• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Pavitra Lokesh Marriage: 3ನೇ ಹೆಂಡತಿಗೆ ಡಿವೋರ್ಸ್ ಕೊಡದೇ ಪವಿತ್ರಾ ಲೋಕೇಶ್ ಜೊತೆ ಮದ್ವೆ? ಈಗಿನ ಪತ್ನಿಯೂ ಕನ್ನಡತಿ!

Pavitra Lokesh Marriage: 3ನೇ ಹೆಂಡತಿಗೆ ಡಿವೋರ್ಸ್ ಕೊಡದೇ ಪವಿತ್ರಾ ಲೋಕೇಶ್ ಜೊತೆ ಮದ್ವೆ? ಈಗಿನ ಪತ್ನಿಯೂ ಕನ್ನಡತಿ!

ನಟ ನರೇಶ್ ಮತ್ತು ಪವಿತ್ರಾ ಲೋಕೇಶ್

ನಟ ನರೇಶ್ ಮತ್ತು ಪವಿತ್ರಾ ಲೋಕೇಶ್

ಎರಡನೆಯ ಮತ್ತು ಬಹುಮುಖ್ಯ ಕಾರಣ ಆ ತೆಲುಗು ನಟ ನರೇಶ್ ಎಂಬಾತ ಮದುವೆಯಾಗಿ, ಮೋಸಮಾಡುತ್ತಿರುವುದು ರಮ್ಯ ರಘುಪತಿ ಎಂಬ ನಮ್ಮ ಅಚ್ಚಕನ್ನಡದ ಹೆಣ್ಣುಮಗಳಿಗೆ!  ನೀವೆಲ್ಲಾ ಅಂದುಕೊಂಡಂತೆ, ಮಾಧ್ಯಮಗಳಲ್ಲಿ ಬಂದಿರುವಂತೆ ನರೇಶ್ ಮತ್ತು ರಮ್ಯ ರಘುಪತಿ ಇನ್ನೂ ವಿವಾಹ ವಿಚ್ಛೇದನೆ ಪಡೆದೇ ಇಲ್ಲ. ರಮ್ಯ ಇಂದಿಗೂ ನರೇಶ್ ಮನೆಯಲ್ಲಿಯೇ ಇದ್ದಾಳೆ!

ಮುಂದೆ ಓದಿ ...
 • Share this:

  ಪವಿತ್ರಾ ಲೋಕೇಶ್ ತೆಲುಗಿನ ಖ್ಯಾತ ನಟ ನರೇಶ್ ಜೊತೆ ಮದುವೆ ಆಗಿದ್ದಾರೆ ಎಂದು ವದಂತಿಗಳು ಗುಸುಗುಸು ಸುದ್ದಿಗಳು ಹಬ್ಬುತ್ತಿದೆ. ನಟಿ ಪವಿತ್ರಾ ಲೋಕೇಶ್ (Pavitra Lokesh Marriage)  ಮತ್ತು ಖ್ಯಾತ ನಟ ನರೇಶ್ ಮದುವೆ ಸುದ್ದಿ ಇನ್ನೊಂದು ಆಯಾಮಕ್ಕೆ ಹೋಗುವ ಲಕ್ಷಣ ಸುದ್ದಿ ಮಾಡುತ್ತಿದೆ. ಖ್ಯಾತ ನಟ ನರೇಶ್ 3 ಹೆಂಡತಿಗೆ ಇನ್ನೂ ವಿಚ್ಛೇದನ ನೀಡಿಲ್ಲ. ಆದರೆ ರಾಖಿ ಕಟ್ಟಿಯಾದರೂ  ಪವಿತ್ರಾ ಲೋಕೇಶ್​ ಜೊತೆ ಸಂಬಂಧ ಮುಂದುವರೆಸುವುದಾಗಿ (Pavitra Lokesh- Naresh Marriage Gossip) ಚಾಲೆಂಜ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಹಿರಿಯ ಖ್ಯಾತ ಬರಹಗಾರ್ತಿ ರೇಖಾರಾಣಿ  ಅವರು ಫೇಸ್​ಬುಕ್​ನಲ್ಲಿ ಈ ಪ್ರಕರಣದ ಕುರಿತು ವಿವರವಾಗಿ ಬರೆದುಕೊಂಡಿದ್ದಾರೆ.  ಖ್ಯಾತ ಬರಹಗಾರ್ತಿ ರೇಖಾರಾಣಿ ಅವರು ಹಂಚಿಕೊಂಡ ಬರಹ ಇಲ್ಲಿದೆ. 


  ಸಿನೆಮಾ ಮಾಡಲು ಹೊರಗೆ ಕಥೆ ಹುಡುಕಬೇಕಿಲ್ಲ...ಒಳಗೇ ತಡಕಾಡಿದರೆ ರಾಶಿ ರಾಶಿ ಕಥೆ ಸಿಗುತ್ತದೆ. ಹಾಲಿವುಡ್ ನ Johnny Depp ಮತ್ತು Amber Heard ವಿವಾಹ ವಿಚ್ಛೇದನದ ಮಹಾನ್ ಪ್ರಹಸನ ಇತ್ತೀಚೆಗೆ ಇಡೀ ಪ್ರಪಂಚದ ಸಿನೆಮಾ ಆಸಕ್ತರ ಗಮನ ತನ್ನಡೆ ಸೆಳೆದುಕೊಂಡಿತ್ತು. ಏಕೆಂದರೆ Johnny ಯ ಮುಗ್ದತೆ, ಪ್ರಾಮಾಣಿಕತೆ ಮತ್ತು ಸರಳತೆ ಜಗತ್ತಿಗೆ ಎದ್ದುಕಾಣುವಂತಿತ್ತು. ಹಾಗೆಯೇ ಆತನ ಸುಂದರಿ ಪತ್ನ Amber Heard ಳ ವಿವಾಹೇತರ ಪ್ರೇಮಸಂಬಂಧಗಳು, ನಾಟಕಗಳು ಮತ್ತು ಸುಳ್ಳುಗಳು ಸಹಾ ದಿನೇದಿನೇ ಕಣ್ಣಿಗೆ ರಾಚತೊಡಗಿತ್ತು. ಇವರಿಬ್ಬರ ವಿವಾಹ ವಿಚ್ಛೇದನವಾಗಿ, ನಂತರ ತಾನು 'ಹೆಣ್ಣೆಂಬ ಅಸಹಾಯಕ ಬಲಿಪಶು' ಎಂಬ ಬಾಣ ಎಸೆದು, ಸುಳ್ಳುಕಥೆ ಹೆಣೆದು Amber ಜಾನಿಯ ಮಾನತೆಗೆದಳು. ಕೋರ್ಟಿನಲ್ಲಿ ಅವಳ ಬಗ್ಗೆ ಇದ್ದ ಅಲ್ಪಸ್ವಲ್ಪ ಕನಿಕರ ಕೂಡಾ ಕಲಾಪಗಳಲ್ಲಿ ಮಣ್ಣುಪಾಲಾಯ್ತು. ಜನರೆಲ್ಲಾ Johnny ಗೆ ಗೆಲುವಾಗಲಿ, Amberಳ ಸುಳ್ಳು ಸಾಕ್ಷಿಗಳಿಗೆ, ಹೆಣೆದ ಪೊಳ್ಳು ಕರುಣಾಜನಕ ಕಥೆಗಳಿಗೆ ಸೋಲಾಗಲಿ ಎಂದು ಪ್ರಾರ್ಥಿಸತೊಡಗಿದರು. ಪ್ರಾರ್ಥನೆ ಮುಟ್ಟಿ ಕೋರ್ಟಿನಲ್ಲಿ ಜಾನಿ ಗೆದ್ದ.


  ಅಬ್ಬಾ! ನಿಜಜೀವನದಲ್ಲಿ Amber ರೀತಿ ಕಪಟ, ಸುಳ್ಳು, ಮೋಸ ಮಾಡುವವರಿಗೆ ಒಳ್ಳೆಯ ಪಾಠ ಎಂದು ಜನ ನಿಟ್ಟುಸಿರುಬಿಟ್ಟರು.


  ದಕ್ಷಿಣ ಭಾರತದಲ್ಲಿ ಜಾನಿ ಡೆಫ್ ಪ್ರಕರಣ!
  ಆದರೆ...ಇಲ್ಲಾ! ಈಗ ನಮ್ಮ ಭಾರತದಲ್ಲಿ , ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ / ಆಂಧ್ರದ ಚಲನಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಕೇಸೊಂದು ನಡೆಯಲಿದೆ. ಅದೇ...ಅಲ್ಲಿ ಆಯ್ತಲ್ಲ...Johnny/ Amber...ಅದರ ಮತ್ತೊಂದು ರೂಪ ಬೇರೆ ಹೆಸರಲ್ಲಿ ಇಲ್ಲಿ ಅವತರಿಸಲಿದೆ.


  ನಾನು ಈ ವಿಷಯ ಬರೆಯಲು ಮುಖ್ಯ ಕಾರಣ ಮೊದಲನೆಯದಾಗಿ ಸುಚೇಂದ್ರ ಪ್ರಸಾದ್ ಎಂಬ ಸಜ್ಜನ ನಟ johnny Depp ರೂಪದಲ್ಲಿ ಅವನ ರೀತಿಯೇ ಅಸಹಾಯಕ ಸ್ಥಿತಿಯಲ್ಲಿದ್ದಾರೆ.


  ರಮ್ಯ ರಘುಪತಿ ಎಂಬ ನಮ್ಮ ಅಚ್ಚಕನ್ನಡದ ಹೆಣ್ಣುಮಗಳು
  ಎರಡನೆಯ ಮತ್ತು ಬಹುಮುಖ್ಯ ಕಾರಣ ಆ ತೆಲುಗು ನಟ ನರೇಶ್ ಎಂಬಾತ ಮದುವೆಯಾಗಿ, ಮೋಸಮಾಡುತ್ತಿರುವುದು ರಮ್ಯ ರಘುಪತಿ ಎಂಬ ನಮ್ಮ ಅಚ್ಚಕನ್ನಡದ ಹೆಣ್ಣುಮಗಳಿಗೆ!  ನೀವೆಲ್ಲಾ ಅಂದುಕೊಂಡಂತೆ, ಮಾಧ್ಯಮಗಳಲ್ಲಿ ಬಂದಿರುವಂತೆ ನರೇಶ್ ಮತ್ತು ರಮ್ಯ ರಘುಪತಿ ಇನ್ನೂ ವಿವಾಹ ವಿಚ್ಛೇದನೆ ಪಡೆದೇ ಇಲ್ಲ. ರಮ್ಯ ಇಂದಿಗೂ ನರೇಶ್ ಮನೆಯಲ್ಲಿಯೇ ಇದ್ದಾಳೆ!
  ಅತ್ತ ರಮ್ಯಳನ್ನು ಇತ್ತ ಸುಚೇಂದ್ರ ಪ್ರಸಾದ್ ಇಬ್ಬರನ್ನೂ ಒಟ್ಟಿಗೆ ತೊಲಗಿಸಲು ನರೇಶ್ ಇನ್ನಿಲ್ಲದ ಆಟಗಳನ್ನು ಕಟ್ಟುತ್ತಿದ್ದಾನೆ. ರಮ್ಯ ಎಂಬ ಅಮಾಯಕ ಹುಡುಗಿಯ ಮೇಲೆ ಇಲ್ಲಸಲ್ಲದ ಆರೋಪ ಹೊರಸಿ ಮಾಧ್ಯಮಗಳಲ್ಲಿ ಬಂದು ಆಕೆಯನ್ನು ಅಸಹಾಯಕಳನ್ನಾಗಿಸುವ ಕಾರ್ಯ ಸಮರ ಮಾಡಿದ್ದಾನೆ.
  ಏನೇ ಆದರೂ ಪವಿತ್ರಾಳನ್ನು ಮದುವೆ ಆಗುವುದಾಗಿ ನರೇಶ್ ಘೋಷಿಸಿದ್ದಾನೆ. ಒಂದುವೇಳೆ ಕೋರ್ಟಿನಲ್ಲಿ ಸೋತರೆ ಎಲ್ಲರೆದುರಿಗೆ ಆಕೆಯಿಂದ ರಾಖಿ ಕಟ್ಟಿಸಿಕೊಂಡು ತನ್ನ ಮನೆಯಲ್ಲಿಟ್ಟುಕೊಂಡು ಕಳ್ಳ ಸಂಸಾರ ಮುಂದುವರೆಸುವುದಾಗಿ ಛಾಲೆಂಜ್ ಮಾಡಿದ್ದಾನೆ.


  ಇದನ್ನೂ ಓದಿ: Pavitra Lokesh ಮದುವೆಯಾಗಿರುವ ಆ ನಟನ ಆಸ್ತಿ 6000 ಕೋಟಿಯಂತೆ! ಆತನಿಗೆ ಇದು ನಾಲ್ಕನೇ ಮದುವೆ


  ಮೂರೂ ಮದುವೆಗಳಿಂದ ಮುಕ್ತನಾಗಿದ್ದೇನೆ. ಆದ್ದರಿಂದ ಪವಿತ್ರಾಳನ್ನು ಮದುವೆಯಾಗುತ್ತೇನೆಂದು ತೆಲುಗು ಮಾಧ್ಯಮಗಳಲ್ಲಿ ಸುಳ್ಳು ಬರೆಸುತ್ತಿರುವ ಸುಳ್ಳು ಮುಖವೊಂದು ಇನ್ನು ಮುಂದೆ ಕೋರ್ಟಿನಲ್ಲಿ ಅನಾವರಣಗೊಳ್ಳಲಿದೆ. ಏಕೆಂದರೆ ನರೇಶ್ ಈಗ ಅಂದರೆ ಈಗಿರುವ ಮೂರನೆ ಪತ್ನಿ ರಮ್ಯ ರಘುಪತಿಗೆ ವಿವಾಹ ವಿಚ್ಛೇದನೆ ಕೋರಿ ಕೋರ್ಟಿಗೆ ಹೋಗಿದ್ದಾನೆ!!!!!


  ಇದನ್ನೂ ಓದಿ: Pavitra Lokesh Marriage: ಮಹೇಶ್ ಬಾಬು ಸಹೋದರನನ್ನು ಮದುವೆಯಾಗಿದ್ದರಂತೆ ಪವಿತ್ರಾ ಲೋಕೇಶ್


  ಇನ್ನು ಮುಂದೆ ನಡೆಯಲಿದೆ ಸಿನೆಮಾಗಿಂತಲೂ ವರ್ಣರಂಜಿತ ಪ್ರಹಸನ.
  ಸುಚೇಂದ್ರ ಪ್ರಸಾದ್ - ಪವಿತ್ರಾ ಲೋಕೇಶ್ ಕಥೆಯಲ್ಲಿ ಸುಚೇಂದ್ರ ಜಾನಿಯಾಗಿದ್ದಾರೆ. ನರೇಶ್ ಮತ್ತು ರಮ್ಯ ಕಥೆಯಲ್ಲಿ ರಮ್ಯ ಜಾನಿಯಾಗಿದ್ದಾಳೆ. Amber ಯಾರು ಅಂತ ಗೊತ್ತಾಯ್ತಲ್ಲ....ಇನ್ಯಾರು? ನರೇಶ್ ಮತ್ತು ಪವಿತ್ರಾ.


  ಅಷ್ಟಕ್ಕೂ  ವಾದ ವಿವಾದ, ವದಂತಿಗಳ ಕುರಿತು ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರೇ ಸ್ಪಷ್ಟನೆ ನೀಡಬೇಕಿರುವುದಂತೂ ಸತ್ಯ

  Published by:guruganesh bhat
  First published: