ಜನವರಿ ಅಲ್ಲ.. ಫೆಬ್ರವರಿ 25ಕ್ಕೆ `ಭೀಮ್ಲಾ ನಾಯಕ್‘​ ಎಂಟ್ರಿ: ಆದ್ರೆ, ರಾಜಮೌಳಿ ಖುಷಿಪಟ್ಟಿದ್ದೇಕೆ? ಇಲ್ಲಿದೆ..

ತೆಲುಗಿನಲ್ಲಿ ರೆಡಿಯಾಗಿರುವ ‘ಭೀಮ್ಲಾ ನಾಯಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಸಂಕ್ರಾಂತಿ ರೇಸ್​ನಲ್ಲಿತ್ತು. ಆದರೆ, ಈಗ ಚಿತ್ರ ಇದರಿಂದ ಹಿಂದೆ ಸರಿದಿದೆ. ಇದಕ್ಕಾಗಿ ‘ಭೀಮ್ಲಾ ನಾಯಕ್​’ ನಿರ್ಮಾಪಕ ನಾಗ ವಂಶಿ ಅವರು ಪವನ್​ ಕಲ್ಯಾಣ್​ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಭೀಮ್ಲಾ ನಾಯಕ್, ಆರ್​​ಆರ್​ಆರ್​, ರಾಧೆ-ಶ್ಯಾಮ್​

ಭೀಮ್ಲಾ ನಾಯಕ್, ಆರ್​​ಆರ್​ಆರ್​, ರಾಧೆ-ಶ್ಯಾಮ್​

  • Share this:
ಟಾಲಿವುಡ್ ​(Tollywood)ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು, ಬಿಗ್​ ಬಜೆಟ್​ ಸಿನಿಮಾಗಳು ಜನವರಿಯಲ್ಲಿ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ. ಟಾಲಿವಡ್​ನಲ್ಲಿ ಸಕ್ರಾಂತಿಗೆ ಸಿನಿಮಾ ರಿಲೀಸ್​ ಮಾಡಿದರೆ ಅದು ಸೂಪರ್​ ಹಿಟ್ ಆಗುತ್ತೆ ಅನ್ನುವ ನಂಬಿಕೆ. ಹೀಗಾಗಿ ಸಕ್ರಾಂತಿಗೆ ಸಿನಿಮಾ ರಿಲೀಸ್​ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ.  ಜನವರಿ 7ರಂದು ಭಾರತೀಯ ಚಿತ್ರರಂಗದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ‘ಆರ್​ಆರ್​ಆರ್’​(RRR) ರಿಲೀಸ್​ ಆಗುತ್ತಿದೆ. ಫ್ಯಾನ್ಸ್​ಗಳು ತುದಿಗಾಲಲ್ಲಿ ಸಿನಿಮಾ ನೋಡಲು ನಿಂತಿದ್ದಾರೆ. ಆದರೆ, ಸಕ್ರಾಂತಿಗೆ ಪವನ್​ ಕಲ್ಯಾಣ್​ ಅಭಿನಯದ ‘ಭೀಮ್ಲಾ ನಾಯಕ್’ (BheemlaNayak)​ ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿತ್ತು. ಒಂದು ವಾರ ಅಂತರದಲ್ಲಿ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾದರೆ ಹೇಗೆ ಎಂಬ ಪ್ರಶ್ನೆ ಮೂಡಿತ್ತು. ಇತ್ತ ‘ಆರ್​ಆರ್​ಆರ್​​’ ಸಿನಿಮಾದಲ್ಲಿ ಜೂ.ಎನ್​ಟಿಆರ್ (Jr.NTR)​​, ರಾಮ್​ಚರಣ್ (Ramcharan)​ ನಟಿಸಿದ್ರೆ, ಅತ್ತ ಭೀಮ್ಲಾ ನಾಯಕ್ ಚಿತ್ರದಲ್ಲಿ ಪವರ್​ ಸ್ಟಾರ್​ ಪವನ್​ ಕಲ್ಯಾಣ್ ​(Pawan Kalyan) ಹಾಗೂ ರಾಣಾ ದಗ್ಗುಬಾಟಿ (Rana Daggubati) ನಟಿಸಿದ್ದಾರೆ. ಈ ಎರಡು ಸಿನಿಮಾಗಳ ನಡುವೆ ಮತ್ತೊಂದು ಬಿಗ್​ ಬಜೆಟ್​ ಪ್ಯಾನ್​ ಇಂಡಿಯಾ ಸಿನಿಮಾ ಪ್ರಭಾಸ್​ ನಟನೆಯ ರಾಧೆ-ಶ್ಯಾಮ್ ಚಿತ್ರ ಬಿಡುಗಡೆಯಾಗಲಿದೆ. ​ಹೀಗಾಗಿ ‘ರಾಧೆ-ಶ್ಯಾಮ್’​, ‘ಭೀಮ್ಲಾ ನಾಯಕ್’ ಸಿನಿಮಾಗಳಲ್ಲಿ ಒಂದು ಸಿನಿಮಾ ರೇಸ್​​ನಿಂದ ಹಿಂದೆ ಸರಿಯುವ ಅವಶ್ಯಕತೆ ಇತ್ತು.

ರೇಸ್​ನಿಂದ ಹಿಂದೆ ಸರಿದ ‘ಭೀಮ್ಲಾ ನಾಯಕ್​’!

ತೆಲುಗಿನಲ್ಲಿ ರೆಡಿಯಾಗಿರು ‘ಭೀಮ್ಲಾ ನಾಯಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಸಂಕ್ರಾಂತಿ ರೇಸ್​ನಲ್ಲಿತ್ತು. ಆದರೆ, ಈಗ ಚಿತ್ರ ಇದರಿಂದ ಹಿಂದೆ ಸರಿದಿದೆ. ಇದಕ್ಕಾಗಿ ‘ಭೀಮ್ಲಾ ನಾಯಕ್​’ ನಿರ್ಮಾಪಕ ನಾಗ ವಂಶಿ ಅವರು ಪವನ್​ ಕಲ್ಯಾಣ್​ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ‘ಎಲ್ಲಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇದು ನನ್ನ ಕೈಯಲ್ಲಿ ಇರಲಿಲ್ಲ. ನಮ್ಮ ನಾಯಕ ಪವನ್ ಕಲ್ಯಾಣ್ ಅವರ ಮಾತುಗಳನ್ನು ನಾನು ಪಾಲಿಸಬೇಕಿತ್ತು. ಅವರು ಯಾವಾಗಲೂ ಈ ಉದ್ಯಮದ ಕಲ್ಯಾಣಕ್ಕೆ ಮಹತ್ವ ಕೊಡುತ್ತಾರೆ. ಈ ಶಿವರಾತ್ರಿಯಲ್ಲಿ ಒಂದು ಬಿರುಗಾಳಿ ಬರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಫೆಬ್ರವರಿ 25ರಂದು 'ಭೀಮ್ಲಾ ನಾಯಕ್’ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : `ಸೆಕೆಂಡ್​ ಹ್ಯಾಂಡ್ ಐಟಂ’ ಅಂದವನಿಗೆ ಸಮಂತಾ ಕ್ಲಾಸ್: ನಟಿ ಕೊಟ್ಟ ಉತ್ತರ ನೋಡಿದ್ರೆ ಶಹಬ್ಬಾಸ್​ ಅಂತೀರಾ..!

ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಾಜಮೌಳಿ!

ಬಾಕ್ಸ್​ ಆಫೀಸ್​ ಕ್ಲ್ಯಾಶ್​ ತಪ್ಪಿಸಿದ್ದಕ್ಕೆ ರಾಜಮೌಳಿ ಖುಷಿಪಟ್ಟಿದ್ದು, ಪವನ್​ ಕಲ್ಯಾಣ್​ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಈ ಹಿಂದೆಯೇ ಏ.1ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ‘ಭೀಮ್ಲಾ ನಾಯಕ್‌’ ತಂಡದವರು ಕೂಡ ತಮ್ಮ ಸಿನಿಮಾವನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿ, ‘ಆರ್‌ಆರ್‌ಆರ್’ ಮತ್ತು ‘ರಾಧೆ ಶ್ಯಾಮ್‌’ ಸಿನಿಮಾಗಳ ಜೊತೆಗೆ ಆಗುತ್ತಿದ್ದ ಬಾಕ್ಸ್ ಆಫೀಸ್‌ ಕ್ಲ್ಯಾಶ್​​ಅನ್ನು  ತಪ್ಪಿಸಿದ್ದಾರೆ. ಹೀಗಾಗಿ ಆರ್​ಆರ್​ಆರ್​ ಸಿನಿಮಾಗೂ ಯಾವುದೇ ಅಡ್ಡಿ ಇಲ್ಲದಂತಾಗಿದೆ.ಇದೇ ವಿಚಾರಕ್ಕೆ ನಿರ್ದೇಶಕ ರಾಜಮೌಳಿ ಸಖತ್​ ಖುಷಿಯಾಗಿದ್ದಾರೆ.

ಇದನ್ನು ಓದಿ : ಅಯ್ಯೋ.. ಇದೇನ್​ ಹಿಂಗಿದೆ ಬಟ್ಟೆ.. ಅದನ್ನೂ ಹಾಕ್ಬೇಡಿ ಹಂಗೇ ಓಡಾಡಿ ಎಂದ ನೆಟ್ಟಿಗರು!

ಅಯ್ಯಪ್ಪನುಮ್​ ಕೋಶಿಯನ್​ ರೀಮೆಕ್​ ಭೀಮ್ಲಾ ನಾಯಕ್​!

ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭಿಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ. ಮಲಯಾಳಂನಲ್ಲಿ ಸೂಪರ್​ ಡೂಪರ್​ ಹಿಟ್ ಆಗಿದ್ದ ಈ ಸಿನಿಮಾ, ಟಾಲಿವುಡ್​ನಲ್ಲಿ ಯಾವ ರೀತಿ ಧೂಳೆಬಿಸುತ್ತೆ ಅಂತ ಫೆ.25ರವರೆಗೆ ಕಾದು ನೋಡಬೇಕು.
Published by:Vasudeva M
First published: