ನೆಚ್ಚಿನ ನಟನನ್ನು​ ಭೇಟಿಯಾಗಲು ಸಾಧ್ಯವಾಗಿಲ್ಲವೆಂದು ಅಭಿಮಾನಿ ಆತ್ಮಹತ್ಯೆ

news18
Updated:September 6, 2018, 7:15 PM IST
ನೆಚ್ಚಿನ ನಟನನ್ನು​ ಭೇಟಿಯಾಗಲು ಸಾಧ್ಯವಾಗಿಲ್ಲವೆಂದು ಅಭಿಮಾನಿ ಆತ್ಮಹತ್ಯೆ
news18
Updated: September 6, 2018, 7:15 PM IST
-ನ್ಯೂಸ್ 18 ಕನ್ನಡ

ಟಾಲಿವುಡ್​ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್​ಗೆ ಇರುವ ಕ್ರೇಜ್ ಇತರೆ ಯಾವುದೇ ನಟರಿಗಿಲ್ಲ ಎಂದರೆ ತಪ್ಪಾಗಲಾರದು. ಆಂಧ್ರ-ತೆಲಂಗಾಣ ರಾಜ್ಯಗಳಲ್ಲದೆ ಹೊರ ರಾಜ್ಯಗಳಲ್ಲೂ 'ಪವನಿಸಂ' ಸಖತ್ತಾಗೆ ನಡೆಯುತ್ತದೆ. ಪವರ್ ಸ್ಟಾರ್ ಎಲ್ಲೇ ಹೋದರು ಸಾವಿರಾರು ಅಭಿಮಾನಿಗಳು ಸೇರುವುದು ಇದೇ ಕಾರಣಕ್ಕೆ ಅನ್ನಬಹುದು. ಇಂತಹ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಪವನ್ ಕಲ್ಯಾಣ್​ರನ್ನು ಭೇಟಿಯಾಗಬೇಕೆಂದು ಎಲ್ಲ ಅಭಿಮಾನಿಗಳು ಬಯಸುತ್ತಾರೆ. ಅಂತಹ ಅಭಿಮಾನಿಗಳಲ್ಲಿ ಒಬ್ಬರಾಗಿದ್ದರು ವಿಜಯವಾಡದ ಅನಿಲ್ ಕುಮಾರ್. ತನು ಮನದಲ್ಲಿ ಪವರ್ ಸ್ಟಾರ್​ನ್ನು ಆರಾಧಿಸುತ್ತಿದ್ದ ಅನಿಲ್​ಗೆ ಪವನ್ ಕಲ್ಯಾಣ್ ರೋಲ್ ಮಾಡೆಲ್ ಆಗಿದ್ದರು.

ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ತನ್ನ ನೆಚ್ಚಿನ ನಟನನ್ನು ಭೇಟಿಯಾಗಬೇಕೆಂದು ಅನಿಲ್ ಕುಮಾರ್ ಬಯಸಿದ್ದರು. ಈ ವಿಚಾರವಾಗಿ ಅನೇಕ ಬಾರಿ ಪವನ್​ ಕಲ್ಯಾಣ್​ರನ್ನು ಭೇಟಿಯಾಗಲು ಪ್ರಯತ್ನವನ್ನು ಮಾಡಿದ್ದರು. ಆದರೆ ಪವರ್ ಸ್ಟಾರ್​ನ್ನು ಖುದ್ದು ಭೇಟಿ ಮಾಡಲು ಅನಿಲ್​ಗೆ ಸಾಧ್ಯವಾಗಲೇ ಇಲ್ಲ. ತನ್ನ ಬಹುದಿನಗಳ ಕನಸು ಈಡೇರದೇ ಇರುವುದರಿಂದ ಅನಿಲ್ ಕುಮಾರ್ ಮನನೊಂದಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ತನ್ನ ಕೊನೆಯ ಇಚ್ಛೆಯಂತೆ ಅಂತಿಮ ಸಂಸ್ಕಾರಕ್ಕೆ ಪವನ್ ಕಲ್ಯಾಣ್ ಬರ ಬೇಕೆಂದು ಆತ್ಮಹತ್ಯೆ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಸತ್ಯನಾರಾಯಣಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿದೆ. ಸದ್ಯ ಜನಸೇನಾ ಪಕ್ಷದೊಂದಿಗೆ ರಾಜಕೀಯಕ್ಕೆ ಧುಮುಕಿರುವ ನಟ ಪವನ್ ಕಲ್ಯಾಣ್ ತಮ್ಮ ನಾಡಿನ ಅಭಿವೃದ್ದಿಯತ್ತ ಪಣ ತೊಟ್ಟಿದ್ದಾರೆ. ಇದರ ನಡುವೆ ಅನಿಲ್ ಕುಮಾರ್​ನಂತಹ ಅಭಿಮಾನಿಗಳು ತಪ್ಪು ದಾರಿ ಹಿಡಿಯುತ್ತಿರುವುದ ಮಾತ್ರ ದುರಂತ ಎನ್ನಬಹುದು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626