ಸೈರಾ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್​ ಚಿತ್ರಕ್ಕೆ ರಾಮ್​ ಚರಣ್ ಪ್ಲ್ಯಾನ್: ಹೀರೋ ಯಾರು ಗೊತ್ತೆ?

2018ರ ಜನವರಿ ತಿಂಗಳಲ್ಲಿ ತೆರೆಕಂಡಿದ್ದ ಅಜ್ಞಾತವಾಸಿ ಸಿನಿಮಾ ಬಳಿಕ ನಟ ಪವನ್  ರಾಜಕೀಯದಲ್ಲಿ ಬಿಝಿಯಾಗಿದ್ದರು. ಆ ಬಳಿಕ ಬಣ್ಣದ ಲೋಕದಿಂದಲೇ ದೂರ ಸರಿದಿದ್ದರು .

zahir | news18-kannada
Updated:October 9, 2019, 7:56 PM IST
ಸೈರಾ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್​ ಚಿತ್ರಕ್ಕೆ ರಾಮ್​ ಚರಣ್ ಪ್ಲ್ಯಾನ್: ಹೀರೋ ಯಾರು ಗೊತ್ತೆ?
ಮೆಗಾ ಫ್ಯಾಮಿಲಿ
  • Share this:
'ಸೈರಾ ನರಸಿಂಹಾ ರೆಡ್ಡಿ' ಸಿನಿಮಾ ಬಾಕ್ಸಾಫೀಸ್​ನಲ್ಲಿ ಅಬ್ಬರಿಸಿದ್ದೇ ತಡ ನಿರ್ಮಾಪಕ/ನಟ ರಾಮ್ ಚರಣ್ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಿಂದ ಹೊರಬಿದ್ದಿದೆ. ಮೆಗಾ ಸ್ಟಾರ್ ಚಿರಂಜೀವಿ ಅವರ ಕೆರಿಯರ್​ಗೆ ಐತಿಹಾಸಿಕ ಸಿನಿಮಾ ಕರುಣಿಸಿದ ಮೆಗಾ ಪವರ್ ಸ್ಟಾರ್ ಈ ಬಾರಿ ತೆರೆ ಮೇಲೆ ಚಿಕ್ಕಪ್ಪನನ್ನು ಕರೆ ತರುವ ಯೋಜನೆಯಲ್ಲಿದ್ದಾರೆ.

ಹೌದು, ಪವರ್ ಸ್ಟಾರ್ ಪವನ್ ಕಲ್ಯಾಣ್ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. 2018ರ ಜನವರಿ ತಿಂಗಳಲ್ಲಿ ತೆರೆಕಂಡಿದ್ದ 'ಅಜ್ಞಾತವಾಸಿ' ಸಿನಿಮಾ ಬಳಿಕ ನಟ ಪವನ್  ರಾಜಕೀಯದಲ್ಲಿ ಬಿಝಿಯಾಗಿದ್ದರು. ಆ ಬಳಿಕ ಬಣ್ಣದ ಲೋಕದಿಂದಲೇ ದೂರ ಸರಿದಿದ್ದರು ಎಂದೇ ಹೇಳಬಹುದು. ಆದರೆ ಇತ್ತೀಚೆಗೆ ಅಣ್ಣ ಚಿರಂಜೀವಿ ತಮ್ಮ ರೀಎಂಟ್ರಿ ಕೊಡುವ ಸೂಚನೆಯನ್ನು ನೀಡಿದ್ದರು.

ಈ ರೀಎಂಟ್ರಿಗೆ ಸಾಥ್ ನೀಡಲು ಇದೀಗ ರಾಮ್ ಚರಣ್ ಎಂಟ್ರಿ ಕೊಡುತ್ತಿದ್ದಾರೆ. ಪವರ್ ಸ್ಟಾರ್ ಅಭಿನಯಿಸಲಿರುವ ಕಂಬ್ಯಾಕ್ ಸಿನಿಮಾವನ್ನು ನಿರ್ಮಿಸಲು ಮೆಗಾ ಪವರ್ ಸ್ಟಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.

ಏಕೆಂದರೆ ಅತ್ತ ರಾಜಕೀಯದಲ್ಲಿ ಸೋತಿರುವ ಪವನ್ ಕಲ್ಯಾಣ್ ಮತ್ತೊಮ್ಮೆ ತಮ್ಮ ತಾರಾ ವರ್ಚಸ್ಸನ್ನು ಮರಳಿ ಪಡೆಯುವ ಇರಾದೆಯಲ್ಲಿದ್ದಾರೆ. ಇದಕ್ಕಾಗಿ ತಮ್ಮದೇ ಹೋಮ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಿಸಿ ಪವನ್​ಗೆ ಪವರ್ ನೀಡಲು ಮೆಗಾ ಕುಟುಂಬ ಯೋಚಿಸಿದೆ ಎಂದು ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಕನ್ನಡ ಚಿತ್ರನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಲವ್ವಿ-ಡವ್ವಿ?

ಇನ್ನು ಈ ಸಿನಿಮಾದಲ್ಲಿ ಮೆಗಾ ಕುಡಿಗಳು ಜೊತೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಂದರೆ ಚಿರಂಜೀವಿ, ರಾಮ್ ಚರಣ್ ಇಬ್ಬರೂ ಪವನ್ ಕಲ್ಯಾಣ್​ ಅವರ ಕಂಬ್ಯಾಕ್ ಚಿತ್ರದ ಭಾಗವಾಗುವ ಸಾಧ್ಯತೆಯಿದೆ. ಆದರೆ ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ, ಕಥೆ ಓಕೆ ಆಗಿದೆಯಾ? ಎಂಬಿತ್ಯಾದಿ ವಿಚಾರಗಳು ಮಾತ್ರ ಬಹಿರಂಗವಾಗಿಲ್ಲ.

ಇದರ ಹೊರತಾಗಿ ಪವನ್ ಕಲ್ಯಾಣ್ ಪುತ್ರ ಅಕಿರಾ ಕೂಡ ಸಿನಿರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿದ್ದಾರೆ. ಹೀಗಾಗಿ ತಂದೆ-ಮಗ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಕೂಡ ಪವರ್ ಸ್ಟಾರ್ ಅಭಿಮಾನಿಗಳಲ್ಲಿದೆ.ಒಟ್ಟಿನಲ್ಲಿ 'ಬದ್ರಿ', 'ತೊಲಿ ಪ್ರೇಮ', 'ಖುಷಿ' ಸೇರಿದಂತೆ ಒಂದಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಪವರ್ ಸ್ಟಾರ್ ಪವನ್ ಕಲ್ಯಾಣ್ ಮರಳಿ ಬಿಗ್ ಸ್ಕ್ರೀನ್ ಕಾಣಿಸಲಿದ್ದಾರೆಂಬ ಸುದ್ದಿ ಅಭಿಮಾನಿಗಳಿಗಂತು ಖುಷಿ ನೀಡಿದೆ .
First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ