• Home
  • »
  • News
  • »
  • entertainment
  • »
  • Urfi Javed-Jaya Bachchan: ನೀವು ದೊಡ್ಡೋರು ಎಂದ ಮಾತ್ರಕ್ಕೆ ಜನ ರೆಸ್ಪೆಕ್ಟ್ ಕೊಡಲ್ಲ! ಜಯಾ ಬಚ್ಚನ್​ ಟೀಕಿಸಿದ ಉರ್ಫಿ

Urfi Javed-Jaya Bachchan: ನೀವು ದೊಡ್ಡೋರು ಎಂದ ಮಾತ್ರಕ್ಕೆ ಜನ ರೆಸ್ಪೆಕ್ಟ್ ಕೊಡಲ್ಲ! ಜಯಾ ಬಚ್ಚನ್​ ಟೀಕಿಸಿದ ಉರ್ಫಿ

ಉರ್ಫಿ ಜಾವೇದ್

ಉರ್ಫಿ ಜಾವೇದ್

ಕ್ಯಾಮೆರಾ ಮೆನ್ ಅವರನ್ನು ನೋಡಿ ನೀನು ಎಡವಿ ಬೀಳಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ಜಯಾ ಬಚ್ಚನ್. ಇದಕ್ಕೆ ಉರ್ಫಿ ಹಿರಿಯ ನಟಿಯನ್ನು ಟೀಕಿಸಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಈ ಚಿತ್ರರಂಗದಲ್ಲಿ ಸದಾ ಒಂದಲ್ಲ ಒಂದು ವಿಷಯ ಸುದ್ದಿ ಆಗುತ್ತಲೇ ಇರುತ್ತದೆ. ಒಮ್ಮೆ ಸೆಲೆಬ್ರಿಟಿಗಳು (Celebrity) ತಮ್ಮ ಅಭಿಮಾನಿಗಳೊಂದಿಗೆ ಹೇಗೆ ವರ್ತಿಸಿದರು ಎಂಬ ವಿಷಯ ಸುದ್ದಿಯಾದರೆ ಇನ್ನೊಮ್ಮೆ ಕೆಲ ಸೆಲೆಬ್ರಿಟಿಗಳು ಇತರರನ್ನು ಯಾವ ರೀತಿ ಕಾಣುತ್ತಾರೆ ಎಂಬ ವಿಷಯವೂ ಸುದ್ದಿ ಆಗುತ್ತದೆ. ಸದ್ಯಕ್ಕೆ ಬಾಲಿವುಡ್  (Bollywood) ಅಂಗಳದಿಂದ ಚಿತ್ರರಂಗದ ಹಿರಿಯ ನಟಿ ಹಾಗೂ ಜನಪ್ರಿಯ ತಾರೆ ಅಮಿತಾಭ್ ಬಚ್ಚನ್ ಅವರ ಧರ್ಮಪತ್ನಿ ಜಯಾ ಬಚ್ಚನ್ (Jaya Bachchan) ಅವರ ಕುರಿತಾದ ಒಂದು ಸುದ್ದಿಯು ಚರ್ಚೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಜಯಾ ಅವರು ಕ್ಯಾಮೆರಾ ಮೆನ್ (Cameraman) ಬಗ್ಗೆ ತಾವು ಹೇಳಿದ ಸುದ್ದಿ ಹಾಗೂ ಅದಕ್ಕೆ ಇನ್ನೊಬ್ಬ ನಟಿ ಉರ್ಫಿ ಜಾವೇದ್ (Urfi Javed) ಪ್ರತಿಕ್ರಿಯಿಸಿದ ವಿಡಿಯೋ (Video) ಈಗ ಎಲ್ಲರ ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.


ಆಗಿದ್ದೇನು?


ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಜಯಾ ಬಚ್ಚನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಯಾಮೆರಾ ಪರ್ಸನ್ ಜೊತೆ ಅವರ ಅನುಚಿತವಾದ ವರ್ತನೆ ಸಾಕಷ್ಟು ಸುದ್ದಿಯಾಗಿದ್ದು ಆ ಬಗ್ಗೆ ನಟಿ ಉರ್ಫಿ ಜಾವೇದ್ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಮೂಲಕ ಜಯಾ ಅವರಿಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಬಹುದು. ಕಾರ್ಯಕ್ರಮದಲ್ಲಿ ಜಯಾ ಅವರು ಕ್ಯಾಮೆರಾ ಪರ್ಸನ್ ಅವರನ್ನು ಉದ್ದೇಶಿಸಿ, ನೀನು ಎಡವಿ ಬೀಳಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಉರ್ಫಿ ಪ್ರತಿಕ್ರಿಯೆ


ಈ ಬಗ್ಗೆ ಉರ್ಫಿ ಅವರು ಬೇಸರ ಮಾಡಿಕೊಂಡಿದ್ದು ಜಯಾ ವಿರುದ್ಧ ಹರಿಹಾಯ್ದು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟಿನಲ್ಲಿ, "ಅವರು ಏನು ಹೇಳಿದರು? ನಾನು ನೀವು ಎಡವಿ ಬೀಳಿ ಎಂದರೆ ಹೇಗೆ? ನಾವು ಹಾಗೆ ಹೇಳುವುದು ಬೇಡ, ಬದಲಾಗಿ ಎಲ್ಲರೂ ಏಳೋಣ, ಅವರು ಯಾರೇ ಆಗಿರಲಿ ಕ್ಯಾಮೆರಾ ಹಿಂದಿನ ಅಥವಾ ಮುಂದಿನ ವ್ಯಕ್ತಿಯೇ ಆಗಿರಲಿ. ಜನರು ನೀವು ಹಿರಿಯರಾಗಿದ್ದೀರಿ ಅಥವಾ ಹೆಚ್ಚು ಪ್ರಭಾವಶಾಲಿಯಾಗಿದ್ದೀರಿ ಎಂಬುದನ್ನು ನೋಡಿ ಗೌರವ ಕೊಡೋಲ್ಲ, ಬದಲಿಗೆ ನೀವು ಅವರ ಜೊತೆ ಹೇಗಿರುತ್ತೀರಿ  ಎಂಬುದನ್ನು ಮನಗಂಡು ಗೌರವ ನೀಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

View this post on Instagram


A post shared by Voompla (@voompla)

ಇದನ್ನೂ ಓದಿ: Urfi Javed: ರಣವೀರ್ ಸಿಂಗ್ ಓಕೆ ಅಂದ್ರೆ ನಾನ್​ ರೆಡಿ ಅಂದ ಉರ್ಫಿ ಜಾವೇದ್​, ನಾಚಿ ನೀರಾದ ಫ್ಯಾಷನ್​ ಕ್ವೀನ್!


ಇನ್ನೊಂದು ಪೋಸ್ಟಿನಲ್ಲಿ ಅವರು, "ನನ್ನನ್ನು ನಂಬಿ, ಕೆಲವು ಸಲ ನಾನು ತುಂಬ ಅಭಿಪ್ರಾಯ/ನಿಲುವನ್ನು ವ್ಯಕ್ತಪಡಿಸುತ್ತೇನೆಂದು ಅನಿಸುತ್ತದೆ. ಆದರೆ ಏನು ಮಾಡಲಿ ಕೆಲವೊಮ್ಮೆ ಎಲ್ಲವನ್ನೂ ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ. ಕೆಲವೊಮ್ಮೆ ನಿಮಗೆ ಸರಿ ಬರದ ವಿಷಯದ ಮೇಲೆಯೂ ಮೌನ ವಹಿಸಿದರೆ ಅದು ನೀವು ಎಷ್ಟು ಸ್ವಾರ್ಥಿಗಳಾಗಿದ್ದೀರಿ ಎಂದು ತೋರಿಸುತ್ತದೆ ಎಂದಿದ್ದಾರೆ.
ಇದು ಹೇಗೆ ಅನಿಸುತ್ತದೆ ಅಂದರೆ ನಮ್ಮ ಮನೆಯಲ್ಲಿ ನೀರು, ವಿದ್ಯುತ್ ಬರುತ್ತಿರಬೇಕಾದರೆ ನೆರೆಯವರ ಮನೆಯ ಬಗ್ಗೆ ನಾನೇಕೆ ಮಾತನಾಡಲಿ ಅನ್ನುವಂತಿದೆ. ನನಗೆ ಗೊತ್ತು ಪ್ರತಿಯೊಬ್ಬರೂ ಸಮನಾಗಿ ಇರುವುದಿಲ್ಲ ಅಂತ, ಆದರೆ ಪ್ರತಿಯೊಬ್ಬರಿಗೂ ಬೆಳೆಯುವಂತಹ ಸಮನಾದ ಅವಕಾಶಗಳು ಸಿಗಬಹುದು, ಅದಕ್ಕಾಗಿಯಾದರೂ ನಾವು ಪರರಿಗೋಸ್ಕರ ನಮ್ಮ ಧ್ವನಿಯನ್ನು ಎತ್ತುವಂತಾಗಬೇಕು" ಎಂದು ಬರೆದುಕೊಂಡಿದ್ದಾರೆ.


Actress Kajol see how much she cares about her onscreen mother in law stg asp
ಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಹಾಗೂ ಕಾಜೋಲ್


ಒಟ್ಟಿನಲ್ಲಿ ಹೇಳಬೇಕೆಂದರೆ, ಸಹಜವಾಗಿ ಹಿರಿಯ ತಾರೆಗಳು, ಅಥವಾ ಚಲನಚಿತ್ರ ವ್ಯಕ್ತಿಗಳು ಅಂದಾಗ ಸಾಮಾನ್ಯ ಜನರಿಗೆ ಅವರಲ್ಲಿ ಸಾಕಷ್ಟು ಗೌರವ ಇರುತ್ತದೆ. ಹೀಗಿದ್ದ ಸಂದರ್ಭದಲ್ಲಿ ತಮಗೆ ದೊರಕಿರುವ ಆ ಸ್ಥಾನಮಾನವನ್ನು ಸೆಲಿಬ್ರಿಟಿಗಳು ಬಲು ಎಚ್ಚರಿಕೆಯಿಂದ ನಿರ್ವಹಿಸಬೇಕು. ಅವರು ಆಡುವ ಒಂದೊಂದು ನುಡಿ ಅಥವಾ ಮಾಡುವ ಒಂದೊಂದು ಕಾರ್ಯಗಳೂ ಸಹ ಸಹಸ್ರಾರು ಜನರನ್ನು ಪ್ರಭಾವಿಸುತ್ತವೆ. ಈ ಸಂದರ್ಭದಲ್ಲಿ ಅವರು ತಮ್ಮಿಂದ ಯಾವುದೇ ರೀತಿಯ ಅಸಭ್ಯ ವರ್ತನೆಯಾಗಲಿ ಅಥವಾ ಅನುಚಿತ ನುಡಿಗಳಾಗಲಿ ಸಮಾಜದಲ್ಲಿ ಬರದಂತೆ ನಡೆದುಕೊಳ್ಳಬೇಕಾಗುತ್ತದೆ.


ಇದನ್ನೂ ಓದಿ: Urfi Javed Birthday: ಡ್ರೆಸ್ಸಿಂಗ್ ಸ್ಟೈಲ್​ನಿಂದಲೇ ಮಿಲಿಯನ್​ ಗಟ್ಟಲೆ ಫಾಲೋವರ್ಸ್​ ಪಡೆದ ಉರ್ಫಿ


ಉರ್ಫಿ ಜಾವೇದ್ ಅವರು ಟಲಿವಿಜನ್ ನಟಿಯಾಗಿದ್ದು ಹಲವು ರಿಯಾಲಿಟಿ ಶೋ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅವರು ವಿಶಿಷ್ಟ ಬಗೆಯ ಉಡುಗೆತೊಡುಗೆಗಳಿಗೆ ಸಾಕಷ್ಟು ಹೆಸರುವಾಸಿಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಅವರಿಗೆ ಸಾಕಷ್ಟು ಅನುಯಾಯಿಗಳಿದ್ದು ಅವರ ವಿಶಿಷ್ಟ ಬಗೆಯ ವಸ್ತ್ರ ವಿನ್ಯಾಸಗಳ ಅಭಿಮಾನಿಯಾಗಿದ್ದಾರೆ.

Published by:Divya D
First published: