ಅನ್ನಿಯನ್ ರೀತಿಯ ಪಾತ್ರದಲ್ಲಿ ಗೂಳಿಹಟ್ಟಿ ಪವನ್!

ಈ ಬಾರಿ ಪವನ್​ ಅವರಿಗೆ ಓಂ ಪ್ರಕಾಶ್​ ರಾವ್ ಆ್ಯಕ್ಷನ್​ ಕಟ್ ಹೇಳೋಕೆ ರೆಡಿ ಆಗಿದ್ದು, ಸ್ಯಾಂಡಲ್​ವುಡ್​ ಮಟ್ಟಿಗೆ ಇದೊಂದು ವಿಭಿನ್ನ ಶೇಡ್ ಸಿನಿಮಾ ಆಗಲಿದೆಯಂತೆ. ಚಿತ್ರಕ್ಕೆ  786 ಅನ್ನೋ ಡಿಫರೆಂಟ್ ಟೈಟಲ್ ಇಟ್ಟಿದ್ದು, ಚಿತ್ರದಲ್ಲಿ ಪವನ್ ಎರಡು ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

news18-kannada
Updated:August 1, 2020, 9:37 PM IST
ಅನ್ನಿಯನ್ ರೀತಿಯ ಪಾತ್ರದಲ್ಲಿ ಗೂಳಿಹಟ್ಟಿ ಪವನ್!
ಗೂಳಿಹಟ್ಟಿ ಪವನ್​
  • Share this:
ಗೂಳಿಹಟ್ಟಿ ಪವನ್ ಸ್ಯಾಂಡಲ್​ವುಡ್​ನಲ್ಲಿ ನೆಲೆ ನಿಲ್ಲೋಕೆ ಸಾಕಷ್ಟು ಶ್ರಮವಹಿಸ್ತಿದ್ದಾರೆ. ಉಡುಂಬಾ ಚಿತ್ರಕ್ಕಾಗಿ ಪವನ್ ಸಖತ್ ಕಸರತ್ತು ಮಾಡಿದ್ದು, ದೇಹದ ಮೇಲೆ 8 ಪ್ಯಾಕ್ ಬರಿಸಿಕೊಂಡಿದ್ದರು‌. ಈಗ ಉಡುಂಬಾ ಚಿತ್ರದ ನಂತರ ಚಾಲೆಂಜಿಂಗ್ ‌ಪಾತ್ರವನ್ನ ಮಾಡೋಕೆ ಸಜ್ಜಾಗ್ತಿದ್ದಾರೆ.

ಈ ಬಾರಿ ಪವನ್​ ಅವರಿಗೆ ಓಂ ಪ್ರಕಾಶ್​ ರಾವ್ ಆ್ಯಕ್ಷನ್​ ಕಟ್ ಹೇಳೋಕೆ ರೆಡಿ ಆಗಿದ್ದು, ಸ್ಯಾಂಡಲ್​ವುಡ್​ ಮಟ್ಟಿಗೆ ಇದೊಂದು ವಿಭಿನ್ನ ಶೇಡ್ ಸಿನಿಮಾ ಆಗಲಿದೆಯಂತೆ. ಚಿತ್ರಕ್ಕೆ  786 ಅನ್ನೋ ಡಿಫರೆಂಟ್ ಟೈಟಲ್ ಇಟ್ಟಿದ್ದು, ಚಿತ್ರದಲ್ಲಿ ಪವನ್ ಎರಡು ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

Pawan and Om Prakash Rao teamed up for new project
ಚಿತ್ರೀಕರಣದ ಸೆಟ್​ನಲ್ಲಿ ಓಂ ಪ್ರಕಾಶ್​ ರಾವ್​

ಈಗಾಗಲೇ ಶೇಡ್ ಒಂದಕ್ಕೆ ಜೀಮ್​ನಲ್ಲಿ ಸಿಕ್ಕಾಪಟ್ಟೆ ಬೆವರೆಳಿಸಿರೋ ಪವನ್, ವಿಭಿನ್ನ ವತಾರದಲ್ಲಿ ಪ್ರೇಕ್ಷಕರನ್ನ ರಂಜೀಸೊಕೆ ರೆಡಿ ಆಗಿದ್ದಾರೆ. ಹಾಗೇ ಮತ್ತೊಂದು ಶೇಡ್​ನಲ್ಲಿ ಸೈಕೋ ಆಗಿ ಕಾಣಿಸಿಕೊಳ್ತಿದ್ದು, ಬಹುಭಾಷೆ ಗೊತ್ತಿರೋ ಕ್ಯಾರೆಕ್ಟರ್ ಆಗಿದ್ದ ಸ್ಪ್ಲಿಟ್​ ಪರ್ಸನಾಲಿಟಿಯಿಂದ‌ ಕೂಡಿರಲಿದೆಯಂತೆ.

ಇದನ್ನೂ ಓದಿ: ಮತ್ತೊಂದು ಹೊಸ ದಾಖಲೆ ಬರೆದ ಅಲ್ಲು ಅರ್ಜುನ್​ ಸ್ಟೆಪ್​ ಹಾಕಿರುವ ಬುಟ್ಟ ಬೊಮ್ಮಾ ಹಾಡು

ಹುಚ್ಚ-2... ಒಂದು ವಿಭಿನ್ನ ರೀತಿಯ ಕಥೆಯನ್ನ ರೆಡಿ ಮಾಡಿಕೊಂಡಿದ್ದಾರಂತೆ ಓಂ ಪ್ರಕಾಶ್ ರಾವ್. ಈ ಪಾತ್ರಕ್ಕಾಗಿ ಫುಲ್ ಫಿಟ್ ಆಗಿರೋದಕ್ಕೆ ಹೇಳಿದ್ದು , ಪವನ್ ಜಿಮ್​ನಲ್ಲಿ  ಬೇಜಾನ್ ಕಸರತ್ತು ಮಾಡುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಅಚ್ಯುತ್ ರಾವ್, ಸಾಧು ಕೋಕಿಲ ಸೇರಿದಂತೆ ಸಾಕಷ್ಟು ದೊಡ್ಡ ತಾರಾಗಣವಿರಲಿದೆ. ಈಗಾಗಲೇ ಒಂದು ಶೆಡ್ಯೂಲ್​ನ ಶೂಟಿಂಗ್ ‌ಕಂಪ್ಲೀಟ್ ಆಗಿದೆ . ಒಟ್ಟಿನಲ್ಲಿ ವಿಭಿನ್ನ ಕತೆಯೊಂದಿಗೆ ಬರುತ್ತಿರುವ ಈ ಸಿನಿಮಾ ಸಿಕ್ಕಾಪಟ್ಟೆ ನೀರಿಕ್ಷೆಯನ್ನ ಹುಟ್ಟಿಹಾಕಿದೆ.
Published by: Anitha E
First published: August 1, 2020, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading