Gaalipata 2: ಅಖಂಡ ಬ್ರಹ್ಮಾಚಾರಿ ಆದ ಪವನ್ ಕುಮಾರ್​, ಗಾಳಿಪಟ 2 ಚಿತ್ರದ ಟೀಸರ್​ ರಿಲೀಸ್​

ಈಗಾಗಲೇ ಬಿಡುಗಡೆ ಆಗಿರುವ ಪವನ್ ಅವರ ಕ್ಯಾರೆಕ್ಟರ್​ ಇಂಟರ್ಡಕ್ಷನ್ ಟೀಸರ್​ ಸಖತ್ ಮಜವಾಗಿದೆ. ಕಾಲೇಜಿನ ಅಖಂಡ ಬ್ರಹ್ಮಾಚಾರಿ ಆದ್ರು ಉದಯೋನ್ಮುಖ ಪ್ರೇಮ ಕಥೆಯನ್ನು ಭಟ್ಟರು ಇಲ್ಲಿ ಹೇಳಹೊರಟಿದ್ದಾರೆ.

ಗಾಳಿಪಟ 2

ಗಾಳಿಪಟ 2

  • Share this:
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ (Director Yograj Bhat) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಗಾಳಿಪಟ-2' (Gaalipata 2) ಚಿತ್ರದ 2 ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಹಿಟ್​ ಆಗಿವೆ. ಇದರ ಭಾಗವಾಗಿ ಇದೀಗ ಚಿತ್ರತಂಡ ಪ್ರತಿಯೊಂದು ಕ್ಯಾರೆಕ್ಟರ್​ ಇಂಟರ್ಡಕ್ಷನ್ ಟೀಸರ್​ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಗಣೇಶ್​ ಮತ್ತು ನಟ ದಿಗಂತ್​ ಅವರ ಟೀಸರ್​ ಬಿಡುಗಡೆ ಆಗಿದೆ. ಇದೀಗ ಪವನ್ ಕುಮಾರ್ (Pawan kumar)​ ಅವರ ಟೀಸರ್​ ಬಿಡುಗಡೆ ಆಗಿದ್ದು, ಸಖತ್ ಮಜವಾಗಿದೆ. ಅಲ್ಲದೇ ಚಿತ್ರದ ಟೀಸರ್​ ಇದೇ ತಿಂಗಳ 31ರಂದು ಬಿಡುಗಡೆ ಆಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ. ಇನ್ನು, ನಿರ್ದೇಶಕ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ.

ಅಖಂಡ ಬ್ರಹ್ಮಾಚಾರಿ ಆದ್ರು ಉದಯೋನ್ಮುಖ ಪ್ರೇಮಿ:

ಇನ್ನು, ನಿರ್ದೇಶಕ ಪವನ್ ಕುಮಾರ್​ ಗಾಳಿಪಟ 2 ಚಿತ್ರದಲ್ಲಿ ನಿರ್ದೇಶಕ, ನಟ ಪವನ್ ಕುಮಾರ್​ ಸಹ ನಟಿಸಿದ್ದಾರೆ. ಈ ತ್ರಿಮೂರ್ತಿಗಳ ಕಾಮಿಡಿಗಾಗಿ ಪ್ರೇಕ್ಷಕರು ಸಖತ್ ವೇಟ್​ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪವನ್ ಅವರ ಕ್ಯಾರೆಕ್ಟರ್​ ಇಂಟರ್ಡಕ್ಷನ್ ಟೀಸರ್​ ಸಖತ್ ಮಜವಾಗಿದೆ. ಕಾಲೇಜಿನ ಅಖಂಡ ಬ್ರಹ್ಮಾಚಾರಿ ಆದ್ರು ಉದಯೋನ್ಮುಖ ಪ್ರೇಮ ಕಥೆಯನ್ನು ಭಟ್ಟರು ಇಲ್ಲಿ ಹೇಳಹೊರಟಿದ್ದಾರೆ. ಕಾಲೇಜಿನ ಟೀಚರ್​ ಮೇಲೆಯೇ ಲವ್​ ಆಗುವ ನಾಯಕನಾಗಿ ಹಾಗೂ ಕನಸಿನ ಲೋಕದಲ್ಲಿ ತೆಲುವ ಪ್ರೇಮಿಯಾಗಿ ಪವನ್ ಸಖತ್ ಕಿಕ್​ ನೀಡುತ್ತಿದ್ದಾರೆ.



ಜುಲೈ 31ಕ್ಕೆ ಟ್ರೈಲರ್ ಬಿಡುಗಡೆ:

ಇನ್ನು, ಈಗಾಗಲೇ ನಟ ಗಣೇಶ್ ಮತ್ತು ನಟ ದಿಂಗತ್​ ಅವರ ಕ್ಯಾರೆಕ್ಟರ್​ ಇಂಟರ್ಡಕ್ಷನ್ ಟೀಸರ್​ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಿಯಾಗಿ ಕನ್ನಡ ಬರದ ಪ್ರೇಮಿಯಾಗಿ ಹಾಗೂ ದಿಗಂತ್​ ತರಲೇ ಲವರ್​ ಬಾಯ್​ ಆಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಭಟ್ಟರು ಹೆಚ್ಚಿಸುತ್ತಿದ್ದು, ಗಾಳಿಪಟ 2 ಚಿತ್ರದ ಟ್ರೈಲರ್​ ಜುಲೈ 31ಕ್ಕೆ ಬಿಡುಗಡೆ ಆಗಲಿದೆ.



ಗಣಿ ಮತ್ತು ಭಟ್ಟರ ಮೇಲೆ ಹೆಚ್ಚಿನ ನಿರೀಕ್ಷೆ:

ಇನ್ನು, ನಿರ್ದೇಶಕ ಯೋಗರಾಜ್ ಭಟ್‌ ಹಾಗೂ ಗಣೇಶ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್‌ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ. ಚಿತ್ರವು ಇದೇ ಆಗಷ್ಟ್ 12ರಂದು ರಿಲೀಸ್ ಅಗಲಿದೆ.

ಇದನ್ನೂ ಓದಿ: Gaalipata 2: ಭಟ್ಟರ ಬತ್ತಳಿಕೆಯಲ್ಲಿ ಮತ್ತೊಂದು 'ಎಣ್ಣೆ ಸಾಂಗ್', ಗಾಳಿಪಟ 2 ಚಿತ್ರದ ಹೊಸ ವಿಡಿಯೋ ಸಾಂಗ್​ ರಿಲೀಸ್ ಡೇಟ್​ ಫಿಕ್ಸ್

ಚಿತ್ರದಲ್ಲಿ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
Published by:shrikrishna bhat
First published: