Director No More: ಸಿನಿಮಾರಂಗಕ್ಕೆ ಮತ್ತೊಂದು ಆಘಾತ, ಹಾರ್ಟ್‌ ಅಟ್ಯಾಕ್‌ಗೆ ಬಲಿಯಾದ ಪ್ರತಿಭಾವಂತ ನಿರ್ದೇಶಕ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿ ನಾಗರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 45 ವರ್ಷದ ಅವರು ಕೆಲ ಸಿನಿಮಾಗಳನ್ನಷ್ಟೇ ನಿರ್ದೇಶಿಸಿದ್ದರು. ಆದರೆ ಆ ಚಿತ್ರಗಳ ಮೂಲಕವೇ ತಮಿಳುನಾಡಿನ ಜನಪ್ರಿಯ ನಿರ್ದೇಶಕರ ಸಾಲಿನಲ್ಲಿ ಸೇರಿದ್ದರು.

ನಿರ್ದೇಶಕ ಮಣಿ ನಾಗರಾಜ್

ನಿರ್ದೇಶಕ ಮಣಿ ನಾಗರಾಜ್

  • Share this:
ಚೆನ್ನೆ: ಭಾರತೀಯ ಚಿತ್ರರಂಗಕ್ಕೆ (Indian Film Industry) ಮತ್ತೊಂದು ಆಘಾತ (Shock) ಎದುರಾಗಿದೆ. ಕೊರೋನ (Corona) ಬಂದ ಬಳಿಕ ಚಿತ್ರರಂಗದ ಅನೇಕಾನೇಕ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ತಂತ್ರಜ್ಞರ ಅಕಾಲಿಕವಾಗಿ ನಿಧನರಾಗಿದ್ದಾರೆ. ಇದೀಗ ಆ ಸಾವಿನ ಸರಣಿ (Death Series) ಮತ್ತೆ ಮುಂದುವರೆದಿದೆ. ತಮಿಳು ಚಿತ್ರರಂಗದ (Tamil Film Industry) ಪ್ರತಿಭಾವಂತ ನಿರ್ದೇಶಕ (Director), ಪೆನ್ಸಿಲ್ ಸಿನಿಮಾ (Pencil Movie) ಖ್ಯಾತಿಯ ಮಣಿ ನಾಗರಾಜ್ (Mani Nagaraj) ಹೃದಯಾಘಾತಕ್ಕೆ (Heart Attack) ಬಲಿಯಾಗಿದ್ದಾರೆ. ಹೃದಯಘಾತ ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಿ, ಚಿಕಿತ್ಸೆ (Treatment) ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಣಿ ನಾಗರಾಜ್ ವಿಧಿವಶರಾಗಿದ್ದಾರೆ ಅಂತ ವೈದ್ಯರು (Doctor) ಘೋಷಿಸಿದ್ದಾರೆ.

ಹೃದಯಾಘಾತದಿಂದ ನಿರ್ದೇಶಕ ಮಣಿ ನಾಗರಾಜ್ ನಿಧನ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿ ನಾಗರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 45 ವರ್ಷದ ಅವರು ಕೆಲ ಸಿನಿಮಾಗಳನ್ನಷ್ಟೇ ನಿರ್ದೇಶಿಸಿದ್ದರು. ಆದರೆ ಆ ಚಿತ್ರಗಳ ಮೂಲಕವೇ ತಮಿಳುನಾಡಿನ ಜನಪ್ರಿಯ ನಿರ್ದೇಶಕರ ಸಾಲಿನಲ್ಲಿ ಸೇರಿದ್ದರು. ಇದೀಗ ಅಕಾಲಿಕವಾಗಿ ಹೃದಯಾಘಾತಕ್ಕೆ ಮಣಿ ನಾಗರಾಜ್ ಬಲಿಯಾಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ದ ಮಣಿ ನಾಗರಾಜ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಪೆನ್ಸಿಲ್ ಸಿನಿಮಾ


ಮಣಿ ನಾಗರಾಜ್ ನಿಧನಕ್ಕೆ ಗಣ್ಯರ ಕಂಬನಿ

46 ವರ್ಷದ ಮಣಿ ನಾಗರಾಜ್ ಅವರು ತಿರುಚ್ಚಿ ಮೂಲದವರು ಎಂದು ತಿಳಿದುಬಂದಿದೆ. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ನಾಗರಾಜ್ ಅವರ ನಿಧನದ ಕುರಿತು ನಟ ಕಯಲ್ ದೇವರಾಜ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ: Raju Returns: 15 ದಿನಗಳ ನಂತರ ಪ್ರಜ್ಞೆ ಮರಳಿ ಪಡೆದ ಹಾಸ್ಯನಟ ರಾಜು ಶ್ರೀವಾಸ್ತವ್

ಟ್ವಿಟರ್‌ನಲ್ಲಿ ಗಣ್ಯರಿಂದ ಸಂತಾಪ

ನಮ್ಮ ನಿರ್ದೇಶಕ ಮಣಿ ನಾಗರಾಜ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು ಎಂದು ನಿಮಗೆ ತಿಳಿಸಲು ವಿಷಾದಿಸುತ್ತೇವೆ. ಅವರ ಆತ್ಮಕೆ ಶಾಂತಿ ಸಿಗಲಿ. ದುಃಖತಪ್ತ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ನಮ್ಮ ಸಾಂತ್ವನಗಳು. ಮಿಸ್ ಯೂ  ಅಂತ ಕುರಿತು ನಟ ಕಯಲ್ ದೇವರಾಜ್ ಟ್ವೀಟ್‌ ಮಾಡಿದ್ದಾರೆ.

'ವಾಸುಸ್ ಪ್ರೆಗ್ನೆಂಟಲ್' ಸಿನಿಮಾ


ಗೌತಮ್ ವಾಸುದೇವನ್ ಮೆನನ್ ಗರಡಿಯಲ್ಲಿ ತರಬೇತಿ

ನಿರ್ದೇಶಕ ಮಣಿ ನಾಗರಾಜ್ ತಮಿಳು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಅಂತ ಹೆಸರು ಪಡೆದಿದ್ದರು. 2016ರಲ್ಲಿ ತೆರೆಗೆ ಬಂದ ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಕ್ಕೆ ಇವರೇ ನಿರ್ದೇಶನ ಮಾಡಿದ್ದರು. ಖ್ಯಾತ ನಿರ್ದೇಶಕ ಗೌತಮ್ ವಾಸುದೇವನ್ ಮೆನನ್ ಅವರ ಗರಡಿಯಲ್ಲಿ ಪಳಗಿದ್ದ ಮಣಿ, ಬಳಿಕ ತಮಿಳು ಚಿತ್ರರಂಗದಲ್ಲಿ ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಂಡಿದ್ರು. ಮಣಿ ಅವರು ತಮಿಳುನಾಡಿನ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದಿದ್ದರು ಮತ್ತು ನಿರ್ದೇಶಕ ಗೌತಮ್ ವಾಸುದೇವ್ ಮೆನನ್‌ಗೆ 'ಕಾಖ ಕಾಖಾ' (2003) ನಿಂದ 'ವಿನೈತಾಂಡಿ ವರುವಾಯಾ' (2010) ವರೆಗೆ ಸಹಾಯ ಮಾಡಿದ್ದರು.

ಪೆನ್ಸಿಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ನಿರ್ದೇಶಕ

2016 ರಲ್ಲಿ ಮಣಿ ನಾಗರಾಜ್ ಅವರು ಸಂಗೀತ ಸಂಯೋಜಕ ಜಿವಿ ಪ್ರಕಾಶ್ ಅಭಿನಯದ ಕಾಲಿವುಡ್ ಸಿನಿಮಾ ಪೆನ್ಸಿಲ್‌ಗೆ ಆ್ಯಕ್ಷನ್ ಕಟ್ ಹೇಳಿದ್ದರು. 2016ರಲ್ಲಿ ಪೆನ್ಸಿಲ್ ಸಿನಿಮಾ ನಿರ್ದೇಶಿಸಿ, ಹೆಸರು ಪಡೆದಿದ್ದರು.

ಇದನ್ನೂ ಓದಿ: KGF 2 Actor: ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ರಾಕಿಭಾಯ್ ಪ್ರೀತಿಯ ಚಾಚಾ! ಹರೀಶ್ ರೈ ಆರೋಗ್ಯ ಹೇಗಿದೆ?

ಚಿತ್ರ ಬಿಡುಗಡೆಗೆ ಸಿದ್ದವಿರುವಾಗಲೇ ನಿಧನ

ಇನ್ನು ಮಣಿ ನಾಗರಾಜ್ ಅವರು ಗೋಪಿನಾಥ್, ಅನಿಕಾ ಸುರೇಂದ್ರ, ವನಿತಾ ವಿಜಯ್ಕುಮಾರ್, ಲೀನಾ ಕುಮಾರ್ ಮತ್ತು ಸೀತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ 'ವಾಸುಸ್ ಪ್ರೆಗ್ನೆಂಟಲ್' ಚಿತ್ರವನ್ನು ನಿರ್ದೇಶಿಸಿದ್ದರು. ಕಳೆದ ಜುಲೈ 7 ರಂದು ನಟ ವಿಜಯ್ ಆಂಟೋನಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಚಿತ್ರ ಬಿಡುಗಡೆಗೆ ಸಿದ್ಧವಾಗಿರುವಾಗಲೇ ಇಂದು ಮಧ್ಯಾಹ್ನ ಅವರಿಗೆ ಹೃದಯಾಘಾತವಾಗಿ, ಮಣಿ ನಾಗರಾಜ್ ಪ್ರಯಾಣ ಮುಗಿಸಿದ್ದಾರೆ.
Published by:Annappa Achari
First published: