Pavitra Lokesh: ರಮ್ಯಾ ಯಾರಂತಾನೇ ಗೊತ್ತಿಲ್ಲಾ, ಅವ್ರು ಹೇಳ್ತಿರೋದೆಲ್ಲಾ ಬರಿ ಓಳು ಎಂದ ಪವಿತ್ರಾ ಲೋಕೇಶ್

ಪವಿತ್ರಾ ಲೋಕೇಶ್​ (Pavitra Lokesh) ಹಾಗೂ ನಟ ನರೇಶ್​ (Naresh) ಪ್ರಕರಣ ದಿನ್ಕಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪವಿತ್ರಾ ಲೋಕೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ನರೇಶ್​, ರಮ್ಯಾ, ಪವಿತ್ರ ಲೋಕೇಶ್​

ನರೇಶ್​, ರಮ್ಯಾ, ಪವಿತ್ರ ಲೋಕೇಶ್​

  • Share this:
ಪವಿತ್ರಾ ಲೋಕೇಶ್​ (Pavitra Lokesh) ಹಾಗೂ ನಟ ನರೇಶ್​ (Naresh) ಪ್ರಕರಣ ದಿನ್ಕಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಪವಿತ್ರಾ ಲೋಕೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ರಮ್ಯಾ (Ramya) ಮತ್ತು ನರೇಶ್ ಅವರ ಬಗ್ಗೆ ಪವಿತ್ರಾ ಲೋಕೇಶ್ ಅವರು ಮಾತನಾಡಿದ್ದಾರೆ. ನಾನೂ ಹಲವು ನಟರ ಜೊತೆ ಅಭಿನಯಿಸಿದ್ದೀನಿ ಹಾಗಂತ, ಎಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪವಿತ್ರಾ ಲೋಕೇಶ್​ ಅವರಿಗೆ ನರೇಶ್ ಅವರು ಪರಿಚಯ ಆದಾಗ ಅವರು ಒಬ್ಬರು ಸ್ಟಾರ್​ ಮಗ ಅನ್ನೋದೆ ನಂಗೆ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವನ್ನು ನೀಡಿದ್ದಾರೆ.

ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಪವಿತ್ರಾ ಲೋಕೇಶ್:

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪವಿತ್ರಾ ಲೋಕೇಶ್, ‘ನಾನೂ ಹಲವು ನಟರ ಜೊತೆ ಅಭಿನಯಿಸಿದ್ದೀನಿ ಹಾಗಂತ, ಎಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ. ಅಲ್ಲದೇ ಅವರು ಪರಿಚಯವಾದಾಗ ಅವರೊಬ್ಬರು ಸ್ಟಾರ್​ ಮಗ ಅನ್ನೋದೆ ನಂಗೆ ಗೊತ್ತಿರಲಿಲ್ಲ. ಆದರೆ ನಂತರದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುತ್ತಾ ನಾವು ಕ್ಲೋಸ್​ ಆದ್ವಿ. ಜೊತೆಗೆ ನಮ್ಮ ವಿಚಾರಗಳನ್ನು ಒಬ್ಬರಿಗೊಬ್ಬರು ಶೇರ್​ ಮಾಡಿಕೊಳ್ಳುತ್ತಿದ್ದೇವು.

ಈ ವೇಳೆ ನರೇಶ್​ ಅವರು ಮನೆಯಲ್ಲಿ ಯಾರು ಇಲ್ಲ ಎಂದು ನನ್ನ ಬಳಿ ಹೇಳಿದ್ದರು. ನರೇಶ್​ ತುಂಬಾ ಜನಪ್ರಿಯ ವ್ಯಕ್ತಿ. ಅವರು ಮಾ ಪ್ರೆಸಿಡೆಂಟ್ ಸಹ ಹೌದು. ಅವರು ಬೇರೆಯವರ ಸಮಸ್ಯೆ ಬಗೆಹರಿಸುವವರು, ಒಂದು ದೊಡ್ಡ ಸ್ಥಾನದಲ್ಲಿರೋ ವ್ಯಕ್ತಿ ಹೀಗೆಲ್ಲಾ ಮಾಡಲ್ಲ ಎಂದು ಹೇಳಿದ್ದಾರೆ. ಇದಲ್ಲದೇ ನರೇಶ್​ ನೂರಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ, ಅವ್ರೆಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ‘ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Pavitra Lokesh: ರಮ್ಯಾ-ಪವಿತ್ರಾ ಲೋಕೇಶ್ ಬಗ್ಗೆ ಕ್ಲ್ಯಾರಿಟಿ ಕೊಟ್ಟ ನರೇಶ್, ಮುಂದೇನು?

ನರೇಶ್ ಜೊತೆ ವಿವಾಹದ ಬಗ್ಗೆ ಪವಿತ್ರ ಲೋಕೇಶ್ ಮಾತು:

ನರೇಶ್​ ಪತ್ನಿ ಅಂದರೆ ಯಾರು ಸರ್, ನಂಗೆ ಅವರು ಯಾರು ಅಂತ ಗೊತ್ತೇ ಇಲ್ಲ. ಅಲ್ಲದೇ ನಾನಂತೂ ಅವರನ್ನು ನೋಡೇ ಇಲ್ಲ, ಅವರು ಹೇಳ್ತಿದಾರೆ ಹೆಂಡ್ತಿ ಅಂತ ಎಂದು ಹೇಳಿದ್ದಾರೆ. ಅನವಶ್ಯಕವಾಗಿ ನನ್ ಬಗ್ಗೆ ಆರೋಪ ಹೊರಿಸ್ತಾ ಇದ್ದಾರೆ. ನನಗೆ ಇದರ ಬಗ್ಗೆ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ ಎಂದಿದ್ದಾರೆ. ಅಲ್ಲದೇ ದುಡ್ಡಿಗಾಗಿ ಆಗಿದ್ದಿದ್ರೆ ನಾನು ಸುಚೇಂದ್ರ ಪ್ರಸಾದ್​ ಜೊತೆ ಇರ್ತಿರ್ಲಿಲ್ಲ . ನಾವಿಬ್ರೂ ಮದ್ವೆ ಆದಾಗ ಅವರ ಜೇಬಲ್ಲಿ ದುಡ್ಡಿರಲಿಲ್ಲ. ಮನೆ ಇರಲಿ ಕಾರು ಇರಲಿಲ್ಲ, ಹಾಗದ್ದರೆದ್ರೆ ನಾನ್ಯಾಕೆ ಅವರ ಜೊತೆಗಿದ್ದೆ, ಅದರಲ್ಲಿಯೂ 11 ವರ್ಷ ಜೊತೆಗೆ ಇದ್ದೆ.

ಆದರೆ ಇದೀಗ ಕಳೆದ 6 ವರ್ಷಗಳಿಂದ ನಾವು ಜೊತೆಗಿಲ್ಲ. ಹಣ ಮನುಷ್ಯನಿಗೆ ಬೇಕಲ್ವಾ, ಸಮಾಜದಲ್ಲಿ ಎಲ್ಲರ ಹಾಗೆ ಬದುಕಬೇಕಂದ್ರೆ ಹಣ ಬೇಕಲ್ವಾ ಎಂದಿದ್ದಾರೆ. ಇದೇನೇ ಪ್ರಕರಣವಾದರೂ ಸುಚೇಂದ್ರ ಪ್ರಸಾದ್​ ಒಳ್ಳೆಯ ಮನುಷ್ಯ. ನಮ್ಮಿಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್ ಯಾವಾಗ್ಲೂ ಇರುತ್ತೆ ಎನ್ನುವ ಮೂಲಕ ಹೊಸ ಟ್ವಿಸ್ಟ್​ ನೀಡಿದ್ದಾರೆ. ಇನ್ನು, ಈ ಪ್ರಕರಣಕ್ಕೆ ಸೋಷಿಯಲ್​ ಮೀಡಿಯಾ ವಿಚಾರವಾಗಿ ನಾನು ಸೈಬರ್ ಕ್ರೈಂಗೆ ಕಂಪ್ಲೆಂಟ್​ ಕೊಟ್ಟಿದೀನಿ‘ ಎಂದಿದ್ದಾರೆ.

ಇದನ್ನೂ ಓದಿ: Pavitra Lokesh: ರಮ್ಯಾ ರಘುಪತಿ ಎಂಬ ಕನ್ನಡದ ಹೆಣ್ಣುಮಗಳ ಸಂಸಾರ ಒಡೆಯಲು ಪವಿತ್ರಾ ಲೋಕೇಶ್ ಕಾರಣನಾ? ಯಾರು ಈ ರಮ್ಯಾ?

ಪವಿತ್ರಾ ಲೋಕೇಶ್ ನನ್ನ ನನ್ನ ಬೆಸ್ಟ್ ಫ್ರೆಂಡ್ ಎಂದ ನರೇಶ್:

ಸುದ್ದಿಗೋಷ್ಠಿಯಲ್ಲಿ ಪವಿತ್ರಾ ಲೋಕೇಶ್ ವಿಚಾರವಾಗಿ ಮಾತನಾಡಿದ ನಟ ನರೇಶ್, ‘ನಾನು ನನ್ನ ವಯಕ್ತಿಕ ವಿಚಾರವಾಗಿ ಮಾತನಾಡಲು ಬಂದಿದ್ದೇನೆ. ಇನ್ನು, ನಾನು ಪವಿತ್ರಾ ಲೋಕೇಶ್ ಜೊತೆ ನಾಲ್ಕು ವರ್ಷದ ಹಿಂದೆ ನಟಿಸಿದ್ದೇನೆ. ಆದರೆ ರಮ್ಯಾ ರಘುಪತಿಯನ್ನ ಹತ್ತು ವರ್ಷದ ಹಿಂದೆ ಮದುವೆ ಆಗಿರುವೆ. ಈಗಾಗಲೇ ರಮ್ಯಾ ರಘುಪತಿ ಬಗ್ಗೆ ಹೈದರಾಬಾದ್ ಸೇರಿದಂತೆ ಎಲ್ಲಡೆ ಸುದ್ದಿಗಳು ಬಂದಿದೆ. ಅವರು ತುಂಬಾ ಜನರಿಗೆ ಮೋಸ ಮಾಡಿದ್ದಾರೆ. ಅಲ್ಲದೇ ರಮ್ಯಾ ಅವರು ಮಾನಸಿಕವಾಗಿ ಸರಿಯಾಗಿಲ್ಲ. ಹೀಗಾಗಿ ನಾನು ರಮ್ಯಾ ಅವರಿಗೆ ಡಿವೋರ್ಸ್ ನೀಡಲು ನಿರ್ಧರಿಸಿದ್ದೇನೆ. ಪವಿತ್ರಾ ಲೋಕೇಶ್ ನನ್ನ ಸ್ನೇಹಿತೆ. ಆದರೆ ಇದೀಗ ಪವಿತ್ರಾ ಅವರು ಈ ಪ್ರಕರಣದಿಂದ ಡಿಪ್ರೆಶನ್ ಗೆ ಹೋಗಿದ್ದಾರೆ. ನಾನು ಮನುಷ್ಯ ನನಗೂ ಭಾವನೆ ಇದೆ‘ ಎಂದು ಹೇಳಿದ್ದಾರೆ.
Published by:shrikrishna bhat
First published: