HOME » NEWS » Entertainment » PAYAL ROHTAGI SAYS SANJAY GUPTA FIRED SAMEERA REDDY FROM HIS CAR HG

ಕಿಚ್ಚನ ನಾಯಕಿಯನ್ನು ಕಾರಿನಿಂದ ಹೊರದಬ್ಬಿದ್ರಾ ಆ ನಿರ್ದೇಶಕ?

ಸ್ಯಾಂಡಲ್​​ವುಡ್​ನಲ್ಲಿ ಬ್ಯೂಟಿ ಸಮೀರಾ ರೆಡ್ಡಿಯ ಕೊನೆಯ ಸಿನಿಮಾ ವರದನಾಯಕ. 2013ರ ಬಳಿಕ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. 2014ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಆರಾಮಾಗಿ ಸೆಟಲ್ ಆಗಿದ್ದಾರೆ. ಆದರೆ ಹಿಂದೆ ನಡೆದಿತ್ತು ಎನ್ನಲಾದ ಘಟನೆಯೊಂದು ಈಗ ಮತ್ತೆ ಕಾಡಲಾರಂಭಿಸಿದೆ.

news18-kannada
Updated:May 30, 2020, 1:38 PM IST
ಕಿಚ್ಚನ ನಾಯಕಿಯನ್ನು ಕಾರಿನಿಂದ ಹೊರದಬ್ಬಿದ್ರಾ ಆ ನಿರ್ದೇಶಕ?
ಪಾಯಲ್ ರೋಹಾಟ್ಗಿ
  • Share this:
ಬಾದ್​ ​ಷಾ ಕಿಚ್ಚ ಸುದೀಪ್​​ಗೆ ನಾಯಕಿಯಾಗಿ 2013ರ ವರದನಾಯಕ ಚಿತ್ರದಲ್ಲಿ ನಟಿಸಿದ್ದ ಸಮೀರಾ ರೆಡ್ಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಹಳೆಯ ಲವ್​ಸ್ಟೋರಿಯ ಬಗ್ಗೆ ಮತ್ತೊಬ್ಬ ನಟಿ ತುಟಿ ಬಿಚ್ಚಿರೋದು. ಹೌದು, ಸದ್ಯ ಪಾಯಲ್ ರೋಹಾಟ್ಗಿಯ ಒಂದು ಟ್ವೀಟ್ ಬಾಲಿವುಡ್​​ನಲ್ಲಿ ಬಿರುಗಾಳಿಗೆ ಕಾರಣವಾಗಿದೆ.

ಸ್ಯಾಂಡಲ್​​ವುಡ್​ನಲ್ಲಿ ಬ್ಯೂಟಿ ಸಮೀರಾ ರೆಡ್ಡಿಯ ಕೊನೆಯ ಸಿನಿಮಾ ವರದನಾಯಕ. 2013ರ ಬಳಿಕ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. 2014ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಆರಾಮಾಗಿ ಸೆಟಲ್ ಆಗಿದ್ದಾರೆ. ಆದರೆ ಹಿಂದೆ ನಡೆದಿತ್ತು ಎನ್ನಲಾದ ಘಟನೆಯೊಂದು ಈಗ ಮತ್ತೆ ಕಾಡಲಾರಂಭಿಸಿದೆ.

ಶೂಟೌಟ್ ಅಟ್ ಲೋಖಂಡ್ವಾಲಾ, ಶೂಟೌಟ್ ಅಟ್ ವಡಾಲಾ ಖ್ಯಾತಿಯ ನಿರ್ದೇಶಕ ಸಂಜಯ್ ಗುಪ್ತಾ ಅವರು ಸಿನಿಮಾಗಳಿಂದ ಮಾತ್ರವಲ್ಲ, ಬಿಟೌನ್ ನಟಿಮಣಿಯರ ಜತೆಗಿನ ಲಿಪ್​​ಲಾಕ್​​ಗಳಿಂದಲೂ ಸಾಕಷ್ಟು ಸುದ್ದಿ ಮಾಡಿದ್ದಾರೆ. ಸಂಜಯ್ ಗುಪ್ತಾ ನಿರ್ದೇಶನದ ಮುಸಾಫಿರ್ ಹಾಗೂ ಪ್ಲಾನ್ ಚಿತ್ರಗಳಲ್ಲಿ ನಟಿಸಿದ್ದ ಸಮೀರಾ ರೆಡ್ಡಿ ಹೆಸರು ಕೂಡ ಅವರ ಮಾಜಿ ಪ್ರಿಯತಮೆ ಎಂಬ ಸುದ್ದಿ ಹಲವು ವರ್ಷಗಳ ಹಿಂದೆಯೇ ಹರಿದಾಡಿತ್ತು. ಸುಮಾರು ಮೂರು ವರ್ಷಗಳ ಕಾಲ ಇವರಿಬ್ಬರೂ ಜೊತೆಗಿದ್ದರು ಎನ್ನಲಾಗಿದೆ. ಹಾಗಂತ ಖುದ್ದು ಸಂಜಯ್ ಕೂಡ ಹೇಳಿಕೊಂಡಿದ್ದಾರಾದರೂ, ಸಮೀರಾ ರೆಡ್ಡಿ ನಾವು ಫ್ರೆಂಡ್ಸ್ ಅಷ್ಟೇ ಅಂತ ತಳ್ಳಿಹಾಕಿದ್ದರು.

ಸಂಜಯ್ ಹಾಗೂ ಸಮೀರಾ ನಡುವಿನ ಬ್ರೇಕಪ್​​​ಗೆ ಕಾರಣವನ್ನು ನಟಿ ಪಾಯಲ್ ರೋಹಾಟ್ಗಿ ಈಗ ಹೊರಹಾಕಿದ್ದಾರೆ. ನಾನೂ ಪ್ಲಾನ್ ಎಂಬ ಚಿತ್ರದಲ್ಲಿ ಈತನೊಂದಿಗೆ ಕೆಲಸ ಮಾಡಿದ್ದೆ. ಆಗ ಸಂಜಯ್ ಗುಪ್ತಾ ಹಾಗೂ ಸಮೀರಾ ಡೇಟಿಂಗ್ ಮಾಡುತ್ತಿದ್ದರು. ಒಮ್ಮೆ ಕಾರಿನಲ್ಲಿ ಪ್ರಯಾಣಿಸುವಾಗ, ಜಗಳವಾಡಿಕೊಂಡು, ಚಲಿಸುತ್ತಿದ್ದ ಕಾರಿನಿಂದಲೇ ಸಂಜಯ್, ಸಮೀರಾಳನ್ನು ಹೊರದಬ್ಬಿದ್ದ ಅನ್ನೋ ವಿಷಯ ಕೇಳಿದ್ದೆ ಎಂದು ಟ್ವೀಟಿಸಿದ್ದಾರೆ ಪಾಯಲ್.

ಸದ್ಯ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಬಾಲಿವುಡ್ ಸಿನಿಪ್ರಿಯರು ಸಂಜಯ್ ಗುಪ್ತಾ ಮೇಲೆ ಕಿಡಿಕಾರುತ್ತಿದ್ದಾರೆ. ಆದರೆ ಈ ಬಗ್ಗೆ ಸಂಜಯ್ ಗುಪ್ತಾ ಆಗಲಿ ಅಥವಾ ಸಮೀರಾ ರೆಡ್ಡಿ ಆಗಲಿ ತುಟಿ ಪಿಟಕ್ ಅಂದಿಲ್ಲ. ಒಟ್ಟಾರೆ ಲಾಕ್​ಡೌನ್ ಸಮಯದಲ್ಲಿ ತಾರೆಯರ ಹಳೆಯ ವಿವಾದಗಳು ಮತ್ತೊಮ್ಮೆ, ಮಗದೊಮ್ಮೆ ಸದ್ದು ಮಾಡುತ್ತಿವೆ.

Facebook – ಟಿಕ್​​ಟಾಕ್​ ಪ್ರೇರಣೆಯಲ್ಲಿ ಫೇಸ್​ಬುಕ್​ನಿಂದ​ ಹೊಸ ವಿಡಿಯೋ ಶೇರಿಂಗ್​ ಆ್ಯಪ್​!
Published by: Harshith AS
First published: May 30, 2020, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories