Pavitra Lokesh: ರಮ್ಯಾ-ಪವಿತ್ರಾ ಲೋಕೇಶ್ ಬಗ್ಗೆ ಕ್ಲ್ಯಾರಿಟಿ ಕೊಟ್ಟ ನರೇಶ್, ಮುಂದೇನು?
ನರೇಶ್ ಲಾಯರ್ ಸಮೇತ ಸುದ್ದಿಗೋಷ್ಠಿ ನಡೆಸಿದ್ದು, ಪವಿತ್ರಾ ಲೊಕೇಶ್ ಹಾಗೂ ತಮ್ಮ ನಡುವಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಅಲ್ಲದೇ ರಮ್ಯಾ ಅವರಿಗೆ ಡಿವೋರ್ಸ್ ನೀಡುವುದಾಗಿ ಹೇಳಿದ್ದು, ಅನೇಕ ವಿಚಾರಗಳನ್ನು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನಟ ನರೇಶ್ (Naresh) ಪ್ರಕರಣ ದಿನ್ಕಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದರ ನಡುವೆ ನಟ ನರೇಶ್ ತಮ್ಮ ಮಾಜಿ ಪತ್ನಿ, ಮೂರನೇ ಹೆಂಡ್ತಿಯನ್ನೇ ದೊಡ್ಡ ಫ್ರಾಡ್ ಎಂದಿದ್ದು, 100ಕ್ಕೂ ಹೆಚ್ಚು ಮಂದಿಗೆ ರಮ್ಯಾ (Ramya) ಚೀಟ್ ಮಾಡಿದ್ದಾಳೆ. ನನ್ನ ಹತ್ತಿರ ಎಲ್ಲಾ ಪ್ರೂಫ್ ಇದೆ ಎಂದಿದ್ದರು. ಇದೀಗ ಅವರು ಈ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದಾರೆ. ಅಲ್ಲದೇ ನರೇಶ್ ಲಾಯರ್ ಸಮೇತ ಸುದ್ದಿಗೋಷ್ಠಿ ನಡೆಸಿದ್ದು, ಪವಿತ್ರಾ ಲೊಕೇಶ್ ಹಾಗೂ ತಮ್ಮ ನಡುವಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಅಲ್ಲದೇ ರಮ್ಯಾ ಅವರಿಗೆ ಡಿವೋರ್ಸ್ ನೀಡುವುದಾಗಿ ಹೇಳಿದ್ದು, ಅನೇಕ ವಿಚಾರಗಳನ್ನು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಪವಿತ್ರಾ ಲೋಕೇಶ್ ನನ್ನ ನನ್ನ ಬೆಸ್ಟ್ ಫ್ರೆಂಡ್:
ಸುದ್ದಿಗೋಷ್ಠಿಯಲ್ಲಿ ಪವಿತ್ರಾ ಲೋಕೇಶ್ ವಿಚಾರವಾಗಿ ಮಾತನಾಡಿದ ನಟ ನರೇಶ್, ‘ನಾನು ನನ್ನ ವಯಕ್ತಿಕ ವಿಚಾರವಾಗಿ ಮಾತನಾಡಲು ಬಂದಿದ್ದೇನೆ. ಇನ್ನು, ನಾನು ಪವಿತ್ರಾ ಲೋಕೇಶ್ ಜೊತೆ ನಾಲ್ಕು ವರ್ಷದ ಹಿಂದೆ ನಟಿಸಿದ್ದೇನೆ. ಆದರೆ ರಮ್ಯಾ ರಘುಪತಿಯನ್ನ ಹತ್ತು ವರ್ಷದ ಹಿಂದೆ ಮದುವೆ ಆಗಿರುವೆ. ಈಗಾಗಲೇ ರಮ್ಯಾ ರಘುಪತಿ ಬಗ್ಗೆ ಹೈದರಾಬಾದ್ ಸೇರಿದಂತೆ ಎಲ್ಲಡೆ ಸುದ್ದಿಗಳು ಬಂದಿದೆ. ಅವರು ತುಂಬಾ ಜನರಿಗೆ ಮೋಸ ಮಾಡಿದ್ದಾರೆ. ಅಲ್ಲದೇ ರಮ್ಯಾ ಅವರು ಮಾನಸಿಕವಾಗಿ ಸರಿಯಾಗಿಲ್ಲ. ಹೀಗಾಗಿ ನಾನು ರಮ್ಯಾ ಅವರಿಗೆ ಡಿವೋರ್ಸ್ ನೀಡಲು ನಿರ್ಧರಿಸಿದ್ದೇನೆ. ಪವಿತ್ರಾ ಲೋಕೇಶ್ ನನ್ನ ಸ್ನೇಹಿತೆ. ಆದರೆ ಇದೀಗ ಪವಿತ್ರಾ ಅವರು ಈ ಪ್ರಕರಣದಿಂದ ಡಿಪ್ರೆಶನ್ ಗೆ ಹೋಗಿದ್ದಾರೆ. ನಾನು ಮನುಷ್ಯ ನನಗೂ ಭಾವನೆ ಇದೆ‘ ಎಂದು ಹೇಳಿದ್ದಾರೆ.
ಮೂರನೇ ಮದುವೆ ಆಗಿ ತಪ್ಪು ಮಾಡಿದೆ:
ಇನ್ನು, ಮುಂದುವರೆದು ಮಾತನಾಡಿರುವ ಅವರು, ‘ನಮ್ಮ ಮನೆ ಮೇಲೆ ಈಗಾಗಲೇ ಅಟ್ಯಾಕ್ ಮಾಡಲಾಗಿದೆ. ಇದರ ಬಗ್ಗೆ ಕಂಪ್ಲೇಟ್ ಸಹ ಕೊಟ್ಟಿದ್ದೇವೆ. ಇದರ ಜೊತೆಗೆ ಈ ಪ್ರಕರಣ ಹೊರ ಬಂದ ಬಳಿಕ ನನ್ನ ಫೋನ್ ಅನ್ನ ಟ್ರ್ಯಾಪ್ ಮಾಡಲಾಗಿತ್ತು ಎಂದಿದ್ದು, ಮದುವೆ, ಡಿವೋರ್ಸ್ ಗಳು ಸೆಲೆಬ್ರೇಷನ್ ಅಲ್ಲ ಎಂದು ಹೇಳಿದ್ದಾರೆ. ಇನ್ನು, ನಾನು ಎರಡನೇ ಮದುವೆ ಲವ್ ಮ್ಯಾರೇಜ್ ಮಾಡಿಕೊಂಡೆ ಅವರು ನನ್ನ ಬಾಲ್ಯದ ಗೆಳೆತಿ ಆಗಿದ್ದರು. ಆದರೆ ನಾನು ಮೂರನೇ ಮದುವೆ ಆಗಿ ತಪ್ಪು ಮಾಡಿದೆ. ಪವಿತ್ರಾ ಲೋಕೇಶ್ ರಮ್ಯಾ ಅವರ ಸೀರೆ ಚಿನ್ನವನ್ನ ತಗೋಂಡು ಹೋದರು ಎಂದು ಅವರು ಆರೋಪಿಸಿದ್ದಾರೆ. ಆದರೆ ನಾನು ರಮ್ಯಾ ರಘುಪತಿ ಅವರನ್ನ ಮದುವೆ ಆಗುವಾಗ ಯಾವ ಡೌರಿಯನ್ನು ಪಡೆದಿಲ್ಲ ಮತ್ತೆ ಹೇಗೆ ಅವರು ಅವುಗಳನ್ನು ತೆಗೆದುಕೊಂಡು ಹೋಗ್ತಾರೆ ಎಂದು ಪ್ರಶ್ನಿಸಿದರು.
ಇನ್ನು, ನಾನು ಪವಿತ್ರ 6 ಸಿನಿಮಾದಲ್ಲಿ ನಟಿಸಿದ್ದೇನೆ. ಅವರ ಜೊತೆ ಹಲವು ಭಾರಿ ನನ್ಮ ಇಡೀ ಕುಟುಂಬ ಸೇರಿ ಕಾರ್ಯಕ್ರಮ ಮಾಡಿದ್ದೇವೆ. ಆದರೆ ಈ ವೇಳೆ ರಮ್ಯಾ ರಘುಪತಿ ಎಂದಿಗೂ ಬರುತ್ತಿರಲಿಲ್ಲ. ಪವಿತ್ರಾ ಅವರು ನನ್ನ ಸ್ನೇಹಿತೆ. ಅವರು ದೀಪಾವಳಿ ಹಬ್ಬ ಆಚರಿಸಿದ್ದು ಹೌದು ಇಡೀ ಫ್ಯಾಮಿಲಿ ಸೇರಿ ದೀಪಾವಳಿ ಆಚರಿಸೊದ್ದೇವೆ ಎಂದಿದ್ದಾರೆ. ಇನ್ನು ನಾನು ಡಿವೋರ್ಸ್ ಕೊಡುತ್ತಿರುವುದನ್ನು ಪವಿತ್ರಾ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ. ಇದು ನನ್ನ ನಿರ್ಧಾರ. ಆದರೆ ಪವಿತ್ರಾ ಲೋಕೇಶ್ ಡಿವೋರ್ಸ್ ಬಗ್ಗೆ ನನಗೆ ಗೊತ್ತಿಲ್ಲ‘ ಎಂದು ಹೇಳಿದ್ದಾರೆ.
ಮಾಜಿ ಪತ್ನಿ, ಮೂರನೇ ಹೆಂಡ್ತಿಯನ್ನೇ ನಟ ನರೇಶ್ ಬಿಗ್ ಫ್ರಾಡ್ ಎಂದಿದ್ದು, 100ಕ್ಕೂ ಹೆಚ್ಚು ಜನರಿಗೆ ರಮ್ಯಾ ಮೋಸ ಮಾಡಿದ್ದಾಳೆ. ನನ್ನ ಹತ್ತಿರ ಎಲ್ಲಾ ಪುರಾವೆಗಳಿವೆ. ಎಲ್ಲವನ್ನೂ ಮಾಧ್ಯಮಗಳಿಗೆ ನೀಡುತ್ತೇನೆ ಎಂದಿದ್ದರು. ಇನ್ನು ರಮ್ಯಾ ನಮ್ಮ ಕುಟುಂಬಕ್ಕೆ ಬಹಳ ಕಿರುಕುಳ ಕೊಟ್ಟಿದ್ದಾಳೆ. ಮಗನ ಮುಖ ನೋಡ್ಕೊಂಡು ಸುಮ್ಮನಿದ್ದೇನೆ. ನನಗೆ ನ್ಯಾಯ ಬೇಕು ಅದಕ್ಕಾಗಿ ಹೋರಾಡ್ತೀನಿ. ನನ್ನ ಲೈಫ್ ಥ್ರೆಟ್ ನಲ್ಲಿದೆ, ರಮ್ಯಾರಿಂದ ಬೆದರಿಕೆ ಇದೆ ನನಗೆ ಕರ್ನಾಟಕಕ್ಕೆ ಬಂದಿರೋದು ಕ್ಲ್ಯಾರಿಟಿ ಕೊಡಲಿಕ್ಕೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ