ನಟಿ ಪವಿತ್ರ ಲೋಕೇಶ್ (Pavithra Lokesh) ಅಧಿಕೃತವಾಗಿ ತೆಲುಗು ನಟ ನರೇಶ್ (Actor Naresh) ಜೊತೆ ಅಧಿಕೃತವಾಗಿ ಸಪ್ತಪದಿ (Pavitra Lokesh Naresh Marriage) ತುಳಿದಿದ್ದಾರೆ. ಬಹಳ ಹಿಂದಿನಿಂದಲೂ ಈ ಇಬ್ಬರ ನಡುವೆ ಲವ್ವಿ ಡವ್ವಿ (Pavitra Lokesh Naresh Love Story) ಗುಸುಗುಸು ಭಾರೀ ಸುದ್ದಿ ಮಾಡಡಿತ್ತು. ಅಲ್ಲದೇ ನಟ ನರೇಶ್ ಅವರ ಹಿಂದಿನ ಹೆಂಡತಿ ರಮ್ಯಾ ರಮೇಶ್ ನಡುವಿನ ಜಗಳ ಇಡೀ ಇಂಡಸ್ಟ್ರಿಯಲ್ಲೇ ಗಲಾಟೆ ಎಬ್ಬಿಸಿತ್ತು. ಆದರೆ ಕೊನೆಗೂ 62 ವರ್ಷದ ನರೇಶ್ ಇದೀಗ 43 ವರ್ಷದ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಹೇಗಿತ್ತು ಅಂತ ನಾವ್ ಹೇಳ್ತೀವಿ ನೋಡಿ.
ಹಿರಿಯ ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ಈ ಬಗ್ಗೆ ಇಬ್ಬರೂ ಮಾಧ್ಯಮಗಳ ಮುಂದೆ ಮಾತಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಜೋಡಿ!
ನರೇಶ್ ಮತ್ತು ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ರೂಮಿನಲ್ಲಿದ್ದ ವೇಳೆ ನಟ ಮೂರನೇ ಪತ್ನಿ ರಮ್ಯಾ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ಇಬ್ಬರ ಸಂಬಂಧ ಬಟಾ ಬಯಲಾಗಿತ್ತು.
ಈಗಾಗಲೇ 3 ಮದುವೆಯಾಗಿರುವ ನರೇಶ್!
ಟಾಲಿವುಡ್ ಹಿರಿಯ ನಟ ಹಾಗೂ ಜನಪ್ರಿಯ ನಟಿ ವಿಜಯ್ ನಿರ್ಮಲಾ ಅವರ ಪುತ್ರ ನರೇಶ್ ಈಗಾಗಲೇ 3 ಮದುವೆಯಾಗಿದ್ದಾರೆ. ಇದೀಗ ಹಿರಿಯ ನಟಿ ಪವಿತ್ರಾ ಲೋಕೇಶ್ ಜೊತೆ 4ನೇ ಮದುವೆಯಾಗಿದ್ದಾರೆ.
ಇದನ್ನೂ ಓದಿ: Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!
ಪವಿತ್ರಾ ಲೋಕೇಶ್ ಹಿನ್ನೆಲೆ ಹೀಗಿದೆ
ಪವಿತ್ರಾ ಲೋಕೇಶ್ ಕನ್ನಡದಲ್ಲಿ ಕಿರುತೆರೆ ನಟಿಯಾಗಿ ವೃತ್ತಿ ಜೀವನ ಆರಂಭಿಸಿದರು. ಅದರಲ್ಲೂ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ವಿಶೇಷವಾಗಿ ಪೋಷಕ ಪಾತ್ರಗಳೊಂದಿಗೆ ಪ್ರಸಿದ್ಧರಾದರು. ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಇವರು ತಂದೆ ಮೈಸೂರು ಲೋಕೇಶ್ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದರು. ತಂದೆಯ ಪರಂಪರೆಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.
45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು!
ಸದ್ಯ ಹಲವು ಹೀರೋಗಳಿಗೆ ತಾಯಿ ಪಾತ್ರ ಮಾಡುತ್ತಿರುವ ಇವರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಗಮನಾರ್ಹ. ಅವರು 16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1994ರಲ್ಲಿ ಅಂಬರೀಶ್ ಅಭಿನಯದ ‘ಮಿಸ್ಟರ್ ಅಭಿಷೇಕ್’ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಅದೇ ವರ್ಷ ‘ಬಂಗಾರದ ಕಲಶ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಸುಚೇಂದ್ರ ಪ್ರಸಾದ್ರಿಂದ ಬೇರ್ಪಟ್ಟಿದ್ದ ಪವಿತ್ರಾ
ಪವಿತ್ರಾ ಲೋಕೇಶ್ ಅವರ ಹಿಂದಿನ ಪತಿ ಸುಚೇಂದ್ರ ಪ್ರಸಾದ್ ಕೂಡ ಕನ್ನಡದ ಪ್ರಸಿದ್ಧ ನಟ. ಆದರೆ ಪವಿತ್ರಾ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರಿಂದ 2018ರಿಂದ ದೂರವಾಗಿದ್ದರು. ಇದರ ನಂತರವೇ ಪವಿತ್ರಾ ಲೋಕೇಶ್ ನರೇಶ್ ಅವರಿಗೆ ಹತ್ತಿರವಾಗಿದ್ದರು.
ಇದನ್ನೂ ಓದಿ: Pavitra Lokesh: ನರೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವಿತ್ರಾ ಲೋಕೇಶ್! ಮದುವೆ ವಿಡಿಯೋ ವೈರಲ್
ವಿವಾದಗಳಿಗೆ ಡೋಂಟ್ ಕೇರ್ ಎಂದಿದ್ದ ಪವಿತ್ರಾ ನರೇಶ್
ಹೀಗೆ ಪವಿತ್ರಾ ಲೋಕೇಶ್, ನರೇಶ್ ಅವರಿಗೆ ಹತ್ತಿರವಾದಂತೆ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಗಾಗ ನರೇಶ್ 3ನೇ ಹೆಂಡತಿ ರಮ್ಯಾ ಮಾಡುತ್ತಿದ್ದ ಆರೋಪಗಳು ಈ ಮದುವೆ ವಿವಾದವನ್ನು ಸದಾ ಸುದ್ದಿಯಲ್ಲಿರುವಂತೆ ಮಾಡುತ್ತಿದ್ದವು. ಆದರೆ ಪವಿತ್ರಾ ಲೋಕೇಶ್ ಮತ್ತು ನರೇಶ್ ಮಾತ್ರ ಯಾರಿಗೂ ಕ್ಯಾರ್ ಕೊಡದೇ ಡೋಂಟ್ ಕೇರ್ ಎನ್ನುವಂತೆ ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ