರ್! ಕಾಂತಾರ ನಂತರ ಕನ್ನಡದಲ್ಲಿ ವೇದ ಪಕ್ಕಾ ಹಿಟ್ ಅಂತಿದ್ದಾರೆ ನೆಟ್ಟಿಗರು

Vedha Movie: ಬಿಜಿಎಂ ಸೂಪರ್! ಕಾಂತಾರ ನಂತರ ಕನ್ನಡದಲ್ಲಿ ವೇದ ಪಕ್ಕಾ ಹಿಟ್ ಅಂತಿದ್ದಾರೆ ನೆಟ್ಟಿಗರು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವೇದ ಪೋಸ್ಟರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವೇದ ಪೋಸ್ಟರ್

2022ರಲ್ಲಿ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ. ಇದೀಗ ಕಾಂತಾರ ಸಿನಿಮಾ ನಂತರ ವೇದ ಸಿನಿಮಾ ದೊಡ್ಡ ಸೂಪರ್ ಹಿಟ್ ಆಗಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್ (Sandalwood) ನಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shivarajkumar) ಅವರ ವೇದ (Vedha) ಸಿನಿಮಾ ಡಿ. 23ರಂದು ಬಿಡುಗಡೆಯಾಗಿದ್ದು ಸಿನಿಮಾ (Cinema) ಸೂಪರ್ ಹಿಟ್ (Superhit) ಆಗಿ ಹೊರಹೊಮ್ಮಿದೆ. ಶಿವಣ್ಣ ಅವರ ಈ ಡಿಫರೆಂಟ್ ಕಾನ್ಸೆಪ್ಟ್ ಸಿನಿಮಾಗೆ ಭರ್ಜರಿಯಾಗಿ ರೆಸ್ಪಾನ್ಸ್ ಕೂಡಾ ಸಿಗುತ್ತಿದೆ. ಇದು ಶಿವರಾಜ್​ಕುಮಾರ್ ಅವರ 125ನೇ ಸಿನಿಮಾ ಆಗಿದ್ದು ಅವರ ಅಭಿಮಾನಿಗಳು (Fans) ಕಾತರದಿಂದ ಕಾಯುತ್ತಿದ್ದರು. ಅಂತೂ ಈಗ ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಜನರು ಗುಂಪಾಗಿ ಥಿಯೇಟರ್​ನತ್ತ (Theater) ಹೆಜ್ಜೆ ಹಾಕಿದ್ದು ಎಲ್ಲರೂ ಈ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಸಿನಿಮಾ ಹಿಟ್ ಆಗುತ್ತಿರುವಾಗ ಸೋಷಿಯಲ್ ಮಿಡಿಯಾ ಮೂಲಕವೂ ಜನರು ಸಿನಿಮಾ ಬಗ್ಗೆ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ. ಸಿನಿಮಾದ ಸಾಂಗ್, ಫೈಟಿಂಗ್​, ಸ್ಟೋರಿ, ಕ್ಲೈಮ್ಯಾಕ್ಸ್, ರೊಮ್ಯಾನ್ಸ್, ಥ್ರಿಲ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನೆಟ್ಟಿಗರ ಮಧ್ಯೆ ನಡೆದ ಸಿನಿಮಾ ಕುರಿತ ಚರ್ಚೆಗಳ ಕೆಲವು ವಿಚಾರಗಳು ಹೀಗಿವೆ.




ಫಸ್ಟ್ ಹಾಫ್ ನೋ ಕಾಮೆಂಟ್ಸ್, ಸೈಕ್ ಆಗಿದೆ ಮೂವಿ


ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿರುವ ನೆಟ್ಟಿಗರು ಮೊದಲ ಅರ್ಧ ಭಾಗ ಸೈಕ್ ಆಗಿದೆ. ಸಿನಿಮಾ ಸೂಪರ್ ಆಗಿದ್ದು ಇದರ ಬಗ್ಗೆ ಎರಡು ಮಾತೇ ಇಲ್ಲ. ಆರಂಭಿಕ ದೃಶ್ಯ, ಕಥೆ ಸಾಗುವ ದಾರಿ ಎಲ್ಲವೂ ಪ್ರೇಕ್ಷಕನನ್ನು ಹಿಡಿದುಕೂರಿಸುತ್ತದೆ. ಕಾಂತಾರ ಸಿನಿಮಾ ನಂತರ ಕನ್ನಡ ಚಿತ್ರರಂಗದಲ್ಲಿ ವೇದ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಡೌಟೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯ.


ಮಾಸ್ ಎಂಟರ್​​ಟೈನರ್


ಇನ್ನೂ ಕೆಲವರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿ ಸಿನಿಮಾ ಅಮೇಜಿಂಗ್ ಆಗಿದೆ. ಗೀತಾ ಪ್ರೊಡಕ್ಷನ್ಸ್ಗೆ ಇದು ಅದ್ಧೂರಿ ಆರಂಭ. ಇದು ಪಕ್ಕಾ ಮಾಸ್ ಎಂಟರ್​ಟೈನರ್ ಸಿನಿಮಾ ಎಂದು ಜನ ಸಿನಿಮಾ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.



ಇದನ್ನೂ ಓದಿ: Vedha Movie: ವೇದ ಸಿನಿಮಾ ರಿಲೀಸ್, ಶಿವಣ್ಣ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳಿವು


ಮೂರು ಹೆಣ್ಮಕ್ಕಳ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ


ಹೆಣ್ಣಿಗೆ ಗಂಡು ಸದಾ ನೆರಳಾಗಿರಬೇಕು. ನೋಡೋ ಕಣ್ಣು, ಆಲೋಚಿಸೋ ಬುದ್ಧಿ ಸ್ವಚ್ಛವಾಗಿರಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಹೆಣ್ಮಕ್ಕಳ ಬೆನ್ನಿಗೆ ನಿಂತಿರೋದು ಸಿನಿಮಾದ ವಿಶೇಷ.


ವೇದ ಸಿನಿಮಾ


ಶಿವಣ್ಣ ಲಾಂಗ್ ಹಿಡಿದ ಮೇಲೆ ಸಿನಿಮಾ ಗೆಲ್ಲಲೇ ಬೇಕು


ಹ್ಯಾಟ್ರಿಕ್ ಹೀರೋ ಲಾಂಗ್ ಹಿಡಿದು ಕಾಣಿಸಕೊಂಡಿರುವುದು ಇದೇ ಮೊದಲೇನಲ್ಲ. ಅವರ ಈ ಹಿಂದಿನ ಇಂಥಹ ಮಾಸ್ ಸಿನಿಮಾಗಳು ಕೂಡಾ ಅಧ್ಬುತ ರೀತಿಯಲ್ಲಿ ಮೆಚ್ಚುಗೆ ಗಳಿಸಿದೆ. ವೇದ ಸಿನಿಮಾ ಕೂಡಾ ಇದಕ್ಕೆ ಹೊರತಲ್ಲ. ಅದಕ್ಕಾಗಿಯೇ ಅಭಿಮಾನಿಗಳು ಸಿನಿಮಾ ಸೂಪರ್ ಹಿಟ್ ಆಗಿದೆ ಎನ್ನುತ್ತಿದ್ದಾರೆ.


ಫೀಮೇಲ್ ಕ್ಯಾರೆಕ್ಟರ್ಸ್ ಬೆಂಕಿ ಗುರೂ


ನಟ ಶಿವರಾಜ್​ಕುಮಾರ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾದ ರೀತಿಯಲ್ಲಿಯೇ ಇಲ್ಲಿ ಕಾಣಿಸಿಕೊಂಡ ಮಹಿಳಾ ಪಾತ್ರಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೆಂಬಲ ವ್ಯಕ್ತವಾಗಿದೆ. ಫೀಮೇಲ್ ಕ್ಯಾರೆಕ್ಟರ್ಸ್ ಏನ್ ಗುರು ಬೆಂಕೀ, ಒಂದೊಂದು ಪಾತ್ರವೂ ಆಸಂ ಆಗಿದೆ. ಮಿಸ್ ಮಾಡಲೇಬೇಡಿ, ಈ ಸಿನಿಮಾ ದೊಡ್ಡ ಸಕ್ಸಸ್ ಆಗೋ ಎಲ್ಲಾ ಕ್ವಾಲಿಟಿಯನ್ನು ಹೊಂದಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು