• Home
  • »
  • News
  • »
  • entertainment
  • »
  • Bhimla Nayak: ಪವನ್ ಸಿನಿಮಾಗೆ ಮತ್ತೆ ಅಡ್ಡಗಾಲು, CRPF ಯೋಧರನ್ನು ಅಖಾಡಕ್ಕಿಳಿಸಿದ ಆಂಧ್ರ ಸಿಎಂ ಜಗನ್​!

Bhimla Nayak: ಪವನ್ ಸಿನಿಮಾಗೆ ಮತ್ತೆ ಅಡ್ಡಗಾಲು, CRPF ಯೋಧರನ್ನು ಅಖಾಡಕ್ಕಿಳಿಸಿದ ಆಂಧ್ರ ಸಿಎಂ ಜಗನ್​!

ಪವನ್​ ಕಲ್ಯಾಣ್​, ಆಂಧ್ರ ಸಿಎಂ ಜಗನ್

ಪವನ್​ ಕಲ್ಯಾಣ್​, ಆಂಧ್ರ ಸಿಎಂ ಜಗನ್

ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ ಚಿತ್ರಮಂದಿರಗಳನ್ನು ಬಂದ್​ ಮಾಡಲಾಗಿದೆ. ಪವನ್​ ಕಲ್ಯಾಣ್​ ಅವರ ಹಿಂದಿನ ಸಿನಿಮಾ ‘ವಕೀಲ್ ಸಾಬ್​’ ತೆರೆಕಂಡಾಗಲು ಈ ರೀತಿಯ ಸಮಸ್ಯೆಯನ್ನು ಆಂಧ್ರ ಸರ್ಕಾರ ನೀಡಿತ್ತು. ಈಗ ಮತ್ತೆ ಅದನ್ನೇ ರಿಪೀಟ್​ ಮಾಡುತ್ತಿದ್ದೆ. ಇದರಿಂದ ಪವನ್​ ಕಲ್ಯಾಣ್​ ಅಭಿಮಾನಿಗಳು ರೊಚ್ಚಿಗೆದಿದ್ದಾರೆ.

ಮುಂದೆ ಓದಿ ...
  • Share this:

ಫೆಬ್ರವರಿ 25 ರಂದು ಆಂಧ್ರ (Andhra) ಹಾಗೂ ತೆಲಂಗಾಣ (Telangana) ಎರಡೂ ರಾಜ್ಯಗಳಲ್ಲಿ 'ಭೀಮ್ಲಾ ನಾಯಕ್' (Bhimla Nayak) ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಆಗಿದೆ.ನಟ ಪವನ್ ಕಲ್ಯಾಣ್ ಅವರು ರಿಮೇಕ್ (Remake) ಚಿತ್ರವನ್ನು ಕೈಗೆತ್ತಿಕೊಂಡಾಗ ಮೂಲ ಕಥೆಯನ್ನು (Story) ಹಾಗೆಯೇ ಪರದೆಯ ಮೇಲೆ ಅಭಿಮಾನಿಗಳಿಗೆ ನೀಡುವ ಬದಲಿಗೆ ಆ ಚಿತ್ರದ ಕಥೆಗೆ ಇನ್ನಷ್ಟು ಬೇರೆ ಬೇರೆ ಅಂಶಗಳನ್ನು ಅಳವಡಿಸಿಕೊಂಡು ಚಿತ್ರ ರೆಡಿ ಮಾಡಿರ ರಿಲೀಸ್ ಮಾಡಲಾಗಿದೆ. ಮಲಯಾಳಂನ ‘ಅಯ್ಯಪನ್​ ಕೋಶಿಯಂ’ (Ayyappanum Koshiyum) ಸಿನಿಮಾದ ರಿಮೇಕ್​ ‘ಭೀಮ್ಲಾ ನಾಯಕ್’​. ಪವನ್ ಸಿನಿಮಾ ಬಿಡುಗಡೆ ಆಗಿದ್ದೇ ತಡ ಆಂಧ್ರದಲ್ಲಿ ಚಿತ್ರಮಂದಿರಗಳು ಸೂಕ್ಷ್ಮ ಪ್ರದೇಶಗಳಾಗಿ ಪರಿವರ್ತನೆಗೊಂಡಿವೆ. ಇದಕ್ಕೆ ಕಾರಣ ಜಗನ್ (Jagan) ಹಾಗೂ ಪವನ್​ ನಡುವೆ ಇರುವ ವೈಯಕ್ತಿಕ ವೈರತ್ವ. ಹೌದು, ಆಂಧ್ರದಲ್ಲಿ ಚಿತ್ರಮಂದಿರಗಳ ಮೇಲೆ ಸರ್ಕಾರವು ಹಲವು ನಿಯಮ ಹೇರಿದೆ. ಟಿಕೆಟ್ ದರ(Ticket Price)ವನ್ನು ಇಳಿಸಿದೆ. ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ ಚಿತ್ರಮಂದಿರಗಳನ್ನು ಬಂದ್ (Theater Bandh)​ ಮಾಡಲಾಗಿದೆ. ಪವನ್​ ಕಲ್ಯಾಣ್​ ಅವರ ಹಿಂದಿನ ಸಿನಿಮಾ ‘ವಕೀಲ್ ಸಾಬ್ ​(Vakeel Saab)’ ತೆರೆಕಂಡಾಗಲು ಈ ರೀತಿಯ ಸಮಸ್ಯೆಯನ್ನು ಆಂಧ್ರ ಸರ್ಕಾರ ನೀಡಿತ್ತು. ಈಗ ಮತ್ತೆ ಅದನ್ನೇ ರಿಪೀಟ್​ ಮಾಡುತ್ತಿದ್ದೆ. ಇದರಿಂದ ಪವನ್​ ಕಲ್ಯಾಣ್​ ಅಭಿಮಾನಿಗಳು ರೊಚ್ಚಿಗೆದಿದ್ದಾರೆ.


‘ಭೀಮ್ಲಾ ನಾಯಕ್​’ ಸಿನಿಮಾಗೆ ಜಗನ್​ರಿಂದ ತೊಂದ್ರೆ?


ಜಗನ್ ಸರ್ಕಾರ 'ಭಿಮ್ಲಾ ನಾಯಕ್' ಸಿನಿಮಾ ಬಿಡುಗಡೆಗೆ ಸಮಸ್ಯೆ ಮಾಡುತ್ತಿದೆ. ಸಿನಿಮಾದ ಬಿಡುಗಡೆ ಆಗುವುದಕ್ಕೆ ಮುನ್ನವೇ ಕೆಲವು ಚಿತ್ರಮಂದಿರಗಳನ್ನು ಬಂದ್ ಮಾಡಿಸಲಾಗಿದೆ. ಚಿತ್ರಮಂದಿರಗಳು ಹೆಚ್ಚು ಶೋಗಳನ್ನು ಹಾಕದಂತೆ, ಟಿಕೆಟ್ ದರ ಹೆಚ್ಚು ಮಾಡದಂತೆ ನೋಡಿಕೊಳ್ಳಲು ಕಾವಲು ವಿಧಿಸಿದೆ. ಕೇವಲ ಪವನ್​ ಕಲ್ಯಾಣ್​ ಸಿನಿಮಾ ರಿಲೀಸ್ ಆದಾಗ ಮಾತ್ರ ಈ ರೀತಿಯ ನಿಯಮವನ್ನು ಜಗನ್​ ಸರ್ಕಾರ ಹೇರುತ್ತಿದೆ. ಇತ್ತೀಚೆಗೆ ಪುಷ್ಪ ಸಿನಿಮಾ ರಿಲೀಸ್ ಆಗಿತ್ತು, ಆಗ ಈ ರೀತಿ ಮಾಡಲಿಲ್ಲ ಯಾಕೆ ಎಂದು ಪವನ್​ ಕಲ್ಯಾಣ್​ ಅಭಿಮಾನಿಗಳು ಗರಂ ಆಗಿದ್ದಾರೆ. ಇನ್ನೂ ಕೆಲ ಚಿತ್ರಮಂದಿಗಳ ಬಳಿ ಸಿಆರ್‌ಪಿಎಫ್ ಯೋಧರನ್ನು ಬಳಸಿಕೊಂಡು ಸಂಭಾವ್ಯ ಗಲಾಟೆಗಳನ್ನು ಹತ್ತಿಕ್ಕಲಾಗಿದೆ.


ಇದನ್ನೂ ಓದಿ: 'ಭೀಮ್ಲಾ ನಾಯಕ್'ನಾಗಿ ಅಬ್ಬರಿಸಿದ ಪವನ್ ಕಲ್ಯಾಣ್, ಫ್ಯಾನ್ಸ್‌ಗೆ 'Power'ಫುಲ್ ಪ್ಯಾಕೇಜ್


ಸಮಸ್ಯೆ ಮಾಡಲೆಂದೇ ದಿನಕ್ಕೆ 3 ಕೋಟಿ ಖರ್ಚು!


'ಭೀಮ್ಲಾ ನಾಯಕ್' ಸಿನಿಮಾಕ್ಕೆ ಸಮಸ್ಯೆ ಮಾಡಲೆಂದೆ ಜಗನ್​ ಸರ್ಕಾರ ದಿನವೊಂದಕ್ಕೆ 3 ಕೋರ್ಟಿ ರೂಪಾಯಿ ಖರ್ಚು ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ. ಚಿತ್ರಮಂದಿರಗಳು ನಿಯಮ ಮೀರದಂತೆ ನೋಡಿಕೊಳ್ಳುವ ದಳ, ಅದರ ಪ್ರಯಾಣ ವೆಚ್ಚ, ಸಿಆರ್‌ಪಿಎಫ್ ಯೋಧರ ಪ್ರಯಾಣ ಹಾಗೂ ದಿನದ ಭತ್ಯೆ, ಹೆಚ್ಚುವರಿ ಪೊಲೀಸರ ನಿಯೋಜನೆ ಭತ್ಯೆ ಇತರೆಗಳನ್ನು ಲೆಕ್ಕ ಮಾಡಿದರೆ, ದಿನವೊಂದಕ್ಕೆ 3 ಕೋಟಿಗೂ ಹೆಚ್ಚು ಹಣ ಖರ್ಚಾಗಿತ್ತಿದೆ ಎಂದು ಹೇಳಲಾಗುತ್ತಿದೆ. ಇದನೆಲ್ಲ ಕಂಡ ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಅಭಿಮಾನಿಗಳು ಜಗನ್​ ವಿರುದ್ಧ ರಾಂಗ್ ಆಗಿದ್ದಾರೆ.


ಇದನ್ನೂ ಓದಿ: ‘ಜೇಮ್ಸ್‘ ಉತ್ಸವಕ್ಕೆ ಭರ್ಜರಿ ತಯಾರಿ, ಪ್ರಚಾರದ ತೇರು ಎಳೆಯಲು ಬರ್ತಾರೆ ಜೂನಿಯರ್ NTR?


‘ಭೀಮ್ಲಾ ನಾಯಕ್‌’ ಆಗಿ ಪವನ್ ‘ಪವರ್’ ಫುಲ್ ಅಭಿನಯ


ಭೀಮ್ಲಾ ನಾಯಕ್ ಚಿತ್ರವು ಒಟ್ಟಿನಲ್ಲಿ ನಟ ಪವನ ಕಲ್ಯಾಣ್ ಎಷ್ಟು ದೊಡ್ಡ ನಟ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಅವರ ಟ್ರೇಡ್ ಮಾರ್ಕ್ ಚೇಷ್ಟೆಗಳು ಈ ಚಿತ್ರದಲ್ಲಿ ನೀವು ನೋಡಬಹುದು ಮತ್ತು ಅವರ ಸರಳ ನೃತ್ಯ ಹೆಜ್ಜೆಗಳು ಅಭಿಮಾನಿಗಳ ಮನಸೆಳೆಯುವಂತೆ ಇವೆ.ಇನ್ನೊಬ್ಬ ನಟ ರಾಣಾ ದಗ್ಗುಬಾಟಿ ಅವರು ಎಷ್ಟು ಚೆನ್ನಾಗಿ ನಟಿಸಬಹುದು ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ. ನಟಿ ನಿತ್ಯಾ ಮೆನೆನ್ ಅವರ ಪಾತ್ರದಲ್ಲಿ ತುಂಬಾನೇ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ.

Published by:Vasudeva M
First published: