Pavitra Lokesh Marriage: ನಟಿ ಪವಿತ್ರಾ ಲೋಕೇಶ್-ನಟ ನರೇಶ್ ಮದುವೆ; ಹೊರಬಿತ್ತು ಸ್ಪಷ್ಟನೆ

ನಟಿ ಪವಿತ್ರಾ ಲೋಕೇಶ್

ನಟಿ ಪವಿತ್ರಾ ಲೋಕೇಶ್

ನಟ ನರೇಶ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಪವಿತ್ರಾ ಲೋಕೇಶ್​ರನ್ನು ಮದುವೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಅವರು ಈಕುರಿತು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

  • Share this:

    ನಟಿ ಪವಿತ್ರಾ ಲೋಕೇಶ್ ತೆಲುಗು ಪ್ರಸಿದ್ಧ ನಟ ನರೇಶ್ ಅವರನ್ನು ಮದುವೆಯಾಗಿದ್ದಾರೆ (Pavitra Lokesh Naresh Marriage) ಎಂಬ ವದಂತಿ ಬೆನ್ನಲ್ಲೇ ಪವಿತ್ರಾ ಲೋಕೇಶ್ ತಮ್ಮ ಆದಿ ಲೋಕೇಶ್ (Adi Lokesh)  ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸಹೋದರಿ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರೆ ಎಂಬ ವಿಷಯವನ್ನು ಅವರು ಅಲ್ಲಗಳೆದಿದ್ದಾರೆ. ಇಂತಹ ವಿಷಯಗಳ ಕುರಿತು ಮಾತನಾಡಲು ಬಯಸುವುದಿಲ್ಲ ಎಂದಿರುವ ಅವರು ಈ ವಿಷಯದ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.  ಅಲ್ಲದೇ, ನಟ ನರೇಶ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಸಹ ಈ ಮದುವೆ ಕುರಿತು ಸ್ಪಷ್ಟನೆ ನೀಡಿದ್ದಾರೆ.


    ನರೇಶ್ ಅವರು ಪವಿತ್ರಾ ಲೋಕೇಶ್​ರನ್ನು ಮದುವೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಅವರು ಈಕುರಿತು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಕುರಿತು ಏಷ್ಯಾನೆಟ್ ಸುವರ್ಣಾ ನ್ಯೂಸ್ ವರದಿ ಮಾಡಿದ್ದು ಮದುವೆ ಬಗ್ಗೆ ಸ್ಪಷ್ಟನೆ ದೊರೆತಂತಾಗಿದೆ.


    ವದಂತಿಗಳಿಗೆ ತೆರೆ
    ಒಟ್ಟಿನಲ್ಲಿ ಈ ಮದುವೆ ವಿಚಾರ ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಪವಿತ್ರಾ ಲೋಕೇಶ್​ ಆಗಲಿ ಈಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ತೆಲುಗು ಮಾಧ್ಯಮಗಳಲ್ಲಿಈ ಬಗ್ಗೆ ಸುದ್ದಿ ಪ್ರಸಾರವಾಗಿತ್ತು.  ಆದರೆ ಸದ್ಯ ಈ ವದಂತಿಗಳಿಗೆ ನಟ ನರೇಶ್ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.


    ಬಹುಭಾಷೆಯ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
    ಕನ್ನಡದ ಹಲವು ಸಿನಿಮಾಗಳಲ್ಲೂ ಪವಿತ್ರಾ ಲೋಕೇಶ್ ನಟಿಸುತ್ತಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಯ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2006ರಲ್ಲಿ ತೆರೆಕಂಡ ಕನ್ನಡದ ನಾಯಿ ನೆರಳು ಸಿನಿಮಾದ ಅಭಿನಯಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿದೆ. ತೆಲುಗಿನಲ್ಲೂ ಪ್ರತಿಷ್ಠಿತ ಪ್ರಶಸ್ತಿಗಳು ಪವಿತ್ರಾ ಲೋಕೇಶ್ ಮುಡಿಗೇರಿವೆ.


    2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್​ ವಿವಾಹವಾಗಿದ್ದರು. ಸುಚೇಂದ್ರ ಪ್ರಸಾದ್​ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತಿದೆ. ಅಪ್ಪಟ ಕನ್ನಡದ ನಟ ಸುಚೇಂದ್ರ ಪ್ರಸಾದ್​. ಸ್ಪಷ್ಟವಾಗಿ ಕನ್ನಡ ಮಾತನಾಡಿ ನಟಿಸುವವರು ಯಾರಾದರೂ ಇದ್ದಾರೆ ಅಂದರೆ ಅದು ಸುಚೇಂದ್ರ ಪ್ರಸಾದ್


    ಇದನ್ನೂ ಓದಿ: Pavitra Lokesh: ಪವಿತ್ರಾ ಲೋಕೇಶ್‌ಗೆ ಸೌಂದರ್ಯ, ಪ್ರತಿಭೆ ಇದ್ದರೂ ಅಂದು ಸಿಗಲಿಲ್ಲ ಅವಕಾಶ! ಇಂದು ಪರಭಾಷೆಯಲ್ಲಿ ಇವರೇ ಸ್ಟಾರ್ ಅಮ್ಮ!


    ಯಾರು ಈ ನರೇಶ್​? ಅವರ ಹಿನ್ನೆಲೆ ಏನು?
    ಟಾಲಿವುಡ್​ ಸೂಪರ್​ ಸ್ಟಾರ್​ ಕೃಷ್ಣ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮಹೇಶ್​ ಬಾಬು ಅವರ ತಂದೆ ಕೃಷ್ಣ ಒಂದಾನೊಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದವರು. ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್​. ಕೃಷ್ಣ ಅವರ ಮೊದಲನೇ ಹೆಂಡತಿ ಹೆಸರು ಇಂದಿರಾ ದೇವಿ. ಕೃಷ್ಣ ಅವರ ಎರಡನೇ ಹೆಂಡತಿ ಹೆಸರು ವಿಜಯ ನಿರ್ಮಲ. ವಿಜಯ ನಿರ್ಮಲ ಅವರ ಮಗನೇ ನರೇಶ್​.


    ಇದನ್ನೂ ಓದಿ: Actor Diganth: ಸೈಕ್ಲಿಂಗ್​​, ಸರ್ಫಿಂಗ್​​, ಟ್ರಕ್ಕಿಂಗ್ ದೂದ್​ಪೇಡಾ ದಿಗಂತ್​ ಇಷ್ಟ-ಕಷ್ಟಗಳು ಇವಂತೆ


    ನೀವೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನರೇಶ್​ ಅವರನ್ನು ನೋಡಿದ್ದೀರಾ. ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ ನರೇಶ್​​. ನರೇಶ್​ ತಾಯಿ ಅಂದರೆ ವಿಜಯ ನಿರ್ಮಲಾ ಹಾಗೂ ಅವರ ಮೊದಲ ಕೆ.ಎಸ್​​.ಮೂರ್ತಿ ಅವರ ಮಗ ನರೇಶ್​, ಕೆ.ಎಸ್​ ಮೂರ್ತಿ ಅವರ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು.

    Published by:guruganesh bhat
    First published: