Bigg Boss: ಹಿಂದಿಯಲ್ಲಿ ಸಲ್ಲು ಪಡೆಯೋದು ಸಾವಿರ ಕೋಟಿ! ಈ ಬಾರಿ ಬಿಗ್​ಬಾಸ್​ಗೆ ಕಿಚ್ಚನ ಸಂಭಾವನೆ ಎಷ್ಟಿರಬಹುದು ಹೇಳಿ?

Kiccha Sudeep: ಮೂಲಗಳ ಪ್ರಕಾರ ಹಿಂದಿಯಲ್ಲಿ ಸಂಭಾವನೆ ಫಿಕ್ಸ್ ಮಾಡುವ ವಿಧ ಭಿನ್ನವಾಗಿರುತ್ತದೆ. ಆದರೆ, ಕನ್ನಡದಲ್ಲಿ ಬೇರೆ ಬೇರೆ ರೀತಿಯ ಲೆಕ್ಕಾಚಾರಗಳನ್ನು ಹಾಕಿ ಸಂಭಾವನೆ ಕೊಡಲಾಗುತ್ತದೆ ಎನ್ನಲಾಗುತ್ತಿದೆ.

ಸುದೀಪ್

ಸುದೀಪ್

  • Share this:
ಬಿಗ್ ಬಾಸ್, (Bigg Boss) ಈ ಶೋ ಅದೆಷ್ಟೇ ವಿವಾದಕ್ಕೆ ಕಾರಣವಾದರೂ ಸಹ ಎಲ್ಲಾ ಭಾಷೆಯಲ್ಲಿ ಜನರಿಗೆ ಬಹಳ ಇಷ್ಟವಾಗಿದೆ. ಈ ಶೋ ಒಂದು ಸೀಸನ್ ಮುಗಿದರೆ ಮತ್ತೊಂದು ಸೀಸನ್​ (season) ಯಾವಾಗ ಎಂದು ಅಭಿಮಾನಿಗಳು (Fans) ಕೇಳುತ್ತಾರೆ. ಅಷ್ಟರ ಮಟ್ಟಿಗೆ ಬಿಗ್​ಬಾಸ್​ ಜನಜನಿತ. ಇದೀಗ ಕನ್ನಡದಲ್ಲಿ (Kannada) ಸಹ ಬಿಗ್​ಬಾಸ್ ಸದ್ಯದಲ್ಲಿಯೇ ಆರಂಭವಾಗಲಿರುವ ಬಗ್ಗೆ ವಾಹಿನಿ ಹಿಂಟ್​ ಕೊಟ್ಟಿದೆ. ಕಿಚ್ಚ ಸುದೀಪ್ (Kiccha Sudeep) ಸಹ ಈಗಾಗಲೇ ಪ್ರೋಮೋ ಶೂಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮದ್ಯೆ  ಅಭಿಮಾನಿಗಳು ಬಿಗ್​ಬಾಸ್​ಗೆ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹಿಂದಿ ಬಿಗ್​ಬಾಸ್​.

ಸಂಭಾವನೆ ಬಗ್ಗೆ ಗುಸು ಗುಸು ಶುರು

ಹೌದು, ಹಿಂದಿಯಲ್ಲಿ ಸಹ ಬಿಗ್​ಬಾಸ್​ 16 ಆರಂಭವಾಗುತ್ತಿದ್ದು,  ಸಲ್ಮಾನ್​ ಖಾನ್​ ಸಂಭಾವನೆ ಬಗ್ಗೆ ಹಲವಾರು ಸುದ್ದಿ ಹರಿದಾಡುತ್ತಿದೆ. ಕಳೆದ ಬಾರಿ ಸಲ್ಮಾನ್​ ಖಾನ್​ 350 ಕೋಟಿ ಸಂಭಾವನೆ ಪಡೆದಿದ್ದರು ಎಂಬ ಮಾತು ಕೇಳಿ ಬಂದಿತ್ತು. ಅಲ್ಲದೇ, ಈ ಬಾರಿ ಅವರು ಓಟಿಟಿ ಹಾಗೂ ಟಿವಿ ಎರಡರಲ್ಲೂ ಬಿಗ್​ಬಾಸ್​ ನಿರೂಪಣೆ ಮಾಡುವುದರಿಂದ ಇನ್ನೂ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಈ ಬಾರಿ ಸಲ್ಲು ಭಾಯ್​ ಸಾವಿರ ಕೋಟಿ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

kiccha sudeep Vikrant Rona movie Hey Fakira Kannada Lyric Video out

ಈ ಸುದ್ದಿ ಹರಿದಾಡುತ್ತಿದ್ದಂತೆ ಕನ್ನಡದಲ್ಲಿ ಕಿಚ್ಚ ಸುದೀಪ್ ಸಂಭಾವನೆಯ ಬಗ್ಗೆ ಹಲವಾರು ಕುತೂಹಲಗಳು ಹುಟ್ಟಿಕೊಂಡಿದೆ. ಅಭಿಮಾನಿಗಳು ಕಿಚ್ಚನ ಸಂಭಾವನೆ ಸಲ್ಮಾನ್​ ಖಾನ್​ ರೇಂಜ್​ಗೆ ಇಲ್ಲದಿದ್ದರು ಸಹ ಅದಕ್ಕೆ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಕಿಚ್ಚ ಕೂಡ ನೂರಾರು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಫಸ್ಟ್ ಟೈಂ ರೀಲ್ಸ್ ಮಾಡಿದ ನಟಿ ಅಮೂಲ್ಯ, ಅಮ್ಮನಾದ ಮೇಲೆ ಹೊಸ ಲುಕ್​ನಲ್ಲಿ ಕಾಣಿಸಿದ ಗೋಲ್ಡನ್​ ಕ್ವೀನ್

ಮೂಲಗಳ ಪ್ರಕಾರ ಹಿಂದಿಯಲ್ಲಿ ಸಂಭಾವನೆ ಫಿಕ್ಸ್ ಮಾಡುವ ವಿಧ ಭಿನ್ನವಾಗಿರುತ್ತದೆ. ಆದರೆ, ಕನ್ನಡದಲ್ಲಿ ಬೇರೆ ಬೇರೆ ರೀತಿಯ ಲೆಕ್ಕಾಚಾರಗಳನ್ನು ಹಾಕಿ ಸಂಭಾವನೆ ಕೊಡಲಾಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ, ಕನ್ನಡದಲ್ಲಿ ಒಂದೇ ಬಾರಿಗೆ ನೂರು ಕೋಟಿ ಕೊಡುವುದಿಲ್ಲ ಎಂಬುದು ಜನರ ಅಂಬೋಣ. ಬಿಗ್ ಬಾಸ್ ಮಾತ್ರವಲ್ಲ, ರಿಯಾಲಿಟಿ ಶೋಗಳನ್ನು ನಡೆಸಿಕೊಡುವ ಎಲ್ಲಾ ಕಲಾವಿದರ ಸಂಭಾವನೆ ಸಹ ನಿಗದಿ ಆಗುವುದು ಬೇರೆ ರೀತಿಯೇ.  ಸದ್ಯಕ್ಕೆ ಕಿಚ್ಚನ ಸಂಭಾವನೆ ಬಗ್ಗೆ ಗುಸು ಗುಸು ಕೇಳಿ ಬರುತ್ತಿದ್ದರೂ ಸಹ ಕಿಚ್ಚ ಅಥವಾ ವಾಹಿನಿ ಈ ಬಗ್ಗೆ ಯಾವುದೇ ಮಾತನಾಡಿಲ್ಲ. ಈ  ವಿಚಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Salman Khan supports kiccha Sudeep Vikrant Rona for Bollywood release

ವಿಕ್ರಾಂತ್ ರೋಣ ಪ್ರಚಾರದಲ್ಲಿ ಫುಲ್ ಬ್ಯುಸಿ

ಇನ್ನು ಸದ್ಯ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.  ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಬ್ರಹ್ಮಾಸ್ತ್ರ ಸಿನಿಮಾದ ಕೇಸರಿಯಾ ಸಾಂಗ್ ರಿಲೀಸ್​, ಮೋಡಿ ಮಾಡಿದ ಆಲಿಯಾ - ರಣಬೀರ್​ ಜೋಡಿ

bigg boss kannada season 9 sudeep BBK 9 promo shooting and audience want commoner to enter house

ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದಲ್ಲದೇ  ಬಿಡುಗಡೆ ಆದ ಸಾಂಗ್​ ನೋಡಿದ ಮೇಲೆ ಪ್ರೇಕ್ಷಕರಲ್ಲಿ ಮತ್ತಷ್ಟು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
Published by:Sandhya M
First published: