Pavan Wadeyar: ಹೆಂಡತಿ ಜೊತೆ ಗಲ್ಲಿ ಕ್ರಿಕೆಟ್​ ಆಡುತ್ತಾ... ಟ್ರ್ಯಾಕ್ಟರ್​ ಚಾಲನೆ ಮಾಡುತ್ತಾ ಕಾಲ ಕಳೆಯುತ್ತಿರುವ ಪವನ್​ ಒಡೆಯರ್​..!

ಇನ್ನು, ಮಡದಿ ಜೊತೆ ಪವನ್​ ಒಡೆಯರ್​ ಗಲ್ಲಿ ಕ್ರಿಕೆಟ್​ ಆಡುತ್ತಿದ್ದು, ಅದರ ವಿಡಿಯೋವನ್ನು ನಿರ್ದೇಶಕ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಗರ್ಭಿಣಿ ಅಪೇಕ್ಷಾ ಸಿಕ್ಸರ್​ ಬಾರಿಸುತ್ತಿದ್ದಾರೆ.

ನಿರ್ದೇಶಕ ಪವನ್​ ಒಡೆಯರ್​ ಹಾಗೂ ಅಪೇಕ್ಷಾ ಪುರೋಹಿತ್​ ದಂಪತಿ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಿರ್ದೇಶಕ ಪವನ್​ ಒಡೆಯರ್​ ಹಾಗೂ ಅಪೇಕ್ಷಾ ಪುರೋಹಿತ್​ ದಂಪತಿ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  • Share this:
ಸ್ಯಾಂಡಲ್​ವುಡ್​ನ ಯುವ ನಿರ್ದೇಶಕ ಪವನ್​ ಒಡೆಯರ್ ಲಾಕ್​ಡೌನ್​ನಲ್ಲಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಇದಾದ ನಂತರ ಮನೆಯಲ್ಲಿ ಮಡದಿ ಜೊತೆ ಕಾಲಕಳೆಯುತ್ತಿದ್ದರು. ಅಲ್ಲದೆ​ ಇತ್ತೀಚೆಗಷ್ಟೆ ಅಪ್ಪನಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಕತಾಣದಲ್ಲಿ ಹಂಚಿಕೊಂಡಿದ್ದರು. ಅವರ ಮಡದಿಯ ಬೇಬಿ ಬಂಪ್​ ಕಾಣುವ ಫೋಟೋಶೂಟ್​ ಮಾಡಿಸಿದ್ದು, ಅದರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಅಲ್ಲದೆ ಈ ಗ ಮಡದಿಯ ಜೊತೆ ಅತ್ತೆ ಮನೆ ಹೋಗಿರುವ ನಿರ್ದೇಶಕ ಅಲ್ಲಿ ಪತ್ನಿ ಅಪೇಕ್ಷಾ ಪುರೋಹಿತ್​ ಅವರ ಸೀಮಂತದಲ್ಲಿ ಭಾಗಿಯಾಗಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಅಪೇಕ್ಷಾ ಅವರ ಸೀಮಂತ ನಡೆದಿದ್ದು, ಅದರ ಫೋಟೋಗಳನ್ನು ಪವನ್​ ಒಡೆಯರ್​ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅಪೇಕ್ಷಾ ಪುರೋಹಿತ್​ ಉತ್ತರ ಕರ್ನಾಟಕದವರಾದ ಕಾರಣಕ್ಕೆ ಅವರ ಸೀಮಂತವನ್ನೂ ಅದೇ ಶೈಲಿಯಲ್ಲೇ ಮಾಡಲಾಗಿದೆ. 

ಇನ್ನು, ಮಡದಿ ಜೊತೆ ಪವನ್​ ಒಡೆಯರ್​ ಗಲ್ಲಿ ಕ್ರಿಕೆಟ್​ ಆಡುತ್ತಿದ್ದು, ಅದರ ವಿಡಿಯೋವನ್ನು ನಿರ್ದೇಶಕ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಗರ್ಭಿಣಿ ಅಪೇಕ್ಷಾ ಸಿಕ್ಸರ್​ ಬಾರಿಸುತ್ತಿದ್ದಾರೆ.








View this post on Instagram





Its a SIXXXXXXX 🤩 @apekshapurohit @icc


A post shared by Pavan wadeyar (@pavanwadeyar) on






ಈ ವಿಡಿಯೋ ನೋಡಿದ ಅಭಿಮಾನಿಗಳು ಇದನ್ನು ಐಪಿಎಲ್​ಗೆ ಹೋಲಿಸಿ ಟ್ವೀಟ್​ ಮಾಡುತ್ತಿದ್ದಾರೆ.



ಇನ್ನು, ಮಣ್ಣಿನ ಮಗನಾಗಿ ಹಳ್ಳಿಯಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಟ್ಯಾಕ್ಟರ್​ ಚಾಲನೆ ಮಾಡಿದ್ದಾರೆ. ಜಗತ್ತಿನಲ್ಲಿ ಇದು ಅತಿ ಶ್ರೇಷ್ಠ ಕೆಲಸ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.






View this post on Instagram





World's best Job🙏


A post shared by Pavan wadeyar (@pavanwadeyar) on






ಇನ್ನು, ಪವನ್​ ಒಡೆಯರ್​ ಅವರ ಸಿನಿಮಾ ವಿಷಯಕ್ಕೆ ಬಂದರೆ, ಪುನೀತ್​ ಅವರೊಂದಿಗೆ ನಟಸರ್ವಭೌಮ ಚಿತ್ರ ಮಾಡಿದ ನಂತರ ರೆಮೋ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಕೊನೆಯ ಹಂತದ ಶೂಟಿಂಗ್​ ಹಾಗೂ ಪೋಸ್ಟ್​ ಪ್ರೊಕ್ಷನ್​ ಕೆಲಸಗಳು ಮಾತ್ರ ಬಾಕಿ ಉಳಿದಿವೆ.
Published by:Anitha E
First published: