Raymo Movie: ಪವನ್​ ಒಡೆಯರ್​ ನಿರ್ದೇಶನದ ಹೊಸ ಸಿನಿಮಾದ ಟೈಟಲ್​ ಫಿಕ್ಸ್​..!

ಪವನ್ ಒಡೆಯರ್ ಅವರ ಹೊಸ ಚಿತ್ರದ ಟೈಟಲ್ ರಿವೀಲ್ ಆಗಿದೆ. ಸಿನಿಮಾಗೆ ರೆಮೋ ಎಂದು ಹೆಸರಿಡಲಾಗಿದೆ. ಸ್ಟೈಲಿಷ್ ಟೈಟಲ್ ಅನ್ನಿಸಿದರೂ, ಇಲ್ಲಿ ನಿಜವಾದ ರೇಮೊ ಬೇರೆಯವರೇ ಇದ್ದಾರೆ.

Anitha E | news18
Updated:June 27, 2019, 6:18 PM IST
Raymo Movie: ಪವನ್​ ಒಡೆಯರ್​ ನಿರ್ದೇಶನದ ಹೊಸ ಸಿನಿಮಾದ ಟೈಟಲ್​ ಫಿಕ್ಸ್​..!
ಪವನ್​ ಒಡೆಯರ್​ ಸಿನಿಮಾಗೆ ಟೈಟಲ್​ ಫಿಕ್ಸ್​
Anitha E | news18
Updated: June 27, 2019, 6:18 PM IST
'ನಟಸಾರ್ವಭೌಮ' ಚಿತ್ರದ ನಂತರ ಪವನ್ ಒಡೆಯರ್ ಹೊಸದೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಅನ್ನೋ ವಿಷಯ ತಿಳಿದಿತ್ತು. ಇನ್ನೂ ಹೆಸರಿಡದ ಚಿತ್ರಕ್ಕೆ ಇಶಾನ್ ನಾಯಕ ಅನ್ನೋದು ಖಚಿತವಾಗಿತ್ತು. ಆದರೆ ಚಿತ್ರದ ಟೈಟಲ್ ಏನು ಎಂದು ಬಹಿರಂಗವಾಗಿರಲಿಲ್ಲ.

ಆದರೆ ಈಗ ಪವನ್ ಒಡೆಯರ್ ಅವರ ಮುಂದಿನ ಚಿತ್ರದ ಟೈಟಲ್ ರಿವೀಲ್ ಆಗಿದೆ. ಸಿನಿಮಾಗೆ 'ರೆಮೋ' ಎಂದು ಹೆಸರಿಡಲಾಗಿದೆ. ಸ್ಟೈಲಿಷ್ ಟೈಟಲ್ ಅನ್ನಿಸಿದರೂ, ಇಲ್ಲಿ ನಿಜವಾದ ರೆಮೋ ಅಂದ್ರೆ ರೇವಂತ್ ಅನ್ನೋ ಹುಡುಗ ಮತ್ತು ಮೋಹನಾ ಅನ್ನೋ ಹುಡುಗಿಯ ಲವ್‍ಸ್ಟೋರಿ ಇರಲಿದೆಯಂತೆ.

Raymo Kannada Movie
ಪವನ್​ ಒಡೆಯರ್​ ಸಿನಿಮಾದ ಟೈಟಲ್​ ಪೋಸ್ಟರ್​


'ರೋಗ್​' ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ನಿರ್ಮಾಪಕ ಸಿ ಆರ್ ಮನೋಹರ್ ಅವರ ಸಹೋದರ ಇಶಾನ್ ಎರಡನೇ ಚಿತ್ರ ಕೂಡ ಅದ್ಧೂರಿಯಾಗಿರಲಿದೆ. ದಿ ವಿಲನ್ ಖ್ಯಾತಿಯ ನಿರ್ಮಾಪಕರಾದ ಡಾ. ಸಿ ಆರ್ ಮನೋಹರ್ ನಿರ್ಮಾಣದಲ್ಲಿ, ಪವನ್ ಒಡೆಯರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನೀಡಲಿದ್ದಾರೆ. ಇಶಾನ್​ಗೆ ನಾಯಕಿಯಾಗಿ ಅಶಿಕಾ ರಂಗನಾಥ್​ ಕಾಣಿಸಿಕೊಳ್ಳಲಿದ್ದಾರೆ.

Raymo movie muhurtha
ನಿರ್ಮಾಪಕ ಮನೋಹರ್ ಹಾಗೂ ನಿರ್ದೇಶಕ ಪವನ್​ ಒಡೆಯರ್​


 

Priyanka-Nick: ಪ್ಯಾರಿಸ್​ನಲ್ಲಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ ಪ್ರಿಯಾಂಕಾ-ನಿಕ್​..!
Loading...

First published:June 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...