ಬಾಲಿವುಡ್ ನ (Bollywood) ನಟಿ ಕಂಗನಾ ರಣಾವತ್ (Actress Kangana Ranaut) ಅವರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ (News) ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಾಗಿ ಅವರು ಅವರ ನೇರವಾದ ಮಾತಿನಿಂದಾಗಿ (Direct speech) ಸುದ್ದಿಯಲ್ಲಿ ಇರುವುದನ್ನು ನಾವೆಲ್ಲಾ ಇತ್ತೀಚಿನ ವರ್ಷಗಳಲ್ಲಿ (most recent year) ನೋಡಿರುತ್ತೇವೆ. ಕೆಲವು ಗಾಸಿಪ್ (Gossip), ವೈಯಕ್ತಿಕ ಜೀವನದ (Personal life) ವಿಚಾರದ ಹೊರತಾಗಿ ಕಂಗನಾ ಸಿನಿಮಾ ರಂಗದಲ್ಲಿ (Cinema Theater) ಸಹ ಹೆಚ್ಚು ಬೇಡಿಕೆಯಲ್ಲಿರುವ ನಟಿ (Actress). ತಮ್ಮ ಮನಮೋಹಕ (Glamorous) ಅಭಿನಯದಿಂದಲೇ ಅಭಿಮಾನಿಗಳ, ಸಿನಿ ರಸಿಕರ ಹೃದಯ (Heart) ಗೆಲ್ಲುತ್ತಿದ್ದಾರೆ. ಕಳೆದ ವರ್ಷ ಕಂಗನಾಗೆ ಭಾರತದ ರಾಷ್ಟ್ರಪತಿಗಳು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು (Padma Shri Award) ನೀಡಿ ಗೌರವಿಸಿದ್ದರು.
'ಟಿಕು ವೆಡ್ಸ್ ಶೆರು'
ಅವರ ಮೊದಲ ನಿರ್ಮಾಣದ 'ಟಿಕು ವೆಡ್ಸ್ ಶೆರು’ ಶೀಘ್ರದಲ್ಲಿಯೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬರಲಿದೆ. ಅಷ್ಟೇ ಅಲ್ಲ, ನಟಿಯು ಧಾಕಡ್ ಮತ್ತು ತೇಜಸ್ ಸೇರಿದಂತೆ ಸರಣಿ ಚಲನಚಿತ್ರಗಳನ್ನು ತಮ್ಮ ಕೈಯಲ್ಲಿ ಹೊಂದಿದ್ದಾರೆ. ಇಷ್ಟೆಲ್ಲಾ ಬ್ಯೂಟಿ, ಟ್ಯಾಲೆಂಟ್ ಇರುವ ಕಂಗನಾ ಯಾಕೆ ಇನ್ನೂ ಮದುವೆ ಆಗಿಲ್ಲ ಅಂತಾ ಇತ್ತೀಚೆಗೆ ಹಲವರು ಗಾಸಿಫ್ ಮಾಡುತ್ತಿದ್ದರು. ಇದಕ್ಕೆ ನೇರವಾಗಿ ಕಂಗನಾ ಉತ್ತರಿಸಿದ್ದಾರೆ. ನನಗೆ ಇದೇ ಕಾರಣಕ್ಕೆ ಮದುವೆ ಆಗುತ್ತಿಲ್ಲಾ ಅಂತಾ ಹೇಳಿದ್ದಾರೆ. ಹಾಗಾದರೆ ಕಂಗನಾ ಹೇಳಿರುವ ಆ ಕಾರಣ ಏನೆಂದು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ನಡೆದ ಒಂದು ಸಂದರ್ಶನದಲ್ಲಿ, ಪ್ರಸ್ತುತ ತನ್ನ ಸ್ಪೈ ಆಕ್ಷನ್-ಥ್ರಿಲ್ಲರ್ ಧಾಕಡ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ನಟಿ ಕಂಗನಾ ಅವರು ಈ ಚಿತ್ರದಲ್ಲಿ ಅವರು ಏಜೆಂಟ್ ಅಗ್ನಿ ಎಂಬ ಸೂಪರ್ ಸ್ಪೈ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: M K Mutt: ಸ್ಯಾಂಡಲ್ವುಡ್ನಲ್ಲಿ ಯಶಸ್ವಿಯಾಗಬೇಕಾ? ಹೀಗೆ ಮಾಡಿ
ವದಂತಿಗಳನ್ನು ಹರಡುತ್ತಿರುವುದರಿಂದಲೇ ಮದುವೆಯಾಗಲು ಸಾಧ್ಯವಾಗುತ್ತಿಲ್ಲ
ನಟಿ ಕಂಗನಾಗೆ ಅವರು ನಿಜ ಜೀವನದಲ್ಲಿ ಹೇಗಿದ್ದಾರೋ, ಧಾಕಡ್ ಚಿತ್ರದಲ್ಲಿ ಇರುವ ಪಾತ್ರವು ಹಾಗೆ ಇದೆಯೇ ಎಂದು ಸಂದರ್ಶಕರು ಕೇಳಿದರು. ಇದಕ್ಕೆ ನಟಿ ನಕ್ಕು ಪ್ರತಿಕ್ರಿಯಿಸಿದರು. "ಅದು ಹಾಗಲ್ಲ, ನಿಜ ಜೀವನದಲ್ಲಿ ನಾನು ಯಾರನ್ನು ಹೊಡೆಯುತ್ತೇನೆ ಹೇಳಿ? ನಿಮ್ಮಂತಹ ಜನರು ಈ ವದಂತಿಗಳನ್ನು ಹರಡುತ್ತಿರುವುದರಿಂದಲೇ ನಾನು ಇನ್ನೂ ಮದುವೆಯಾಗಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.
ಈ ನಟಿ ತುಂಬಾನೇ ನೇರ ನುಡಿ ಮತ್ತು ಕಠಿಣವಾಗಿದ್ದಾಳೆ ಎಂಬ ಗ್ರಹಿಕೆಯಿಂದಾಗಿ ನಿಮಗೆ ಇನ್ನೂ ಮದುವೆಯಾಗಲು ಸಾಧ್ಯವಾಗುತ್ತಿಲ್ಲವೇ ಎಂದು ಸಿದ್ಧಾರ್ಥ್ ನಟಿ ಕಂಗನಾ ಅವರನ್ನು ಕೇಳಿದಾಗ, ನಟಿ ಕಂಗನಾ ಅವರು ತಮಾಷೆಯಾಗಿ "ಹೌದು, ಏಕೆಂದರೆ ನಾನು ಹುಡುಗರನ್ನು ಹೊಡೆಯುತ್ತೇನೆ ಎಂಬ ವದಂತಿಗಳು ಜೋರಾಗಿಯೇ ನನ್ನ ಬಗ್ಗೆ ಹರಡುತ್ತಿವೆ" ಎಂದು ಉತ್ತರಿಸಿದರು.
ಮದುವೆಯ ಬಗ್ಗೆ ಕಂಗನಾ ಹೇಳಿದ್ದೇನು?
ಇದಕ್ಕೂ ಮುನ್ನ ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ನಟಿ ಕಂಗನಾ ಅವರು ಐದು ವರ್ಷಗಳ ನಂತರ, ತಾನು ಮಕ್ಕಳೊಂದಿಗೆ ಆಟವಾಡುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳಿದರು. "ನಾನು ಐದು ವರ್ಷಗಳ ನಂತರ ತಾಯಿಯಾಗಿ ಮತ್ತು ಒಬ್ಬ ಪತ್ನಿಯಾಗಿ ಮತ್ತು ನವ ಭಾರತದ ದೃಷ್ಟಿಕೋನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವ್ಯಕ್ತಿಯಾಗಿ ನೋಡಲು ಬಯಸುತ್ತೇನೆ" ಎಂದು ಅವರು ಹೇಳಿದರು.
‘ಧಾಕಡ್’ ಚಿತ್ರದ ಬಗ್ಗೆ ಕಂಗನಾ ಹೇಳಿದ್ದು ಹೀಗೆ!
ಇನ್ನೂ ಇವರ ಮುಂಬರುವ ‘ಧಾಕಡ್’ ಚಿತ್ರದ ಬಗ್ಗೆ ಮಾತನಾಡಿದ ನಟಿ ಕಂಗನಾ ರಣಾವತ್ ಅವರು "ನಮ್ಮ ಬಾಲಿವುಡ್ ಸಿನೆಮಾಗಳಲ್ಲಿ, ನಿಜವಾದ ಅರ್ಥದಲ್ಲಿ ನಾಯಕಿಯರು ಆಕ್ಷನ್ ದೃಶ್ಯಗಳನ್ನು ಪ್ರದರ್ಶಿಸುವುದು ತುಂಬಾನೇ ವಿರಳವಾಗಿವೆ. ‘ಧಾಕಡ್’ ಚಿತ್ರದಲ್ಲಿ ನನಗೆ ಈ ಪಾತ್ರ ಸಿಕ್ಕಿದ್ದಕ್ಕೆ, ಹಾರ್ಡ್‌ಕೋರ್ ಕಮರ್ಷಿಯಲ್ ಚಿತ್ರದಲ್ಲಿ ಒಬ್ಬ ಮಹಿಳೆಯನ್ನು ಆಕ್ಷನ್ ನಾಯಕಿಯಾಗಿ ದೃಶ್ಯೀಕರಿಸುವ ಧೈರ್ಯವನ್ನು ಯಾರೋ ಮಾಡಿದ್ದನ್ನು ನೋಡಿ ನನಗೆ ಸಂತೋಷವಾಯಿತು. ನಾನು ಧೈರ್ಯವನ್ನು ಪ್ರದರ್ಶಿಸುವ ಮತ್ತು ನನ್ನ ನಟನೆಯ ಕೌಶಲ್ಯಗಳನ್ನು ಇನ್ನಷ್ಟು ತೋರಿಸಿಕೊಳ್ಳುವ ಅವಕಾಶಗಳನ್ನು ಬಿಡುವುದಕ್ಕೆ ಇಷ್ಟ ಪಡುವುದಿಲ್ಲ” ಎಂದು ಹೇಳಿದ್ದಾರೆ.
ಕಂಗನಾ ಬಗ್ಗೆ ನಟ ಅರ್ಜುನ್ ರಾಂಪಾಲ್ ಹೇಳಿದ್ದೇನು ?
ಸಹನಟ ಅರ್ಜುನ್ ರಾಂಪಾಲ್ ಅವರು ಕಂಗನಾ ಅವರ ಬಗ್ಗೆ ಮಾತನಾಡುತ್ತಾ "ಕಂಗನಾ ಒಬ್ಬ ಅಸಾಧಾರಣ ನಟಿ ಎಂದು ನಾನು ಹೇಳಬಲ್ಲೆ. ಅವಳು ಏನೇ ಮಾಡಿದರೂ ಅದು ಪಾತ್ರಕ್ಕಾಗಿ, ಆದರೆ ಅವಳು ನಿಜ ಜೀವನದಲ್ಲಿ ಹಾಗಲ್ಲ. ನಿಜ ಜೀವನದಲ್ಲಿ, ಅವಳು ತುಂಬಾ ಪ್ರೀತಿಪಾತ್ರಳು ಮತ್ತು ತುಂಬಾ ದೈವಭಕ್ತಿಯುಳ್ಳವಳು" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ