HOME » NEWS » Entertainment » PAYAL GHOSH FILES A COMPLAINT AGAINST ANURAG KASHYAP AT VERSOVA POLICE STATION IN MUMBAI AE

Anurag Kashyap: ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರದ ಆರೋಪ​: ನಾನವನಲ್ಲ ಅಂದ್ರು ಅನುರಾಗ್ ಕಶ್ಯಪ್!

ಮತ್ತೊಂದೆಡೆ ಅನುರಾಗ್ ಕಶ್ಯಪ್ ಸರಣಿ ಟ್ವೀಟ್​ಗಳ ಮೂಲಕ ಇದೆಲ್ಲ ಸುಳ್ಳು. ಸುಮ್ಮನೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದು, ತಮ್ಮ ವಕೀಲರ ಮೂಲಕ, ಮೀಟೂ ಚಳವಳಿಯನ್ನು ದುರುಪಯೋಗಪಡಿಸಿಕೊಂಡು ತನ್ನನ್ನು ಹಣಿಯಲು ಹುನ್ನಾರ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

news18-kannada
Updated:September 23, 2020, 4:43 PM IST
Anurag Kashyap: ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರದ ಆರೋಪ​: ನಾನವನಲ್ಲ ಅಂದ್ರು ಅನುರಾಗ್ ಕಶ್ಯಪ್!
ಅನುರಾಗ್​ ಕಶ್ಯಪ್​
  • Share this:
ಕಳೆದ ಕೆಲ ವರ್ಷಗಳಿಂದ ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಿದ್ದ ಮೀಟೂ ವಿವಾದ ಈಗ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್. ಹೌದು, ಮುಂಬೈನಲ್ಲಿ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. 2013ರಲ್ಲಿ ನಡೆದಿತ್ತು ಎನ್ನಲಾದ ಘಟನೆಯ ಕುರಿತಾಗಿ ಕೆಲ ದಿನಗಳ ಹಿಂದಷ್ಟೇ ನಟಿಯೊಬ್ಬರು ಟ್ವೀಟ್​ ಮಾಡಿದ್ದರು. ಅದನ್ನು ಪಿಎಂಒಗೂ ಟ್ಯಾಗ್ ಮಾಡಿದ್ದರು. ಸಿನಿಮಾ ಬಗ್ಗೆ ಮಾತನಾಡಬೇಕು ಅಂತ ಆಡಿಷನ್​ಗೆ ಕರೆದು, ಅತ್ಯಾಚಾರ ಎಸಗಿದ್ದರು ಎಂದು ಆ ನಟಿ ದೂರಿದ್ದರು. ನಿನ್ನೆ ತಡರಾತ್ರಿ ಆ ನಟಿ ತಮ್ಮ ವಕೀಲರ ಸಹಾಯದಿಂದ  ಮುಂಬೈನ ವರ್ಸೋವ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಸದ್ಯ ವರ್ಸೋವ ಪೊಲೀಸರು ದೂರು ನೀಡಿರುವ ನಟಿಯ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದು, ನಿರ್ದೇಶಕ ಅನುರಾಗ್ ಕಶ್ಯಪ್​ ಅವನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತೊಂದೆಡೆ ಅನುರಾಗ್ ಕಶ್ಯಪ್ ಸರಣಿ ಟ್ವೀಟ್​ಗಳ ಮೂಲಕ ಇದೆಲ್ಲ ಸುಳ್ಳು. ಸುಮ್ಮನೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದು, ತಮ್ಮ ವಕೀಲರ ಮೂಲಕ, ಮೀಟೂ ಚಳವಳಿಯನ್ನು ದುರುಪಯೋಗಪಡಿಸಿಕೊಂಡು ತನ್ನನ್ನು ಹಣಿಯಲು ಹುನ್ನಾರ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Kalki Koechlin Embraces Motherhood with a Portuguese Lullaby for Her Baby Girl
ಮಗಳೊಂದಿಗೆ ಕಲ್ಕಿ ಕೊಚ್ಲಿನ್


ಇನ್ನು, ಅನುರಾಗ್ ಕಶ್ಯಪ್ರ ಮಾಜಿ ಪತ್ನಿಯರಾದ ಕಲ್ಕಿ ಕೊಚ್ಲಿನ್, ಆರತಿ ಬಜಾಜ್ ಕೂಡ ತಮ್ಮ ಮಾಜಿ ಪತಿಯ ಪರವಾಗಿ ನಿಂತಿದ್ದಾರೆ. ಹಾಗೇ ಅವರ ಜೊತೆ ಈ ಹಿಂದೆ ಸಿನಿಮಾಗಳಲ್ಲಿ ಕೆಲಸ ಮಾಡಿರುವ ತಾಪ್ಸಿ ಪನ್ನು, ರಿಚಾ ಛಡ್ಡಾ, ಹುಮಾ ಖುರೇಷಿ ಕೂಡ ಅನುರಾಗ್ ಪರ ನಿಂತಿದ್ದಾರೆ. ನಮ್ಮೊಂದಿಗೆ ಎಂದೂ ಅನುರಾಗ್ ಅನುಚಿತವಾಗಿ ವರ್ತಿಸಿಲ್ಲ ಎಂದು ಆರೋಪವನ್ನು ಅಲ್ಲಗಳೆದಿದ್ದಾರೆ.


ಮತ್ತೊಂದೆಡೆ ನಟಿ ಕಂಗನಾ ರನೌತ್​ ಸೇರಿದಂತೆ ಇನ್ನೂ ಹಲವಾರು ಮಂದಿ ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು, ಆರೋಪ ನಿಜವಾದರೆ ಅನುರಾಗ್ ಕಶ್ಯಪ್​ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.

Bullywood is full of sexual predators who have fake and dummy marriages they expect a new hot young girl to make them happy everyday, they do the same to young vulnerable men also,I have settled my scores my way I don’t need #MeToo but most girls do #PayalGhosh #AnuragKashyapಈಗಾಗಲೇ ಕೊರೋನಾ ಹಾಗೂ ಲಾಕ್​ಡೌನ್​ನಿಂದಾಗಿ ಪೆಟ್ಟು ತಿಂದಿರುವ ಹಿಂದಿ ಚಿತ್ರರಂಗಕ್ಕೆ ಸಾಲು ಸಾಲು ವಿವಾದಗಳೂ ಸುತ್ತಿಕೊಂಡಿವೆ. ನಟ ಸುಶಾಂತ್ ಸಿಂಗ್ ರಜಪೂತ್​ ಹಾಗೂ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣಗಳ ತನಿಖೆ ಒಂದೆಡೆಯಾದರೆ, ಡ್ರಗ್ಸ್ ಜಾಲ ಮತ್ತೊಂದೆಡೆ. ಅದರ ನಡುವೆಯೇ ಈಗ ಮೀಟೂ ವಿವಾದ ಭುಗಿಲೆದ್ದಿರುವುದು ಬಾಲಿವುಡ್ ಮಂದಿಗೆ ಮತ್ತಷ್ಟು ತಲೆಬಿಸಿಯಾಗಿದೆ.
Published by: Anitha E
First published: September 23, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories