Vakeel Saab: ಲೀಕ್ ಆಯ್ತು ಪವನ್​ ಕಲ್ಯಾಣ್​ ಅಭಿನಯದ ವಕೀಲ್​ ಸಾಬ್​ ಚಿತ್ರದ ಫೋಟೋ..!

ಪವನ್​ ಕಲ್ಯಾಣ್​

ಪವನ್​ ಕಲ್ಯಾಣ್​

Pawan Kalyan: 'ವಕೀಲ್​ ಸಾಬ್'​ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಲೇ ಪವನ್​ ಅವರ ಫೋಟೋಗಳು ಲೀಕ್​ ಆಗಿದ್ದವು. ಈಗಲೂ ಸಹ ಈ ಸಿನಿಮಾದ ಲೆಟೆಸ್ಟ್ ಫೋಟೋ ಒಂದು ಲೀಕ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  • Share this:

ಪವನ್​ ಕಲ್ಯಾಣ್​ ಅಭಿನಯದ 'ವಕೀಲ್​ ಸಾಬ್​' ಸಿನಿಮಾ ಬಾಲಿವುಡ್​ನ ಹಿಟ್​ ಚಿತ್ರ 'ಪಿಂಕ್​'ನ ರಿಮೇಕ್​ ಆಗಿದೆ. ಹಿಂದಿಯಲ್ಲಿ ಅಮಿತಾಭ್​ ಅಭಿನಯಿಸಿದ್ದ ಪಾತ್ರಕ್ಕೆ ತೆಲುಗಿನಲ್ಲಿ ಪವನ್​ ಕಲ್ಯಾಣ್​ ಜೀವ ತುಂಬಿದ್ದಾರೆ. 


'ವಕೀಲ್​ ಸಾಬ್'​ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಲೇ ಪವನ್​ ಅವರ ಫೋಟೋಗಳು ಲೀಕ್​ ಆಗಿದ್ದವು. ಈಗಲೂ ಸಹ ಈ ಸಿನಿಮಾದ ಲೆಟೆಸ್ಟ್ ಫೋಟೋ ಒಂದು ಲೀಕ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.


Pawan Kalyan is charging nearly 50 crore remuneration for Pink Telugu remake
'ಪಿಂಕ್'​ ರಿಮೇಕ್​ ಸಿನಿಮಾದ ಸೆಟ್​ನಲ್ಲಿ ಪವನ್​ ಕಲ್ಯಾಣ್​


ಕೋರ್ಟ್​ನಲ್ಲಿ ಚಿತ್ರೀಕರಿಸಲಾಗುವ ದೃಶ್ಯದಲ್ಲಿ ಪವನ್​ ಕಲ್ಯಾಣ್​ ವಾದಿಸುತ್ತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


The devil is back 😍😍 #VakeelSaab pic.twitter.com/u4CV178rSt



ತ್ರಿವಿಕ್ರಮ ಶ್ರೀನಿವಾಸ್​ ನಿರ್ದೇಶನದ ಸಿನಿಮಾದಲ್ಲಿ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದರು ಪವನ್​. ನಂತರ ಅಭಿನಯಿಸುತ್ತಿರುವ ಸಿನಿಮಾ ವಕೀಲ್​ ಸಾಬ್​. ಕಳೆದ ಮಾರ್ಚ್​ನಲ್ಲಿ ಈ ಚಿತ್ರದ ಫಸ್ಟ್​ಲುಕ್​ ಬಿಡುಗೆಯಾಗಿತ್ತು.



ಬೋನಿ ಕಪೂರ್ ಹಾಗೂ ದಿಲ್​ ರಾಜು ನಿರ್ಮಾಣದ ಈ ಸಿನಿಮಾವನ್ನು ವೇಣು ಶ್ರೀರಾಮ್​ ನಿರ್ದೇಶಿಸುತ್ತಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್​ ಅಭಿಮಾನಿಗಳು ಈ ಸಿನಿಮಾದ ಕುರಿತಾಗಿ ಸಖತ್ ಕಾತರರಾಗಿದ್ದಾರೆ. ಹಿಂದಿ ಪಿಂಕ್​ ಚಿತ್ರ ತಮಿಳು ರಿಮೇಕ್​ 2019ರಲ್ಲಿ ತೆರೆ ಕಂಡಿತ್ತು. ಅಜಿತ್​ ಹಾಗೂ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!


ಇದನ್ನೂ ಓದಿ: Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?

Published by:Anitha E
First published: